ಚಿಕ್ಕಮಗಳೂರು: ಬಂದೂಕು ಠೇವಣಿ ಇಡಲು ಮಲೆನಾಡಿಗರಿಗೆ ರಿಯಾಯ್ತಿ ನೀಡಲು ಒತ್ತಾಯ

ಚಿಕ್ಕಮಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಬಂದೂಕುಗಳನ್ನು ಠೇವಣಿ ಇಡುವುದಕ್ಕೆ ರಿಯಾಯ್ತಿ ನೀಡಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲ ದಗದ್ದೆ ಗಿರೀಶ್ ಜಿಲ್ಲಾ ಚುನಾವ ಣಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮಲೆನಾಡು ಭಾಗದ ಬಹುತೇಕ ಜನರು ಆತ್ಮ ರಕ್ಷಣೆ ಹಾಗೂ ಕಾಡು ಪ್ರಾಣಿಗಳು, ಕಳ್ಳಕಾಕರ ಹಾವಳಿಯಿಂದ ರಕ್ಷಣೆ ಪಡೆಯಲೆಂದೇ ಬಂದೂಕು ಗಳನ್ನು ಹೊಂದಿರುತ್ತಾರೆ. ಹೆಚ್ಚಾಗಿ ಒಂಟಿ ಮನೆಗಳು ಹಾಗೂ ತೋಟದ ಮನೆಗಳಿರುವುದು ಇದಕ್ಕೆ ಕಾರಣವಾಗಿರುತ್ತದೆ.

ಇಂತಹ ಸ್ಥಿತಿಯಲ್ಲಿ ಬಂದೂಕುಗಳನ್ನು ಠೇವಣಿ ಇಟ್ಟಲ್ಲಿ ದುಷ್ಕರ್ಮಿಗಳು ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಬಂದೂಕು ಠೇವಣಿ ಇಡುವುದರಿಂದ ರಿಯಾಯ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದು ಕಾಫಿ, ಕಾಳು ಮೆಣಸು ಇತ್ಯಾದಿ ತೋಟದ ಬೆಳೆಗಳ ವ್ಯಾಪಾರ, ವಹಿವಾಟಿನ ದಿನಗಳಾಗಿವೆ. ಬಹುತೇಕ ಮಂದಿ ಇನ್ನೂ ಉತ್ಪನ್ನಗಳನ್ನು ಗೋದಾಮುಗಳು ಹಾಗೂ ತೋಟದ ಮನೆಗಳಲ್ಲಿ ದಾಸ್ತಾನಿಟ್ಟುಕೊಂಡಿದ್ದಾರೆ. ಅವುಗಳ ರಕ್ಷಣೆಗೆ ಬಂದೂಕು ಅಗತ್ಯವಾಗಿರುತ್ತದೆ ಎಂದಿದ್ದಾರೆ.

ಈ ಬಾರಿ ಬಂದೂಕು ಠೇವಣಿ ಯಿಂದ ರಿಯಾಯ್ತಿ ಪಡೆಯಲು ಜಿಲ್ಲಾಡಳಿತ ಅನುವು ಮಾಡಿಕೊಡುವ ಕ್ರಮ ಕೈಗೊಂಡಿದೆ ಆದರೂ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರೈ ಸುವಲ್ಲಿ ಚುನಾವಣೆಯೇ ಮುಗಿದು ಹೋಗುತ್ತದೆ. ಅಲ್ಲದೆ ಸುಲಭಕ್ಕೆ ರಿಯಾಯ್ತಿ ಸಿಗುವ ಸಾಧ್ಯತೆಯೂ ಇಲ್ಲದಂತಾಗಿದೆ. ಈ ಕಾರಣಕ್ಕೆ ಯಾವುದೇ ನಿಯಮಗಳನ್ನು ವಿಧಿಸದೆ ನೇರ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್‌ಗೆ ವಿಧಿಸಲಾಗಿರುವ ೧೦೦೦ ರೂ. ದಂಡ ರೂಪದ ಶುಲ್ಕವನ್ನು ಕೂಡಲೇ ರದ್ದು ಪಡಿಸಬೇಕು ಎಂದು ಗಿರೀಶ್ ಒತ್ತಾಯಿಸಿದ್ದಾರೆ.

ಬಹುತೇಕ ಮಧ್ಯಮ ವರ್ಗದವರು, ಬಡ ಜನರು ಒಂದಲ್ಲಾ ಒಂದು ಕಾರ್ಯ ಕ್ಕಾಗಿ ಪ್ಯಾನ್ ಕಾರ್ಡ್ ಹೊಂದಿರುತ್ತಾರೆ. ಇನ್ನು ಆಧಾರ್ ಕಾರ್ಡ್‌ನ್ನು ಪ್ರತಿಯೊಬ್ಬರು ಹೊಂದಿರಲೇಬೇಕಾಗಿದೆ. ಹೀಗಿರುವಾಗ ಬಹುತೇಕರಿಗೆ ೧೦೦೦ ರೂ. ಶುಲ್ಕ ಭರಿಸಿ ಲಿಂಕ್ ಮಾಡಿಸು ವುದು ಹೊರೆಯಾU ತ್ತಿದೆ. ಈ ಹಿನ್ನೆಲೆಯಲ್ಲಿ ಶುಲ್ಕವನ್ನು ರದ್ದು ಪಡಿಸುವುದರ ಜೊತೆಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಯಾವುದೇ ಅಂತಿಮ ಗಡುವು ವಿಧಿಸದೆ ನಿರಂತರವಾಗಿ ಈ ಪ್ರಕ್ರಿಯೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಶೂನ್ಯ ಠೇವಣಿ ಖಾತೆಗಳನ್ನು ತೆರಸಿದ್ದೇವೆಂದು ಹೇಳಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಆಧಾರ್ ಲಿಂಕ್‌ಗೆ ದಂಡದ ರೂಪದಲ್ಲಿ ಅದೇ ಖಾತೆಗಳಿಗೆ ಹಣಕಟ್ಟಿಸಿಕೊಳ್ಳಲು ಮುಂದಾಗಿದೆ ಎಂದು ದೂರಿರುವ ಅವರು, ಆಧಾರ್ ಲಿಂಕ್‌ಗೆ ಈ ವರೆಗೆ ದಂಡದ ರೂಪದಲ್ಲಿ ೧ ಸಾವಿರ ರೂ. ಭರಿಸಿರುವ ಹಣವನ್ನು ಅವರವರ ಖಾತೆಗೆ ಮರಳಿ ಜಮೆ ಮಾಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇದಲ್ಲದೆ ಖಾಸಗಿ ಫ್ರಾಂಚೈಸಿಗಳು ಆಧಾರ್-ಪ್ಯಾನ್ ಲಿಂಕ್ ಮಾಡಿ ಕೊಡಲು ೨೦೦ ರಿಂದ ೩೦೦ ರೂ. ದುಬಾರಿ ಶುಲ್ಕ ವಿಧಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಹಾಗೂ ಆನ್‌ಲೈನ್‌ನಲ್ಲಿ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಣಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Sneha Gowda

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

4 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

4 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

4 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

6 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

6 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

6 hours ago