ಚಿಕಮಗಳೂರು

ಚಿಕ್ಕಮಗಳೂರು: ಭಾರತ ಯುವಶಕ್ತಿಯನ್ನು ಹೊಂದಿರುವ ದೇಶ – ಸಿ.ಟಿ.ರವಿ

ಚಿಕ್ಕಮಗಳೂರು: ಭಾರತ ಯುವಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ಎಲ್ಲರೂ ಕೌಶಲ್ಯಧಾರಿತರಾದರೇ, ಭಾರತದ ಅಭಿವೃದ್ಧಿಯ ನಾಗಾಲೋಟವನ್ನು ಹಿಡಿದು ನಿಲ್ಲಿಸುವ ಸಾಮರ್ಥ್ಯ ಯಾವ ದೇಶಕ್ಕೂ ಇಲ ವಾಗಲಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶ ಕೌಶಲ್ಯಾಧಾರಿತವಾಗಿತ್ತು. ಆದರೆ, ಪ್ರತೀ ವೃತ್ತಿಗೆ ಗೌರವದ ಕೊರತೆ ಇತ್ತು. ವೃತ್ತಿ ಯಲ್ಲೂ ಶ್ರೇಷ್ಠ ಮತ್ತು ಕನಿಷ್ಟ ಎಂಬ ಭಾವತೆ ಇತ್ತು. ಇದನ್ನು ದೂರಮಾಡಿ ಕಾಯಕವೇ ಕೈಲಾಸ ಎಂಬಂತೆ ಎಲ್ಲಾ ವೃತ್ತಿಗೂ ಸಾಮಾಜಿಕ ಗೌರವ ತಂದುಕೊಟ್ಟಿದ್ದರೇ, ಆರ್ಥಿಕ ಭರ ವಸೆ ಮೂಡಿಸಿದ್ದರೇ ಕೌಶಲ್ಯ ತರಬೇತಿ ನೀಡುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಅಭಿ ಪ್ರಾಯಿಸಿದರು.

ಮೂಲ ವೃತ್ತಿದಾತರು ವೃತ್ತಿ ಗೌರವವಿಲ್ಲದ ಕಾರಣದಿಂದ ತಮ್ಮ ಮಕ್ಕಳು ಆ ವೃತ್ತಿಯನ್ನು ಮುಂದೂವರೆಸಬೇಕೆಂದು ಭಯಸುವುದಿಲ್ಲ. ಮೂಲ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ ಎಂದ ಅವರು ಎಲ್ಲಾ ವೃತ್ತಿಗಳಿಗೂ ಸಾಮಾಜಿಕ ಗೌರವ ಮತ್ತು ಆರ್ಥಿಕ ಬಲ ತುಂಬಿದ್ದರೇ ಪ್ರತಿಯೊಬ್ಬರಿಗೂ ಸಹಜ ಉದ್ಯೋಗ ದೊರೆಯುತ್ತಿತ್ತು ಎಂದರು.

ಇಂದು ಜಾಗತಿಕವಾಗಿ ಮತ್ತು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಸರ್ಕಾರಿ ಉದ್ಯೋಗ ವ್ಯಮೋಹ ಹೆಚ್ಚುತ್ತಿದ್ದು ಎಲ್ಲರಿಗೂ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಿಲ್ಲ, ಹಾಗಾದರೇ ಬದುಕಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ವಿಶ್ವಾಸದಿಂದ ಬದುಕು ವಂತೆ ಮಾಡುವುದೇ ಕೌಶಲ್ಯಾಭಿವೃದ್ಧಿ ತರಬೇತಿಯಾಗಿದೆ ಎಂದರು.

ತರಬೇತಿ ಪಡೆದುಕೊಂಡವರಲ್ಲಿ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಕೌಶಲ್ಯದ ಉದ್ಯೋಗಗಳಿಂ ದ ಎಲ್ಲಿಬೇಕಾದರೂ ಬದುಕಬಹುದು, ಆದರೆ, ಮಾನಸಿಕವಾಗಿ ತಯಾರಿಯಾಗಬೇಕು ಎಂದ ಅವರು ಎಲ್ಲಾ ಉದ್ಯೋಗಗಳು ಗೌರವದ ಉದ್ಯೋಗಗಳೇ ಎಂಬ ಭಾವನೆ ತುಂಬಬೇಕು ಎಂದರು.

ಭಾರತ ಯುವಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ಎಲ್ಲರೂ ಕೌಶಲ್ಯಧಾರಿತರಾದರೇ, ಭಾರತವನ್ನು ಹಿಡಿದು ನಿಲ್ಲಿಸುವ ಸಾಮರ್ಥ್ಯ ಯಾವ ದೇಶಕ್ಕೂ ಇಲ್ಲ. ದೊಡ್ಡ ಕನಸ್ಸು ಕಾಣಿ ಆ ಕಡೆಗೆ ಹೆಜ್ಜೆ ಹಾಕಿ ಎಂದ ಅವರು ಉದ್ಯೋಗಕ್ಕೆ ಅರ್ಜಿ ಹಾಕುವ ಬದಲು ಅನುಭವ ಪ ಡೆದು ಇನ್ನೊಬ್ಬರಿಗೆ ಉದ್ಯೋಗ ನೀಡಿ ಎಂದು ತಿಳಿಸಿದರು.

ಐಡಿಎಸ್‌ಜಿ ಕಾಲೇಜು ಪ್ರಾಂಶುಪಾಲ ರಮೇಶ್ ಮಾತನಾಡಿ, ದೇಶದಲ್ಲಿ ಯುವ ಜನತೆ ಸಂಖ್ಯೆ ಹೆಚ್ಚಿದ್ದು, ಯುವ ಜನತೆ ಸದೃಢರಾಗಿ ಅವರು ತಮ್ಮ ಕಾಲಮೇಲೆ ತಾವು ನಿಂತಾಗ ದೇಶ ಸದೃಢವಾಗುತ್ತದೆ ಎಂದರು. ಉದ್ಯೋಗ ಮೇಳದಲ್ಲಿ ೩,೫೦೦ ಉದ್ಯೋಗ ವಕಾಶಗಳು ಇದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದ ಅವರು, ಉದ್ಯೋಗಮೇಳಗಳು ನಡೆಯುತ್ತಿರಬೇ ಕು. ಆಗ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸುತ್ತದೆ ಎಂದು ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ರಾಜೇಶ್, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಪ್ರಶಾಂತ್ ಹಾಗೂ ಐಡಿಎಸ್‌ಜಿ ಕಾಲೇಜು ಸಿಬ್ಬಂದಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳು ಇದ್ದರು.

Ashika S

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

6 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

6 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

6 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

7 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

7 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

7 hours ago