ರಸ್ತೆಯ ಬದಿಗಳಲ್ಲಿ ವಿದ್ಯುತ್ ದೀಪ, ಹಂಪುಗಳನ್ನು ಅಳವಡಿಸಲು ಒತ್ತಾಯ

ಚಿಕ್ಕಮಗಳೂರು: ನಗರದ ಆಜಾದ್‌ಪಾರ್ಕ್ ರಸ್ತೆಯಿಂದ ಹಿರೇಮಗಳೂರುವರೆಗೆ ಅಪಘಾತ ವಲಯವಾದ ಕಾರಣ ಎರಡು ಬದಿಗಳಲ್ಲಿ ವಿದ್ಯುತ್ ದೀಪ, ತಿರುವಿನಲ್ಲಿ ಹಂಪುಗಳು ಹಾಗೂ ರಸ್ತೆಯ ಬದಿಗಳಲ್ಲಿ ರೇಡೀಯಂ ಅಳವಡಿಸಬೇಕು ಎಂದು ಜಿಲ್ಲಾ ಹಳ್ಳ್ಳಿಕಾರ ಯುವಕರ ಸಂಘವು ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಒತ್ತಾಯಿಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಪದಾಧಿಕಾರಿಗಳು ಆಜಾದ್ ಪಾರ್ಕ್‌ನಿಂದ ಹಿರೇಮಗಳೂರು ಮಾರ್ಗವಾಗಿ ದಿನನಿತ್ಯ ಅನೇಕ ವಾಹನಗಳು ಸಂಚರಿಸುವ ಹಿನ್ನೆಲೆಯಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೋಟೆ ಸೋಮಣ್ಣ ನಗರದ ಆಜಾದ್‌ಪಾರ್ಕ್‌ನಿಂದ ಹಿರೇ ಮಗಳೂರುವರೆಗೆ ಅತಿಹೆಚ್ಚು ಅಪಘಾತಗಳು ನಡೆದಿದೆ. ಈಗಾಗಲೇ ಈ ರಸ್ತೆಯಲ್ಲಿ ಪೆಟ್ಟು ಬಿದ್ದು ನಾಲ್ಕೈದು ಜನರ ಸಾವು ಕೂಡಾ ಸಂಭವಿಸಿರುವ ಕಾರಣ ಸಾರ್ವಜನಿಕರು ಜೀವವನ್ನು ಕೈಯಲ್ಲಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ನಗರದೊದಳಗೆ ವೇಗವಾಗಿ ಬರುವಂತಹ ವಾಹನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆಜಾದ್ ಪಾರ್ಕ್‌ನಿಂದ ಹಿರೇಮಗಳೂರುವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಿದ್ಯುತ್ ದೀಪಗಳು, ರೇಡಿಯಂ ಅಳವಡಿ ಸುವುದು ಹಾಗೂ ದೋಣಿಖಣದಿಂದ ಎಲ್‌ಐಸಿ ಕಚೇರಿ ಕಡೆಗೆ ತಿರುಗುವ ಎರಡು ಬದಿಗಳಲ್ಲಿ ಹಂಪುಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖವಾಗಿ ಬೇಲೂರು ರಸ್ತೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ಬಹಳ ವರ್ಷಗಳ ಹಿಂದೆ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಆದರೆ ರಸ್ತೆ ಅಗಲೀಕರಣ ವೇಳೆಯಲ್ಲಿ ತೆರವು ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಬಿಸಿಲು ಹಾಗೂ ಮಳೆಯಿಂದ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಬಸ್ ತಂಗುದಾಣ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರಕೃತಿ ಸೌಂದರ್ಯಕ್ಕೆ ಮತ್ತು ಪ್ರವಾಸಿಗರಿಗೆ ಚಿಕ್ಕಮಗಳೂರು ಅತ್ಯಂತ ಪ್ರಿಯವಾದ ಜಾಗವಾದ ಕಾರಣ ರಾತ್ರಿ ಸಮಯದಲ್ಲಿ ನಗರದೊಳಗೆ ಬರುತ್ತಿದ್ದಂತೆ ಕತ್ತಲೆ ಆವರಿಸಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆಯೂ ಸೂಕ್ತ ನಿರ್ದೇಶನ ನೀಡಿ ನಗರವನ್ನು ಸುಂದರೀಕರಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಸಿ.ಹೆಚ್.ಶ್ರೀನಿವಾಸ್, ಶಿವಕುಮಾರ್, ಹಿರೇಮಗಳೂರು ಸೋಮಣ್ಣ, ಮುಖಂಡರುಗಳಾದ ಶ್ರೀಧರ್ ಡಿ.ಪಾಪಣ್ಣ, ಜಗದೀಶ್ ಕೋಟೆ, ಅನಂತ, ರಾಘವೇಂದ್ರ, ಜಯದೇವ ರಾಜ್‌ಅರಸ್, ಮೋಹನ್ ಮತ್ತಿತರರು ಹಾಜರಿದ್ದರು.

Gayathri SG

Recent Posts

2ನೇ ಹಂತದ ಮತದಾನ: ನಾಳೆ ಯಲ್ಲಮ್ಮ ದೇವಿ ದರ್ಶನಕ್ಕೆ ನಿರ್ಬಂಧ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ನಾಳೆ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. 

8 mins ago

ಲೆಮುರ್‌ ಬೀಚ್‌ನಲ್ಲಿ ಐವರು ಮೆಡಿಕಲ್‌ ವಿದ್ಯಾರ್ಥಿಗಳು ನೀರುಪಾಲು

ಸಮುದ್ರದಲ್ಲಿ ಮುಳುಗಿ ಐವರು ಮೆಡಿಕಲ್‌ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಲೆಮುರ್‌ ಬೀಚ್‌ನಲ್ಲಿ ನಡೆದಿದೆ.

9 mins ago

ಜೆಟ್ ಏರ್ವೇಸ್​ನ ನರೇಶ್ ಗೋಯಲ್​ಗೆ ಕೊನೆಗೂ ಜಾಮೀನು ಮಂಜೂರು

ಅಕ್ರಮ ಹಣ ವರ್ಗಾವಣೆ ಆರೋಪವಿರುವ ಪ್ರಕರಣ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಕೊನೆಗೂ ಜಾಮೀನು ಮಂಜೂರುರಾಗಿದೆ.

15 mins ago

ಹೂಗ್ಲಿ ಜಿಲ್ಲೆಯಲ್ಲಿ ಬಾಂಬ್ ಸ್ಫೋಟ: ಓರ್ವ ಅಪ್ರಾಪ್ತ ಸಾವು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡು ಓರ್ವ ಅಪ್ರಾಪ್ತ ಮೃತಪಟ್ಟಿದ್ದು, ಇಬ್ಬರು ಅಪ್ರಾಪ್ತರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

27 mins ago

ವಾಯುಸೇನೆ ಮೇಲೆ ದಾಳಿ : ಇಬ್ಬರು ಉಗ್ರರ ಸ್ಕೆಚ್ ಬಿಡುಗಡೆ, 20 ಲಕ್ಷ ರೂ. ಬಹುಮಾನ ಘೋಷಣೆ

ಭಾರತೀಯ ವಾಯುಸೇನೆಯ ವಾಹನದ ಮೇಲೆ ಕಳೆದ ವಾರ ಕಾಶ್ಮೀರದ ಪೂಂಚ್ ಸೆಕ್ಟರ್​ನಲ್ಲಿ ದಾಳಿ ಮಾಡಿ ಒಬ್ಬ ಯೋಧರನ್ನು ಬಲಿತೆಗೆದುಕೊಂಡಿದ್ದ ಉಗ್ರಗಾಮಿಗಳನ್ನು…

34 mins ago

ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್ ತಡೆಯಾಜ್ಞೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ…

41 mins ago