News Karnataka Kannada
Tuesday, April 30 2024
ಚಿಕಮಗಳೂರು

ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕಾಫೀನಾಡಿನ ಜನತೆ: ಸ್ವೀಪ್ ಕಾರ್ಯಕ್ರಮಕ್ಕೆ ಸ್ಪಂದನೆ

People of Kafinadu in profit-loss calculations: Response to sweep programme
Photo Credit : News Kannada

ಚಿಕ್ಕಮಗಳೂರು: ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗ ಹಾಗೂ ಸ್ವೀಪ್ ಸಮಿತಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ಸಿಕ್ಕಂತಾಗಿದೆ.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಮತದಾನ ಉತ್ತಮ ಪ್ರಮಾಣದಲ್ಲಿ ಆಗಿದೆ. ಇದರ ಲಾಭ ಯಾವ ಪಕ್ಷಕ್ಕಾಗಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಅಲ್ಲದೆ ಕೊನೆ ಘಳಿಗೆವರೆಗೆ ನಡೆದ ಸಮೀಕ್ಷೆಗಳ ಲೆಕ್ಕಾಚಾರವೆಲ್ಲವೂ ತಲೆಕೆಳಕಾದರೂ ಆಶ್ಚರ್ಯ ಪ್ರಡುವಂತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮೊದಲ ಬಾರಿ ಮತ ಚಲಾಯಿಸಿದವರು, ಯುವಕ, ಯುವತಿಯರು ವಯೋವೃದ್ಧರಷ್ಟೇ ಅಲ್ಲದೆ, ಶತಾಯುಷಿಗಳು ಸಹ ಈ ಬಾರಿ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿರುವುದು ವಿಶೇಷವಾಗಿದೆ. ಚುನಾವಣೆ ವಾರಾಂತ್ಯದ ದಿನದಲ್ಲಿ ಬಾರದಿರುವುದು ಸಹ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.

ಈ ಬಾರಿಯ ಕ್ಷೇತ್ರವಾರು ಮತದಾನದ ವಿವರ
ಶೃಂಗೇರಿ ಒಟ್ಟು ಮತದಾರರ ಸಂಖ್ಯೆ ೧೭೦೫೧೪, ಈ ಪೈಕಿ ೬೯೩೫೦ ಪುರುಷರು, ೭೦೬೮೪ ಮಹಿಳೆಯರು ಸೇರಿ ೧೪೦೦೩೫ ಮಂದಿ ಹಕ್ಕು ಚಲಾಯಿಸಿದ್ದಾರೆ.
ಮೂಡಿಗೆರೆ ಒಟ್ಟು ಮತದಾರರ ಸಂಖ್ಯೆ ೧೭೧೯೯೮, ಈ ಪೈಕಿ ೬೬೩೭೯ ಪುರುಷರು, ೬೬೬೯೧ ಮಹಿಳೆಯರು ಸೇರಿ ೧೩೩೦೭೨ ಮಂದಿ ಮತ ಚಲಾಯಿಸಿದ್ದಾರೆ.
ಚಿಕ್ಕಮಗಳೂರು ಒಟ್ಟು ಮತದಾರರ ಸಂಖ್ಯೆ ೨೩೦೫೯೪, ಈ ಪೈಕಿ ೮೩೯೯೪ ಪುರುಷರು, ೮೪೩೬೮ ಮಹಿಳೆಯರು ಸೇರಿ ೧೬೮೩೧೭ ಮಂದಿ ಹಕ್ಕು ಚಲಾಯಿಸಿದ್ದಾರೆ.
ತರೀಕೆರೆ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ ೧೯೩೬೪೫, ಈ ಪೈಕಿ ೭೭೭೪೬ ಪುರುಷರು, ೭೫೯೧೯ ಮಹಿಳೆಯರು ಸೇರಿ ೧೫೩೬೬೬ ಮಂದಿ ಮತ ಹಾಕಿದ್ದಾರೆ.
ಕಡೂರು ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ ೨೦೬೪೮೭, ಈ ಪೈಕಿ ೮೪೬೭೭ ಪುರುಷರು, ೮೨೨೯೩ ಮಹಿಳೆಯರು ಸೇರಿ ೧೬೬೯೭೩ ಮಂದಿ ಹಕ್ಕು ಚಲಾಯಿಸಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ೨೦೧೮ ಕ್ಕೆ ಹೋಲಿಸಿದರೆ ಶೇ. ೦.೧೫ ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಲಾಭ, ನಷ್ಟದ ಲೆಕ್ಕಾಚಾರಗಳು ಆರಂಭವಾಗಿದೆ.

ಕಡೂರು ಮತ್ತು ಶೃಂಗೇರಿ ಕ್ಷೇತ್ರಗಳಲ್ಲಿ ಮತ ಪ್ರಮಾಣ ಶೇ.೮೦ ನ್ನು ದಾಟಿದ್ದರೆ ಕಳೆ ಬಾರಿಗೆ ಹೋಲಿಸಿದಲ್ಲಿ ಚಿಕ್ಕಮಗಳೂರು ಹಾಗೂ ತರೀಕೆರೆ ಕ್ಷೇತ್ರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮತದಾನ ಕಡಿಮೆಯಾಗಿದೆ.

ಶೃಂಗೇರಿ ಕ್ಷೇತ್ರದಲ್ಲಿ ೨೦೧೮ ರಲ್ಲಿ ಶೇ.೮೨.೦೩ ರಷ್ಟು ಮತದಾನ ಆಗಿದ್ದರೆ, ಈ ಬಾರಿ ೮೨.೧೩ ಮತದಾನ ಆಗಿದೆ. ಮೂಡಿಗೆರೆ ಕ್ಷೇತ್ರ ೨೦೧೮ ರಲ್ಲಿ ಶೇ.೭೬.೯೪ ಆದರೆ, ಈ ಬಾರಿ ಶೇ. ೭೭.೩೭ ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ೨೦೧೮ ರಲ್ಲಿ ೭೩.೭೨ ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ. ೭೨.೯೯ ರಷ್ಟು ಮತದಾನ ಆಗಿದೆ. ತರೀಕೆರೆ ಕ್ಷೇತ್ರದಲ್ಲಿ ೨೦೧೮ ರಲ್ಲಿ ಶೇ. ೮೧.೦೨ ಮತದಾನವಾಗಿದ್ದರೆ, ಈ ಬಾರಿ ಶೇ.೭೯.೩೫ ರಷ್ಟು ಮತದಾನ ನಡೆದಿದೆ. ಕಡೂರು ಕ್ಷೇತ್ರದಲ್ಲಿ ೨೦೧೮ ರಲ್ಲಿ ೭೮.೧೪ ರಷ್ಟು ಮತದಾನವಾಗಿದ್ದು, ಈ ಬಾರಿ ಶೇ. ೮೦.೮೬ ರಷ್ಟು ಮತದಾನ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು