News Karnataka Kannada
Tuesday, April 30 2024
ಚಿಕಮಗಳೂರು

ಕಾಡು ಗಿಳಿಗಳನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು

ಹಾಂದಿ ಅಂಚೆ, ಮಾಚಗೊಂಡನಹಳ್ಳಿ ಇಂದಿರಾನಗರದ ಆರೋಪಿ ಉಮೇಶ್. ಎಂ.ಸಿ ಬಿನ್ ಲೇ/ ಚನ್ನಶೆಟ್ಟಿ, 56, ವರ್ಷ, ಇವರ ವಾಸದ ಮನೆಯ ಕಾಂಪೌಂಡ್ ಒಳಗೆ ಇರುವ ಶೆಡ್‌ನಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಎರಡು ಜೀವಂತ ಕಾಡು ಗಿಳಿಗಳನ್ನು 02 ಪಂಜರಗಳಲ್ಲಿ ಪ್ರತ್ಯೇಕವಾಗಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಸಾಕುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಎರಡು ಕಾಡು ಗಿಳಿಗಳನ್ನು ವಶಕ್ಕೆ ಪಡೆಯಲಾಗಿದೆ.
Photo Credit : NewsKarnataka

ಚಿಕ್ಕಮಗಳೂರು: ಹಾಂದಿ ಅಂಚೆ, ಮಾಚಗೊಂಡನಹಳ್ಳಿ ಇಂದಿರಾನಗರದ ಆರೋಪಿ ಉಮೇಶ್. ಎಂ.ಸಿ ಬಿನ್ ಲೇ/ ಚನ್ನಶೆಟ್ಟಿ, 56, ವರ್ಷ, ಇವರ ವಾಸದ ಮನೆಯ ಕಾಂಪೌಂಡ್ ಒಳಗೆ ಇರುವ ಶೆಡ್‌ನಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಎರಡು ಜೀವಂತ ಕಾಡು ಗಿಳಿಗಳನ್ನು 02 ಪಂಜರಗಳಲ್ಲಿ ಪ್ರತ್ಯೇಕವಾಗಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಸಾಕುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಎರಡು ಕಾಡು ಗಿಳಿಗಳನ್ನು ವಶಕ್ಕೆ ಪಡೆಯಲಾಗಿದೆ.

ಏಪ್ರಿಲ್ 12 ರಂದು ಚಿಕ್ಕಮಗಳೂರು ನಗರದ ಶಂಕರಪುರ 4ನೇ ಕ್ರಾಸ್, ಸ್ವೀಪರ್ ಕಾಲೋನಿಯಲ್ಲಿ ಆರೋಪಿ ವಿನೋದ್ ಕುಮಾರ್‌ರವರು ಅವರ ವಾಸದ ಮನೆಯ ಮುಂಬಾಗದಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಒಂದು ಜೀವಂತ ಗಿಳಿಯನ್ನು ಪಂಜರದಲ್ಲಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಸಾಕುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಂದು ಕಾಡು ಗಿಳಿಯನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣೆ ಕಾಯ್ದೆ- 1972 ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಸಿಐಡಿ ಬೆಂಗಳೂರು ಪೊಲೀಸ್ ಉಪ ಮಹಾ ನಿರೀಕ್ಷಕರು, ಸುಧೀರ್ ಕುಮಾರ್ ರೆಡ್ಡಿ ಹಾಗೂ ಸಿ.ಐ.ಡಿ ಅರಣ್ಯ ಘಟಕ ಮಡಿಕೇರಿ, ಪೊಲೀಸ್ ಅಧೀಕ್ಷಕರು, ಎಸ್.ಎಸ್. ಕಾಶಿ ರವರ ಮಾರ್ಗದರ್ಶನದಲ್ಲಿ ಕೆ.ಆರ್. ಸುನಿತ ಪೊಲೀಸ್ ಉಪ ನಿರೀಕ್ಷಕರುರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಡಿ.ಹೆಚ್.ದಿನೇಶ, ಎಸ್.ಕೆ. ದಿವಾಕರ. ಕೆ.ಎಸ್. ದಿಲೀಪ, ಎ.ಜಿ. ಹಾಲೇಶ, ದೇವರಾಜ. ಹೆಚ್, ಹೇಮಾವತಿ ದಾಳಿಯಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು