ಬೆಂಗಳೂರು

ಬೆಂಗಳೂರು: ಪ್ರಧಾನಿಯೂ ನಮ್ಮಂತೆ 15 ಲಕ್ಷ ರೂ. ಭರವಸೆ ಈಡೇರಿಸಲಿ- ಡಿ.ಕೆ ಶಿವಕುಮಾರ್‌

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಭರವಸೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ 2 ಕೋಟಿ ಉದ್ಯೋಗ ಸೃಷ್ಟಿ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ನಮ್ಮಂತೆಯೇ ಅವರು ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಅದೇರೀತಿ ವಿದೇಶಗಳಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ನೀಡುವುದಾಗಿ ಹೇಳಿದ್ದರು. ಅದನ್ನು ಕೂಡ ಮಾಡಬೇಕು ಎಂದು ಆಗ್ರಹಿಸಿದರು. ಪ್ರಧಾನಿ ಮೋದಿ ಅವರು ಕೊಟ್ಟ ಮಾತಿನಂತೆ 2 ಕೋಟಿ ಉದ್ಯೋಗ ಸೃಷ್ಟಿಸಿ ರೈತರ ಆದಾಯ ದ್ವಿಗುಣಗೊಳಿಸಲಿ ಎಂದು ಶಿವಕುಮಾರ್ ಸವಾಲು ಹಾಕಿದರು.

ಕಾಂಗ್ರೆಸ್ ಸರ್ಕಾರದ ಖಾತ್ರಿ ಘೋಷಣೆ ಪ್ರಹಸನ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಕುಮಾರಸ್ವಾಮಿ ದೊಡ್ಡ ವ್ಯಕ್ತಿ, ಅವರ ಬಗ್ಗೆ ಮಾತನಾಡಲು ಬಯಸುವುದಿಲ್ಲ. “ನಾನು ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಮತ್ತು ಅವರ ಕೆಲಸವನ್ನು ಅವರು ಮಾಡಲಿಎಂದು ಹೇಳಿದರು. 200 ಯೂನಿಟ್ ಉಚಿತ ವಿದ್ಯುತ್ ಬೇಡ ಎನ್ನುವವರು ವಿದ್ಯುತ್‌ ಬಿಲ್‌ ಪಾವತಿಸಬಹುದು ಎಂದರು. ಹಲವು ಅಧಿಕಾರಿಗಳು, ಮಾಧ್ಯಮದವರು ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಬಯಸುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಎಲ್‌ಪಿಜಿ ಸಿಲಿಂಡರ್‌ ಮೇಲಿನ ಸಬ್ಸಿಡಿ ಬಟ್ಟುಕೊಟ್ಟಂತೆ ಇದನ್ನು ಬಿಡಬಹುದು ಎಂದರು.

Ashika S

Recent Posts

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

13 mins ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

29 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

44 mins ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

1 hour ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

2 hours ago

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,  40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

2 hours ago