News Karnataka Kannada
Monday, April 29 2024
ಚಿಕಮಗಳೂರು

ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಕಂಗಲಾದ ರೈತರು: ಮೆಸ್ಕಾಂ ಅಧಿಕಾರಿಗಳ ವಿರುದ್ದ ಆಕ್ರೋಶ

Farmers upset over power load shedding: Mescom officials
Photo Credit : News Kannada

ಬೀರೂರು: ಸದ್ಯ ಈಗಾಗಲೇ ಮುಂಗಾರು ಕೈಕೊಟ್ಟಿದ್ದು, ಕೊಳವೆ ಬಾವಿ ಅವಲಂಬಿಸಿರುವ ರೈತರುತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ಬೆಳೆಗಳಿಗೆ ನೀರು ಪೂರೈಸಬೇಕಾದ ಸ್ಥಿತಿ ಇದೆ. ಆದರೆ ಮೆಸ್ಕಾಂ ಕಣ್ಣಾ ಮುಚ್ಚಾಲೆಯಿಂದ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದೆ ರೈತರು ಸಂಪೂರ್ಣ ನಷ್ಠ ಅನುಭವಿಸುವ ಸ್ಥಿತಿ ಎದುರಾಗಿದೆ ಎಂದು ರೈತಾಪಿ ಜನರು ಮೆಸ್ಕಾಂ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಬೀರೂರು ಮೆಸ್ಕಾಂ ಉಪವಿಭಾಗದ ಕಚೇರಿಯ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಹರಳಘಟ್ಟ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಳವರ ಕಾಲೋನಿಯ ಸುಧಾಕರ್, ರೈತರ ನೆರವಿಗಾಗಿ ಪ್ರತಿ ದಿನ ಕಡ್ಡಾಯವಾಗಿ ಐಪಿ ಸೆಟ್ ಗಳಿಗೆ ೭ಗಂಟೆ ವಿದ್ಯುತ್ ನೀಡುವಂತೆ ಹೇಳಿದ್ದರು ಅಧಿಕಾರಿಗಳು ಸರಿಯಾಗಿ ವಿದ್ಯುತ್ ನೀಡದೆ ತಾತ್ಸಾರ ಮಾಡುವುದು ಅನ್ನ ನೀಡುವ ರೈತನಿಗೆ ಮಾಡುವ ಮೋಸ, ಎಮ್ಮೆದೊಡ್ಡಿ ಭಾಗದ ಎಫ್ -೯ ಮತ್ತುಎಫ್ ೧೦ ಫೀಡರ್ ಕೇವಲ ೩ ಗಂಟೆಯಾದರೂ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಇದಕ್ಕೆ ಉತ್ತರಿಸಬೇಕು ಎಂದು ಸಭೆಯಲ್ಲಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ಇದಕ್ಕೆ ಉತ್ತರ ನೀಡಿದ ಚಿಕ್ಕಮಗಳೂರು ಮೆಸ್ಕಾಂನ ಕಾರ್ಯ ಮತ್ತು ಪಾಲನಾ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್, ಪ್ರಸ್ತುತ ದಿನಗಳಲ್ಲಿ ವಿದ್ಯುತ್ ಉದ್ಪಾದನೆ ಸಮಸ್ಯೆ ಇರುವುದ್ದರಿಂದ ಕೆಲವೊಮ್ಮೆ ವಿದ್ಯುತ್‌ ಅಡಚಣೆ ಸಮಸ್ಯೆ ಎದುರಾದ ಸಂದರ್ಭದಲ್ಲಿ ೩ಫೇಸ್ ವಿದ್ಯುತ್ ಸರಬರಾಜು ನೀಡಲು ಕಷ್ಟ ಸಾಧ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಸಮಸ್ಯೆ ಬಗೆಹರಿದಲ್ಲಿ ಸೋಲಾರ್ ಅವಧಿಯಲ್ಲಿ ೭ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುವುದು. ರೈತರ ಕ್ಷೇಮವೇ ನಮ್ಮ ಮೊದಲ ಆದ್ಯತೆ ಎಂದರು.

ರೈತಗಿರಿಯಾಪುರದ ಷಡಾಕ್ಷರಪ್ಪ ಮಾತನಾಡಿ, ೨೦೧೮ನೇ ಸಾಲಿನಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ಪರಿವರ್ತಕ ಮತ್ತು ಕಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಬೀರೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎಸ್. ನಂದೀಶ್, ವಿದ್ಯುತ್ ಕಂಬಗಳನ್ನು ಜಮೀನಿನ ಬದಿಯಲ್ಲೇ ಅಳವಡಿಸಿದ್ದೇವೆ ಇದರಿಂದ ಯಾವುದೇ ರೀತಿ ತೊಂದರೆಯಾಗಿಲ್ಲ ಎಂದು ಉತ್ತರ ನೀಡಿದರು.

ಹೊಗರೇಹಳ್ಳಿ ಪ್ರಕಾಶ್ ಮತ್ತು ಗ್ರಾಮಸ್ಥರು ಮಾತನಾಡಿ, ಆಲದಹಳ್ಳಿ ಜಮೀನಿನ ವ್ಯಾಪ್ತಿಯಲ್ಲಿರುವ ೬೩ಕೆವಿಎ ಟಿಸಿ ಎಲ್.ಟಿ ಮಾರ್ಗವು ತುಂಬಾ ಹಳೆಯದಾಗಿದ್ದು, ಪದೇ ಪದೇ ಕಟ್ಟಾಗಿ ಬೀಳುತ್ತಿರುತ್ತದೆ. ಇದರಿಂದಾಗಿ ಗ್ರಾಮಕ್ಕು ಮತ್ತು ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗುತ್ತಿರುವುದ್ದರಿಂದ ಇದನ್ನು ಬದಲಾಯಿಸಿ ಕೊಡುವಂತೆ ಕೋರಿದರು.

ಇದಕ್ಕೆ ಉತ್ತರಿಸಿದ ಸಹಾಯಕ ಇಂಜಿನಿಯರ್ ಜೆ.ಟಿ.ರಮೇಶ್, ಸಮಸ್ಯೆ ಬಗ್ಗೆ ಈಗಾಗಲೇ ತಿಳಿದಿದ್ದು, ಎಲ್.ಟಿ. ಮಾರ್ಗವವನ್ನು ಬದಲಾಯಿಸಲು ಕ್ರಿಯಾಯೋಜನೆ -೩ರಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು ಬಂದ ತಕ್ಷಣವೇ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಎಂ.ಚೋಮನಹಳ್ಳಿ ಗ್ರಾಮದ ಅಶೋಕ್ ಮತ್ತು ಸಿದ್ದೇಗೌಡ ಮಾತನಾಡಿ, ಎಂ ಚೋಮನಹಳ್ಳಿ ಗ್ರಾಮ ವ್ಯಾಪ್ತಿಯ ನೀರಾವರಿ ಪಂಪ್ ಸೆಟ್ ಗಳಿಗೆ ೩ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿಲ್ಲಎಂದಾಗ ಉತ್ತರಿಸಿದ ಹಿರೇನಲ್ಲೂರು ಮೆಸ್ಕಾಂ ಕಿರಿಯಇಂಜಿನಿಯರ್ ಟಿ.ಎನ್.ಕಿಶೋರ್‌ರಾಜ್‌ಇದು ನಮ್ಮ ವ್ಯಾಪ್ತಿಗೆ ಬರುತ್ತದೆ. ಈ ಗ್ರಾಮಕ್ಕೆ ವಿದ್ಯುತ್ ಸರಬರಾಜಾಗುವ ಎಫ್-೬ ಮೇಲನಹಳ್ಳಿ ಫೀಡರ್‌ ಅಧಿಕ ಹೊರೆ ಹೊಂದಿದ್ದು, ಹೊರೆಯನ್ನು ಬೇರೆ ಫೀಡರ್ ಮೇಲೆ ವಿಭಜಿಸಿ ೦೩ ವಿದ್ಯುತ್ ಸರಬರಜು ನೀಡಲುಕ್ರಮ ಕೈಗೊಳ್ಳಲಾಗುವುದು ಎಂದರು.

ಗುತ್ತಿಗೆದಾರ ಮುರುಳಸಿದ್ದರಾಧ್ಯ ಮಾತನಾಡಿ, ಸಾಮಾನ್ಯ ನೀರಾವರಿ ಯೋಜನೆಯಡಿ ಹಣ ಪಾವತಿಸಿರುವ ಫಲಾನುಭವಿಗಳಿಗೆ ಹಿರಿತನ ಪಟ್ಟಿ ಮೇರೆಗೆ ಸಾಮಾಗ್ರಿ ಮತ್ತು ಟಿಸಿ ಗಳನ್ನು ಮಂಜೂರು ಮಾಡಬೇಕು ಎಂದು ಕೋರಿದರು.

ಉಳಿದಂತೆ ವಿದ್ಯುತ್ ಸರಬರಾಜು ಸಮಸ್ಯೆ ಗಳಿಗೆ ಲೈನ್‌ಮನ್ ಮತ್ತುಎಂ.ಯು.ಎಸ್ ಗೆ ಕರೆ ಮಾಡಿದರೆ ಸರಿಯಾಗಿ ಉತ್ತರಿಸದೆ ದುರ್ವತನೆ ತೋರುತ್ತಾರೆ. ಇಂತವರಿಂದ ನಿಷ್ಠೆಯಿಂದ ಕೆಲಸ ಮಾಡುವ ಸಿಬ್ಬಂದಿಗಳಿಗೆ ಮುಜುಗರವಾಗುತ್ತದೆ  ಇದನ್ನು ಮೊದಲು ತಪ್ಪಿಸಿ ರೈತರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳಲು ಸೂಚಿಸಿ ಎಂದು ಸಭೆಗೆ ಆಗಮಿಸಿದ್ದ ರೈತರು ಹಿರಿಯ ಅಧಿಕಾರಿಗಳಿಗೆ ಕೋರಿದರು.

ಇದಕ್ಕೆ ಉತ್ತರಿಸಿದ ಎಸ್.ಇ ಸೋಮಶೇಖರ್,ಇನ್ನು ಮುಂದೆ ಲೈನ್ ಮನ್ ಗಳು ದುರ್ವತನೆ ತೋರಿದಲ್ಲಿ ನನ್ನ ಗಮನಕ್ಕೆ ತನ್ನಿ ಅಂತಹವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದರು.

ಕಡೂರು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜು, ಸಹಾಯಕಇಂಜಿನಿಯರ್ ಸುಧಾ, ಸಹಾಯಕ ಲೆಕ್ಕಾಧಿಕಾರಿ ಪ್ರಭಾಕರ್, ಎಸ್.ಜಿ.ರಮೇಶ್, ವೀರ ವೆಂಕಟರಾವ್ ಸೇರಿದಂತೆ ರೈತರು ಮತ್ತು ಮೆಸ್ಕಾಂ ಸಿಬ್ಬಂದಿ ವರ್ಗದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು