News Karnataka Kannada
Tuesday, April 30 2024
ಚಿಕಮಗಳೂರು

ಚಿಕ್ಕಮಗಳೂರು: ೧೫೦ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಖರ್ಗೆ ಮನವಿ

Chikkamagaluru: Kharge appeals to Congress to win 150 seats
Photo Credit : News Kannada

ಚಿಕ್ಕಮಗಳೂರು: ಸರ್ಕಾರ ರಚನೆ ಸಂದರ್ಭದಲ್ಲಿ ಮಾರ್ಜಿನ್ ಕಡಿಮೆಯಾದಾಗ ನಾಲ್ಕೈದು ಮಂದಿ ಕದ್ದು ಹೋಗುವ ಮೂಲಕ ಕಳ್ಳತನದ ಸರ್ಕಾರ ರಚನೆಗೆ ಸಹಕರಿಸುತ್ತಾರೆ. ಕಳ್ಳರ ಹಾವಳಿ ಜಾಸ್ತಿಯಾದಾಗ ಹುಷಾರಾಗಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷ ಬಹುಸಂಖ್ಯೆ ಅಂದರೆ ೧೫೦ ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸರ್ಕಾರ ಬದಲಾವಣೆಗೆ ಜನ ತಯಾರಾಗಿದ್ದಾರೆ. ೧೨೦ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಮಾರ್ಜಿನ್ ಕಡಿಮೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಾಲ್ಕೈದು ಮಂದಿ ಕದ್ದು ಹೋಗುವ ಮೂಲಕ ಕಳ್ಳತನದ ಸರ್ಕಾರ ರಚ ನೆಗೆ ಮುಂದಾಗುತ್ತಾರೆ. ದೇಶದ ಕೆಲವು ರಾಜ್ಯಗಳಲ್ಲಿ ಇಂತಹ ಉದಾ ಹರಣೆಗಳನ್ನು ಈಗಾಗಲೇ ನಾವು ನೋಡಿದ್ದೇವೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ೧೫೦ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸದೃಢ ಸರ್ಕಾರ ರಚನೆಗೆ ಮುಂದಾಗುತ್ತೇವೆ. ಸಾರ್ವ ಜನಿಕರು ಇದಕ್ಕೆ ಅವಕಾಶ ಕಲ್ಪಿಸಬೇ ಕು ಎಂದರು.

ಸದೃಢ ಸರ್ಕಾರದಿಂದ ಆಡಳಿತ ನಡೆಸಲು ಮತ್ತು ನಾಗರೀಕರಿಗೂ ಒಳ್ಳೆಯದಾಗುತ್ತದೆ ಎಂದರು. ಮಾರ್ಜಿನ್ ಕಡಿಮೆಯಿದ್ದಾಗ ಶಾಸಕರು, ನಾಯಕರುಗಳು ಬ್ಲಾಕ್ ಮೇಲ್ ಮಾಡಲು ಆರಂಭಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸದೃಡ ಸರ್ಕಾರ ಕೊಡಲು ಸಾಧ್ಯವಾಗುವುದಿಲ್ಲ ಎಂದರು.

ಪಕ್ಷ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಘೋಷಿಸಿದ್ದು, ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆ ಗಳನ್ನು ಜಾರಿಗೆ ತರುತ್ತೇವೆ. ಆದರೆ ಇದಕ್ಕೆ ಜನರ ಆರ್ಶೀವಾದದ ಅಗತ್ಯ ವಿದೆ ಎಂದರು.

ಚಿಕ್ಕಮಗಳೂರು ನಮಗೆ ಲಕ್ಕಿ ಜಿಲ್ಲೆ. ಶ್ರೀಮತಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆಯಾಗಿದ್ದು ಅವರು ಇಲ್ಲಿಂದ ಗೆದ್ದು ಹೋದ ಮೇಲೆ ದೇಶದ ಚಿತ್ರಣವೇ ಬದಲಾಯಿತು. ದೇಶದ ಚಿತ್ರಣವನ್ನು ಬದಲಿಸುವ ಶಕ್ತಿ ಚಿಕ್ಕ ಮಗಳೂರಿಗಿರುವ ಕಾರಣ ಪುನಃ ಆ ಕೆಲಸ ಇಲ್ಲಿಂದ ಆಗಲಿದೆ ಎಂದರು.

ಈ ಬಾರಿಯ ಚುನಾವಣೆ ಕೇವ ಲ ರಾಜ್ಯದ ದೃಷ್ಟಿಯಿಂದಲ್ಲದೇ ಇದು ದೇಶದಲ್ಲಿ ಕೂಡಾ ಒಂದು ಒಳ್ಳೆಯ ಸಂದೇಶವನ್ನು ಕೊಡಲಿದೆ. ರಾಜ್ಯ ಅಭಿವೃದ್ದಿ ಪರ ಮತ್ತು ಪ್ರಗತಿಪರ ವಿಚಾರಧಾರೆಗೆ ಪ್ರಸಿದ್ದಿಯಾಗಿದೆ. ದೇಶದ ಕೆಲವೇ ರಾಜ್ಯಗಳ ಪೈಕಿ ಒಳ್ಳೆಯ ಆಡಳಿತ ಕೊಡುವ ರಾಜ್ಯ ಕರ್ನಾಟಕವಾಗಿತ್ತು. ಆದರೀಗ ರಾಜ್ಯ ದಲ್ಲಿ ಆಡಳಿತ ಹಳಿ ತಪ್ಪಿದೆ. ಜನರ ಅಪೇಕ್ಷೆಯಂತೆ ಬಿಜೆಪಿ ಸರ್ಕಾರ ನಡೆ ಯುತ್ತಿಲ್ಲ.

ಶೇ.೪೦ರ ಸರ್ಕಾರ ಎಂದು ಎಲ್ಲ ರೂ ಮಾತನಾಡಲಾರಂಭಿಸಿದ್ದಾರೆ. ಪ್ರಧಾನಿ ಮೋದಿ, ರಾಷ್ಟ್ರಪತಿ, ರಾಜ್ಯ ಪಾಲರು ಹಾಗೂ ಲೋಕಾಯುಕ್ತರಿಗೂ ಪತ್ರ ಬರೆದು ಲೂಟಿ ಸರ್ಕಾರದ ಬದಲಾವಣೆಗೆ ಕೂಗು ಕೇಳಿ ಬರುತ್ತಿದೆ. ಸರ್ಕಾರ ಬದಲಾವಣೆಯಾಗ ಬೇಕೆಂದು ಜನ ಬಯಸಿದ್ದಾರೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಸಹ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ಚಿಕ್ಕಮಗಳೂರು ಪ್ರವಾಸೋದ್ಯ ಮ ಅಭಿವೃದ್ದಿಗೆ ಕೇಂದ್ರ ಸ್ಥಾನವಾಗಿದೆ. ನೈಸರ್ಗಿಕವಾಗಿರುವ ಕೊಡುಗೆ ಯನ್ನು ಉಪಯೋಗಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ದಿಪಡಿಸ ಬಹುದು. ಡಬಲ್ ಇಂಜಿನ್ ಸರ್ಕಾರ ಈ ಬಗ್ಗೆ ಯಾವುದೇ ಆಲೋಚನೆ ನಡೆಸಿಲ್ಲ. ರಾಜ್ಯ ಮತ್ತು ದೇಶದ ಅಭಿವೃಧ್ದಿಯಾಗಬೇಕಾದರೆ ಸರ್ಕಾರ ಬದಲಾವಣೆಯಾಗಲೇಬೇಕು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್, ಬಿ.ಎಂ.ಸಂದೀಪ್, ಬಿ.ಎಂ.ಶಂಕರ್, ಶಾಸಕ ಟಿ.ಡಿ.ರಾಜೇಗೌಡ, ಚಿಕ್ಕಮಗಳೂರು ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ, ಮೂಡಿಗೆರೆ ಅಭ್ಯರ್ಥಿ ನಯಮ ಮೋಟಮ್ಮ, ಮಾಜಿ ಎಂ.ಎಲ್.ಸಿ. ಮೋಟಮ್ಮ, ಗಾಯತ್ರಿ ಶಾಂತೇಗೌಡ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು