News Karnataka Kannada
Saturday, May 04 2024
ಚಿಕಮಗಳೂರು

ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಬದ್ದ: ಶಾಸಕಿ ನಯನಾ ಮೋಟಮ್ಮ

Chikkamagaluru: Mla starts activities for the development of chikkamagaluru constituency from today
Photo Credit : News Kannada

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ನಯನ ಮೋಟಮ್ಮ ರಾಜ್ಯದ ವಿಧಾನಸಭೆ ನಡೆದಂತಹ ಚುನಾವಣೆಯಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ವಿಜಯವನ್ನು ಸಾಧಿಸಿದ ನಂತರ ಶಾಸಕಿಯಾಗಿ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಮೊದಲ ಭರವಸೆಯ ಭಾಗವನ್ನು ಅನುಷ್ಠಾನಗೊಳಿಸಲು ಎಂ ಜಿಎಂ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ ಇದರಿಂದ ಕ್ಷೇತ್ರದ ಎಲ್ಲರ ಗಮನ ಸೆಳೆದು ಪ್ರಶಂಸೆಗೆ ಪಾತ್ರರಾದರು.

ನಿನ್ನೆ ನಡೆದ ಮತ ಎಣಿಕೆಯಲ್ಲಿ ವಿಜಯಿಶಾಲಿ ಯಾಗಿ ಅಧಿಕೃತ ಶಾಸಕಿಯಾದ ನಂತರ ಇಂದು ಮೂಡಿಗೆರೆ ತಾಲೂಕಿನ ಎಂಜಿಎಂ ಸಾರ್ವಜನಿಕ ಆಸ್ಪತ್ರೆಗೆ ಇಂದು ದಿಢೀರ್ ಭೇಟಿ ನೀಡಿ ಅಲ್ಲಿನ ರೋಗಿಗಳೊಂದಿಗೆ ಆರೋಗ್ಯ ಕ್ಷೇಮೆ ವಿಚಾರಿಸಿದರು. ಹಾಗೂ ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಇರುವಂತಹ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದ ಶಾಸಕಿ ನಯನ ಮೋಟಮ್ಮ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರೊಂದಿಗೆ ಚರ್ಚೆ ನಡೆಸಿದರು.

ಮೂಡಿಗೆರೆಯ ಎಂಜಿಎಂ ಸಾರ್ವಜನಿಕ ಆಸ್ಪತ್ರೆಯನ್ನು ಕ್ಷೇತ್ರದಲ್ಲಿ ತಿಳಿಸಿರುವ ಪ್ರಣಾಳಿಕೆಯ ಮೊದಲ ಭಾಗವಾಗಿ ಭೇಟಿ ನೀಡಿ ಕ್ಷೇತ್ರದ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂಬಂತೆ ಆಸ್ಪತ್ರೆಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಖುದ್ದು ಪರಿಶೀಲಿಸಿ ಚರ್ಚಿಸಿದರು.

ನಂತರ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಇವರು ಆಸ್ಪತ್ರೆಗೆ ಬೇಕಾಗುವ ಎಲ್ಲಾ ಅಗತ್ಯವಾದ ಸೌಲತ್ತುಗಳಿಗೆ ಸಂಬಂಧಪಟ್ಟ ಬೇಡಿಕೆಗಳಿದ್ದಲ್ಲಿ ನೇರವಾಗಿ ನನಗೆ ತಿಳಿಸಿ ಹಾಗೂ ಆಸ್ಪತ್ರೆಯ ಸುಚಿತ್ವದ ಕಡೆ ಹೆಚ್ಚಿನ ಮಹತ್ವವನ್ನು ನೀಡಿ ಎಂದರು.

ನಂತರ ವಿವಿಧ ವಾರ್ಡ್ ಗಳಿಗೆ ರೋಗಿಗಳಿಗೆ ಸಿಗುತ್ತಿರುವ ಸವಲತ್ತುಗಳ ಮಾಹಿತಿ ಪಡೆದು ಹೌಷದ ಸೇರಿದಂತೆ ವೈದ್ಯಕೀಯ ಸೇವೆ ಹಾಗೂ ಸೌಲಭ್ಯಗಳು ನೀಡುವ ಎಕ್ಸರೇ, ಐಸಿಯು, ಡಯಾಲಿಸಿಸ್, ಸ್ಪೆಷಲ್ ವಾರ್ಡ್, ಸೇರಿದಂತೆ ಎಲ್ಲಾ ಸವಲತ್ತುಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ ನಂತರ ಇಂತಹ ಯಾವುದೇ ಅಗತ್ಯ ಸೇವೆಗಳ ಕೊರತೆಯು ನನ್ನ ಕ್ಷೇತ್ರದಲ್ಲಿ ಇನ್ನು ಮುಂದೆ ಬರಬಾರದು ಈ ಆಸ್ಪತ್ರೆಯನ್ನು ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆಗಳ ಪಟ್ಟಿಯಲ್ಲಿ ಸೇರಿಸುವ ಎಲ್ಲಾ ರೀತಿಯ ವೈದ್ಯಕೀಯ ಸೇವೆ ಹಾಗೂ ಸೌಲಭ್ಯಗಳು ಒಳಗೊಂಡಿರುವ ಆಸ್ಪತ್ರೆಗಳ ಸಾಲಿಗೆ ತರುವಂತಹ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಹಾಗೂ ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನವನ್ನು ತರುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದರು.

ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆಗಳಿದ್ದಲ್ಲಿ ಆದಷ್ಟು ಬೇಗ ಬಗೆಹರಿಸುವ ಹಾಗೂ ಆಸ್ಪತ್ರೆಯಲ್ಲಿ ಕ್ಷೇತ್ರದ ಎಲ್ಲಾ ವರ್ಗದ ಜನತೆಗಳಿಗೆ ಎಲ್ಲಾ ರೀತಿಯ ಪ್ರಥಮ ಹಾಗೂ ಅಗತ್ಯ ಚಿಕಿತ್ಸೆ ಸಿಗುವಂತಾಗಬೇಕು ಹಾಗೂ ಇನ್ನು ಮುಂದೆ ಯಾವುದೇ ರೋಗಿಗಳನ್ನು ಸಣ್ಣ ಸಣ್ಣ ಕಾರಣಗಳನಿಟ್ಟು ದೂರದ ಚಿಕ್ಕಮಗಳೂರು, ಹಾಸನ, ಮಂಗಳೂರು, ಸೇರಿದಂತೆ ಎಲ್ಲಿಗೂ ಕಳಿಸಿದಂತೆ ಕನಿಷ್ಠ ಚಿಕಿತ್ಸೆ ನೀಡುವ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಹಾಗೂ ಈ ಆಸ್ಪತ್ರೆಯನ್ನು ಎಲ್ಲಾ ರೀತಿಯಲ್ಲೂ ಮೇಲ್ದರ್ಜೆಗೇರಿಸಲು ಪಣ ತೋಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ನೂತನ ಶಾಸಕಿಯಾಗಿ ಆಯ್ಕೆಯಾದ ನಯನಾ ಮೋಟಮ್ಮಗೆ ಹೂವಿನ ಗುಚ್ಚ ನೀಡಿ ಸನ್ಮಾನಿಸಿದ ಫಾರ್ಮಸಿ ಹೆಡ್ ಅಮೀನ್, ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಎಂಜಿಎಂ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಅಗತ್ಯತೆಗಳಿಗೆ ಶಾಸಕರು ನಮಗೆ ಎಲ್ಲಾ ರೀತಿಯಲ್ಲೂ ಸಹಕರಿಸಬೇಕೆಂದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಹಮ್ಮದ್ ಭಾವ, ಶಂಕರ್, ಹೊಸಕೆರೆ ರಮೇಶ್, ವೆಂಕಟೇಶ್, ಪ್ರಸೂತಿ ತಜ್ಞರಾದ ವಿಜಯಲಕ್ಷ್ಮಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಜೊತೆಗೆ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು