ಚಿಕ್ಕಮಗಳೂರು: ಕೇತುಮಾರನಹಳ್ಳಿ ಗ್ರಾಮಸ್ಥರಿಗೆ ಪಂಚರತ್ನ ಯೋಜನೆ ಕುರಿತು ಅರಿವು

ಚಿಕ್ಕಮಗಳೂರು: ಪಂಚರತ್ನ ಯೋಜನೆಗಳು ಕೆಳಮಟ್ಟದ ಜನಸಾಮಾನ್ಯರಿಗೂ ಸ್ಪಂದಿಸುವ ಸಲುವಾಗಿ ಜೆಡಿಎಸ್ ವರಿಷ್ಟರು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಲಾ ಗಿದ್ದಾರೆ ಎಂದು ಚಿಕ್ಕಮಗಳೂರು ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಹೇಳಿದರು.

ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇತು ಮಾರನಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಪಂಚರತ್ನ ಯೋಜನೆ ಹಾಗೂ ಜೆಡಿಎಸ್ ಬೆಂಬಲಿಸಿದರೆ ಮುಂದಿನ ಯಾವ ರೀತಿಯಲ್ಲಿ ಜನಪರ ಕೆಲಸ ಕೈಗೊಳ್ಳಲಾಗುವುದು ಎಂದು ಚರ್ಚಿಸಿ ಅವರು ಮಾತನಾಡುತ್ತಿದ್ದರು.

ನಾಡಿನ ಶ್ರೇಯೋಭಿವೃದ್ದಿಗಾಗಿ ವರಿಷ್ಟರು ವಸತಿ ಆಸರೆ, ಆರೋಗ್ಯವೇ ಸಂಪತ್ತು, ಶಿಕ್ಷಣವೇ ಆಧುನಿಕ ಶಕ್ತಿ, ರೈತ ಚೈತನ್ಯ ಹಾಗೂ ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಕುರಿತು ಯೋಜನೆಗಳನ್ನು ಬಿಡುಗಡೆ ಗೊಳಿಸಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದು ಮತದಾರರು ಈ ಬಾರಿ ಪೂರ್ಣ ಸಹಕಾರ ನೀಡಿದರೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ರೈತಾಪಿ ವರ್ಗಕ್ಕೆ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಲಿಚ್ಚಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲೆ ಹಾಗೂ ರಾಜ್ಯದ ಜನತೆ ಕೈಜೋಡಿಸಬೇಕು. ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಗೆ ಸಾರ್ವಜನಿಕರು ಆಶೀರ್ವಾದ ಮಾಡಿದ್ದಲ್ಲಿ ಹೆಚ್.ಡಿ.ಕೆ. ಅವರು ಮುಖ್ಯಮಂತ್ರಿಯಾಗಿ ಜನತೆಗೆ ಸ್ಪಂದಿಸುವ ಕಾರ್ಯದಲ್ಲಿ ಮುಂದಾ ಗಲಿದ್ದಾರೆ ಎಂದರು.

ಚಿಕ್ಕಮಗಳೂರು ಭಾಗದಲ್ಲಿ ಮಲೆನಾಡು ಹಾಗೂ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದ್ದು ಅಭಿವೃದ್ದಿ ವಿಚಾರದಲ್ಲಿ ಸಾಕಷ್ಟು ಕೆಲಸಗಳಾಗಿರಬೇಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೆಡಿಎಸ್‌ನ್ನು ಬೆಂಬಲಿಸಬೇಕು. ರಾಜ್ಯದ ಭ್ರಷ್ಟರಹಿತ ಆಡಳಿತ ನಡೆಸಲು ಮತದಾರರು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರುಗಳು ಹಾಜರಿದ್ದರು.

Sneha Gowda

Recent Posts

ಮುಂಬೈನಲ್ಲಿ ಹೋರ್ಡಿಂಗ್ ಬಿದ್ದು ಮೂವರು ಸಾವು: 59 ಜನರಿಗೆ ಗಾಯ

ಮುಂಬೈನಲ್ಲಿ ಈ ವರ್ಷದ ಮೊದಲ ಮಳೆಗೆ ಅನಾಹುತ ಸಂಭವಿಸಿದೆ. ಇಂದು ಸಂಜೆ 4.30ರ ಸುಮಾರಿಗೆ ಹೋರ್ಡಿಂಗ್ ಕುಸಿದಿದ್ದರಿಂದ ಸುಮಾರು 100…

1 min ago

ಸಚಿವ ಹೆಚ್‌.ಡಿ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

24 mins ago

ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

ಇ- ಲಾಸ್ಟ್ ಮತ್ತು ಸಿಇಐಆರ್- ಫೋರ್ಟಲ್ ಮೂಲಕ ಕಳೆದು ಹೋಗಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ 52 ಮೊಬೈಲ್‌ಗಳನ್ನು…

36 mins ago

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಂಬಿಕಾ ವಿದ್ಯಾಲಯದ ಸಾಧನೆ: ನೂರು ಶೇಕಡಾ ಫಲಿತಾಂಶ

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು 2023 – 24ನೇ ಸಾಲಿನ…

44 mins ago

ನಾಡ ಜನರ ಬದುಕು ನಂದಾದೀಪವಾಗಲು ನಂದಿ ಬಸವೇಶ್ವರ ತೊಟ್ಟಿಲು ತೂಗಿದ ಗಡಿನಾಡ ನಾರಿಯರು

ಕರ್ನಾಟಕದ ಕಟ್ಟಕಡೆಯ ಗ್ರಾಮವಾದ ಗಡಿನಾಡ ಗ್ರಾಮ ಬಳೂರ್ಗಿ ಗ್ರಾಮ ದೇವ ನಂದಿ ಬಸವೇಶ್ವರರ ತೊಟ್ಟಿಲು ತೂಗುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.…

2 hours ago

ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಯುವಕನೊಬ್ಬನಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮಣ್ಣೂರ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.

2 hours ago