News Karnataka Kannada
Tuesday, April 30 2024
ಚಿಕಮಗಳೂರು

ಶ್ರೀರಾಮನವಮಿ ಸಂಭ್ರಮ : ಹಿರೇಮಗಳೂರಿನಲ್ಲಿ ರಾಮನಾಮ ಸ್ಮರಣೆ

Sri Rama Navami celebrations: Rama's name commemorated in Hiremagalur
Photo Credit : News Kannada

ಚಿಕ್ಕಮಗಳೂರು : ಶ್ರೀರಾಮ ನವಮಿ ಅಂಗವಾಗಿ ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಬೆಳಗ್ಗೆ ಸುಪ್ರಬಾತ ಸೇವೆ, ಲೋಕಕಲ್ಯಾಣಾರ್ಥವಾಗಿಕನ್ನಡದಲ್ಲಿ ಸಂಕಲ್ಪ, ಶ್ರೀ ಸೀತಾರಾಮಚಂದ್ರ ಮೂರ್ತಿಗೆ ಪಂಚಾಮೃತಅಭಿಷೇಕದೊಂದಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ಶಾಸಕ ಸಿ.ಟಿ.ರವಿ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರಸ್ವಾಮಿದೇವಾಲಯ ಸೇರಿದಂತೆ ನಗರದ ವಿವಿಧ ದೇವಾಲಯಗಳಿಗೆ ಬೇಟಿ ನೀಡಿರಾಮನದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಬೆಳಗ್ಗೆ ವಿವಿಧಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರೀರಾಮಚಂದ್ರನಿಗೆ ಪಂಚಾಮೃತಅಭಿಷೇಕ ನೆರವೇರಿಸಿ ಜನಸೇವೆಯೇಜನಾರ್ಧನ ಸೇವೆ, ಮಾನವನ ಸೇವೆಯೇ ಮಾದವನ ಸೇವೆ, ದೇಶ ಸೇವೆಯೇ ಈಶ ಸೇವೆಯಂತೆಎಲ್ಲೆಡೆ ನಡೆಯಬೇಕು. ತಿಂಗಳಲ್ಲಿ ಒಂದು ದಿವಸ ದೇವಾಲಯಗಳ ಪ್ರಾಕಾರವನ್ನು ಸ್ವಚ್ಚತೆಗೊಳಿಸುವ ಸಂಕಲ್ಪವನ್ನು ಭಜನಾ ಮಂಡಳಿಯ ನೂರಾರು ಭಕ್ತರು ಶ್ರೀರಾಮನವಮಿಯಂದು ಮಾಡಿದ್ದು ವಿಶೇಷ. ದೇವಾಲಯದ ವ್ಯವಸ್ಥಾಪನಾ ಮಂಡಳಿ ಪ್ರಸಾದ ವ್ಯವಸ್ಥೆ ಮಾಡಿದ್ದು ವಿವಿದೆಡೆಯಿಂದ ಭಕ್ತರು ಆಗಮಿಸಿ ಶ್ರೀರಾಮ ಕೃಪೆಗೆ ಪಾತ್ರರಾಗಿದ್ದಾರೆಎಂದರು.

ಸಿ.ಟಿ.ರವಿ ಮಾತನಾಡಿ, ಮರ್ಯಾದ ಪುರುಶೋತ್ತಮಎಂದುಕರೆಯವ ಶ್ರೀರಾಮ ಭಾರತದ ಪ್ರಾಚೀನ ಸಂಸ್ಕೃತಿಯ ಪ್ರತೀಕ, ಅವರಿಗೆ ಸರಿ ಸಮಾನವಾಗಿ ವ್ಯಕ್ತಿತ್ವಇರುವಇನ್ನೊರ್ವ ವ್ಯಕ್ತಿಯನ್ನು ನೋಡಲು ಸಾಧ್ಯವಿಲ್ಲ. ವ್ಯಕ್ತಿಗಳಲ್ಲಿ ದೋಶ ಹುಡುಕಬಹುದುಆದರೆ ಶ್ರೀರಾಮ ಪರಿಪೂರ್ಣ ವ್ಯಕ್ತಿಅಂತಹವರಲ್ಲಿದೋಶ ಹುಡುಕಲು ಸಾಧ್ಯವಿಲ್ಲ. ದೇಶ ಭಕ್ತಿಯ ವಿಷಯದಲ್ಲಿ ನೋಡಿದಾಗ ಸ್ವರ್ಣಮಯವಾದ ಲಂಕೆಯನ್ನು ಹೆತ್ತತಾಯಿ ಮತ್ತು ಹೊತ್ತತಾಯಿ ಇವುಗಳಿಗೆ ಮಿಗಿಲಾಗಿರುವುದುಇನ್ನೊಂದಿಲ್ಲ ಎಂದುಲಂಕೆಯಿಂದಅಯೋಧ್ಯೆಗೆ ಬಂದಂತವರು. ಪ್ರಜಾಪ್ರಭುತ್ವದಲ್ಲಿಇಂದು ಏನು ನೋಡುತ್ತಿದ್ದೇವೆಅದಕ್ಕಿಂತ ಮಿಗಿಲಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನುತನ್ನಕಾಲದರಾಜಪ್ರಭುತ್ವದ ಆಡಳಿತದಲ್ಲಿ ತಂದಿದ್ದು ರಾಮನ ಉದಾಹರಣೆ. ಅಗಸನ ಮಾತಿಗೂಯಾವರೀತಿ ಮನ್ನಣೆ ನೀಡಿದ್ದರುಎಂಬುದಕ್ಕೆ ನಿದರ್ಶನ. ಅಂತಹರಾಮನ ಮಂದಿರದ ನಿಮಾರ್ಣದಕಾರ್ಯಜನ್ಮಭೂಮಿಯಲ್ಲಿಆಗುತ್ತಿದೆ. ವರ್ಷದೊಳಗೆ ಲೋಕಾರ್ಪಣೆಗೊಳ್ಳುತ್ತದೆ. ಆ ಮೂಲಕ ಭಾರತದ ಪ್ರಾಚೀನ ಸಂಸ್ಕೃತಿಯ ಪುರುತ್ಥಾನದಕಾರ್ಯಕ್ಕೆ ಮೇರು ಕಳಶವಿಟ್ಟಂತೆ ಕಾರ್ಯವಾಗುತ್ತಿದೆ. ಭಾರತ ವಿಶ್ವಗುರುವಾಗಲು ನಮ್ಮದೇಶದ ಬಡತನ, ಮೇಲುಕೀಳು ದೂರಾಗಬೇಕು, ಜಾತಿ ಬೇಧಗಳಿಲ್ಲದ ಸುಸೀಕ್ಷಿತ, ಜ್ಞಾನಿಗಳಾಗಿರುವ ಸರ್ವರ ಹಿತ ಭಯಸುವ ಸಂಮೃದ್ದಶಾಲಿಗಳಾಗಿರುವ ಶ್ರೀಮಂತವಾಗಿರುವ ಭಾರತವಾದಾಗ ಮಾತ್ರಜಗತ್ತಿಗೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಬಂದು ವಿಶ್ವಗುರುವಾಗುತ್ತದೆಅಮೃತಕಾಲದಲ್ಲಿಅದನ್ನು ನೋಡುವ ಸೌಭಾಗ್ಯ ನಮ್ಮೆಲ್ಲರದಾಗಲಿ ಅದಕ್ಕೆ ಶ್ರೀರಾಮನ ಆಶೀರ್ವಾದ ವಿರಲಿ ಎಂದರು.

ಬಂದಂತ ಭಕ್ತರಿಗೆ ನಂತರ ತೀರ್ಥ ಪ್ರಸಾದ ವಿತರಿಸಲಾಯಿತು. ಸಫಾಯಿ ಕರ್ಮಾಚಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಹಿರೇಮಗಳೂರು ಕೇಶವ, ಅರ್ಚಕರಾದ ವೈಷ್ಣವಸಿಂಹ, ಮೋಹನ್, ಅನಂತಶರ್ಮ, ನರಸಿಂಹ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು