Categories: ಕಲಬುರಗಿ

ಕಲಬುರಗಿ , ಬೀದರ್ ನಿಂದ ಬೆಂಗಳೂರಿಗೆ ಹೊಸ ರೈಲು ಆರಂಭಿಸುವಂತೆ ರೈಲ್ವೆ ಸಚಿವರಿಗೆ ಖರ್ಗೆ ಪತ್ರ

ಕಲಬುರಗಿ: ಕಲಬುರಗಿಯಿಂದ ಬೆಂಗಳೂರಿಗೆ ಎರಡು ಹಾಗೂ ಬೀದರ್ ನಿಂದ ಬೆಂಗಳೂರಿಗೆ ಒಂದು ಹೊಸ ರೈಲು ಓಡಿಸುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ಕಲಬುರಗಿ ಬೆಂಗಳೂರು ಹಾಗೂ ಬೀದರ್ ಬೆಂಗಳೂರು ನಡುವಿನ ಪ್ರಯಾಣಿಕರ ದಟ್ಟಣೆಯ ಕುರಿತಂತೆ ವಿಸ್ತಾರವಾಗಿ ವಿವರಿಸಿರುವ ಖರ್ಗೆ, ಕಲಬುರಗಿಯಿಂದ ಬೆಂಗಳೂರಿಗೆ ಪ್ರತಿನಿತ್ಯ ಸುಮಾರು 6,000 ಪ್ರಯಾಣಿಕರು ಸಂಚರಿಸುತ್ತಿದ್ದು ಹೆಚ್ಚಿನ ರೈಲುಗಳ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಬಹುತೇಕರು ವಲಸೆ ಕೂಲಿ ಕಾರ್ಮಿಕರಾಗಿದ್ದಾರೆ. ಮೀಸಲು ಬೋಗಿಗಳಲ್ಲಿಆಸನ ಕಾಯ್ದಿರಿಸಲು ಹಣಕಾಸಿನ ದೃಷ್ಟಿಯಿಂದ ಅವರ ಶಕ್ತಿಗೆ ಮೀರಿದ್ದಾಗಿದ್ದು, ಅವರು ಜನರಲ್ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದ್ದು ಪ್ರಯಾಣಿಕರು ಆಸನದ ಕೊರತೆಯಿಂದಾಗಿ ಕೆಳಗೆ ಮಲಗಿಕೊಂಡು ಪ್ರಯಾಣಿಸುತ್ತಿದ್ದಾರೆ.

ಇದು ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬೀದರ್ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಎರಡು ನಗರಗಳಿಗೆ ನಿಗದಿಪಡಿಸಿದ ಮೀಸಲಿಸಿರುವ ಆಸನಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕಲಬುರಗಿ- ಬೆಂಗಳೂರು ನಡುವೆ ಎರಡು ನೂತನ ರೈಲುಗಳು ಹಾಗೂ ಬೀದರ್-ಬೆಂಗಳೂರು ನಡುವೆ ಒಂದು ನೂತನ ರೈಲು ಓಡಿಸುವ ಅವಶ್ಯಕತೆ ಇದ್ದು, ಇದರಿಂದ ಜನಸಂದಣಿ ಕಡಿಮೆಯಾಗುವುದರ ಜೊತೆಗೆ ಪ್ರಯಾಣಿಕರು ಎದುರಿಸುತ್ತಿರುವ ಅನಾನುಕೂಲತೆ ಕಡಿಮೆಯಾಗಲಿದೆ ಎಂದು ಖರ್ಗೆ ವಿವರಿಸಿದ್ದಾರೆ.

Sneha Gowda

Recent Posts

ಉಮೇಶ ವಂದಾಲ ನೇತೃತ್ವದಲ್ಲಿ ಮನೆಮನೆ ಪ್ರಚಾರ

ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ನಗರದ ವಾರ್ಡ್ ಸಂಖ್ಯೆ 3…

5 mins ago

ಅಸ್ಸಾಂ, ಗೋವಾದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಏತನ್ಮಧ್ಯೆ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ದೇಶದ ಕೆಲವು ರಾಜ್ಯಗಳು ಮತ್ತು…

25 mins ago

ಬಾತ್​ರೂಂನಲ್ಲಿ ಹುಟ್ಟಿದ ನವಜಾತ ಶಿಶು : ತಕ್ಷಣವೆ ಕತ್ತು ಹಿಸುಕಿ ಕೊಂದ ತಾಯಿ

ಕೊಚ್ಚಿಯ ಮಹಿಳೆಯರೊಬ್ಬರು ನವಜಾತ ಶಿಶುವನ್ನು ಕತ್ತು ಹಿಸುಕಿ, ಕೆಳಗೆ ಎಸೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಕೊಚ್ಚಿಯ  ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ…

54 mins ago

ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು : ಉಳಿದೆಡೆ ಗುಡುಗು ಸಹಿತ ಮಳೆ

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು…

1 hour ago

ಈ ರಾಶಿಯವರಿಗೆ ಇಂದು ಆಪ್ತರಿಂದ ಆರ್ಥಿಕವಾಗಿ ಸಹಾಯ

ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ…

2 hours ago

85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ : ಇಲ್ಲಿದೆ ಇವತ್ತಿನ ದರಪಟ್ಟಿ

ಮೂರ್ನಾಲ್ಕು ವಾರಗಳ ಅದ್ವಿತೀಯ ರೀತಿಯಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಶಾಂತಗೊಂಡಿವೆ. ಈ ವಾರ…

2 hours ago