ಚಿಕ್ಕಮಗಳೂರಿನಲ್ಲಿ ಕುಡುಕರ ಕಾರುಬಾರು: ಶತಕೋಟಿ ದಾಟಿದ ಮದ್ಯ ಮಾರಾಟ

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ವೇಳೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮದ್ಯದ ಹೊಳೆಯೇ ಹರಿದಿದೆ. ಕಾಫಿನಾಡಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ ೧೦೪ ಕೋಟಿ ರೂ. ವಹಿವಾಟು ನಡೆದಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದುಕೊಟ್ಟಿದೆ.

ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಕಾವು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ತಂದುಕೊಟ್ಟಿದೆ. ಜಿಲ್ಲೆಯಲ್ಲಿ ಎಲ್ ಕ್ಷನ್ ಬಿಸಿ ಜೊತೆಗೆ ಮದ್ಯದ ಕಿಕ್ ಕೂಡ ಜೋರಾಗಿದೆ. ಇದಕ್ಕೆ ಅಬಕಾರಿ ಇಲಾಖೆಯ ಅಂಕಿ ಅಂಶಗಳೇ ಸಾರಿ ಹೇಳುತ್ತಿವೆ.

೨೦೨೨ರ ಏಪ್ರೀಲ್ ಮೇ ಗೆ ಹೋಲಿಸಿದ್ರೆ ೮.೩೭ ಕೋಟಿ ರೂ ಹೆಚ್ಚಿನ ವಹಿವಾಟು ನಡೆದಿದೆ. ಜೊತೆಗೆ ೧.೬೨ ಕೋಟಿ ರೂ ಮೌಲ್ಯದ ಮದ್ಯವನ್ನು ಸೀಜ್ ಮಾಡಿ ೯ ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ೨೦೨೨ರ ಏಪ್ರಿಲ್ -ಮೇ ತಿಂಗಳಲ್ಲಿ ೯೫.೬೨ ಕೋಟಿ ರೂ. ಮದ್ಯ ಮಾರಾಟವಾಗಿತ್ತು.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಂದೂವರೆ ತಿಂಗಳಲ್ಲೇ ೮.೩೭ ಕೋಟಿ ರೂ. ಹೆಚ್ಚುವರಿ ಆದಾಯ ಖಜಾನೆ ಸೇರಿದೆ.

ಮದ್ಯ ಮಾರಾಟದಲ್ಲಿ ಏರಿಕೆ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಮದ್ಯ ಮಾರಾಟದಲ್ಲಿ ಏರಿಕೆ ಕಂಡಿದೆ. ೧೦೪ ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ೨೦೨೨ರ ಏಪ್ರಿಲ್ ಮತ್ತು ಮೇನಲ್ಲಿ ೯೫,೬೨ ಕೋಟಿ ರೂ. ಮೌಲ್ಯದ ಮದ್ಯ ಮತ್ತು ಬಿಯರ್ ಮಾರಾಟವಾಗಿತ್ತು. ಈ ಬಾರಿ ಚುನಾವಣೆ ಇದ್ದ ಕಾರಣ ಕೊಂಚ ಮದ್ಯ ಮಾರಾಟ ಹೆಚ್ಚಾಗಿದೆ. ಇದೇ ವೇಳೆ ಪರವಾನಗಿ ಇಲ್ಲದ ೧.೬೨ ಕೋಟಿ ರೂ. ಮೌಲ್ಯದ ಮದ್ಯವನ್ನು ಜಿಲ್ಲಾಡಳಿತದಿಂದ ಜಪ್ತಿ ಮಾಡಲಾಗಿದೆ.

ಬಿಯರ್ ಗೆ ಹೆಚ್ಚಿನ ಆದ್ಯತೆ: ಪ್ರಸಕ್ತ ವರ್ಷ ಬಿಸಿಲು ಹೆಚ್ಚಾಗಿದ್ದ ಕಾರಣ ಜನರು ಇತರೆ ಮದ್ಯಕ್ಕಿಂತ ಬಿಯರ್ ಮೊರೆ ಹೋಗಿದ್ದಾರೆ. ಒಂದೂವರೆ ತಿಂಗಳಲ್ಲಿ ೮೪.೩೫ ಕೋಟಿ ರೂ.ಮೌಲ್ಯದ ಮದ್ಯ ಮಾರಾಟವಾದರೆ, ೧೯.೬೫ ಕೋಟಿ ರೂ. ಮೌಲ್ಯದ ಬಿಯರ್ ಮಾರಾಟವಾಗಿದೆ. ೨೦೨೨ರ ಏಪ್ರಿಲ್, ಮೇನಲ್ಲಿ ೧೬.೦೮ ಕೋಟಿ ರೂ. ಮೌಲ್ಯದ ೭,೮೫,೫೬೮.೫೭ ಲೀಟರ್ ಬಿಯರ್ ಮಾರಾಟವಾಗಿತ್ತು.ಆದರೆ ಈ ಬಾರಿ ಒಂದೂವರೆ ತಿಂಗಳಲ್ಲೇ ೧೯.೬೫ ಕೋಟಿ ರೂ. ಮೌಲ್ಯದ ೯,೫೫,೬೧೫.೯೨ ಲೀಟರ್ ಬಿಯರ್ ಮಾರಾಟವಾಗಿದೆ. ಚುನಾವಣೆ ಬಿಸಿಗೆ ಈ ಬಾರಿ ೧,೭೦,೦೪೮.೩೫ ಲೀ. ಹೆಚ್ಚುವರಿ ಮಾರಾಟವಾಗಿದೆ.

ಚುನಾವಣೆ ವರ್ಷವಗಿದ್ದರಿಂದ ಮದ್ಯ ಮತ್ತು ಬಿಯರ್ ಗೆ ವ್ಯಾಪಕ ಬೇಡಿಕೆಯಿತ್ತು. ಅದರಲ್ಲೂ ಜಿಲ್ಲೆಯ ಜನರಿಗೆ ಚುನಾವಣೆ ಸಂದರ್ಭದಲ್ಲಿ ಮದ್ಯ ಕಿಕ್ ಏರುವಂತೆ ಮಾಡಿದೆ. ಜಿಲ್ಲೆಯಲ್ಲಿ ಆರು ವಲಯಗಳಾದ ಕಡೂರಿನಲ್ಲಿ ೨೩.೬೮ ಕೋಟಿ, ಚಿಕ್ಕಮಗಳೂರು ೨೯.,೧೨ ಕೋಟಿ, ಮೂಡಿಗೆರೆಯಲ್ಲಿ ೧೨.೮೯ ಕೋಟಿ, ಎನ್ ಆರ್ ಪುರದಲ್ಲಿ ೬೯.೬೩ ಕೋಟಿ, ಕೊಪ್ಪದಲ್ಲಿ ೧೦.೬೦ ಕೋಟಿ, ತರೀಕೆರೆ ವಲಯದಲ್ಲಿ ೨೦.೭೩ ಕೋಟಿ ರೂ ಮೌಲ್ಯದ ಮದ್ಯ ಮತ್ತು ಬಿಯರ್ ಜನರ ಹೊಟ್ಟೆ ತುಂಬಿಸಿದೆ.

Ashika S

Recent Posts

ಆಯೋಗದ ನಿಯಮ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ವಿರುದ್ಧ ಕ್ರಮ ಖಚಿತ : ಡಿಸಿ

ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ…

10 mins ago

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

17 mins ago

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಕಾಂಗ್ರೆಸ್‌ ಅಭ್ಯರ್ಥಿ

ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.   ಸೂರತ್, ಇಂದೋರ್ ಬಳಿಕ ಇದೀಗ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್…

20 mins ago

ಫೇಕ್‌ ನ್ಯೂಸ್‌: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು

ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್‌ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

35 mins ago

ಬಿಸಿಲಿನ ಶಾಖಕ್ಕೆ ರಾಯಚೂರಿನಲ್ಲಿ ಐವರು ಬಲಿ : ಹೊತ್ತಿ ಉರಿದ ಕಾರು

ಜಿಲ್ಲೆಯಲ್ಲಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಸಾಖಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಹಾಗೂ ಶಕ್ತಿನಗರದಲ್ಲಿ ಕಾರಿಗೆ ಬೆಂಕಿ…

51 mins ago

ಇಂದು (ಮೇ 04) ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು…

52 mins ago