ಚಿಕಮಗಳೂರು

ಚಿಕ್ಕಮಗಳೂರು: ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿ, ತೊಗರಿಹಂಕಲ್ ಹಾಗೂ ದಾಸರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಮಾರು ೮೦ಕ್ಕೂ ಹೆಚ್ಚು ಮಂದಿ ಬಿಜೆಪಿ ಮುಖಂಡರುಗಳು ಪಕ್ಷ ತೊರೆದು ಕಾಂಗ್ರೆಸ್ ತತ್ವ, ಸಿದ್ದಾಂತವನ್ನು ಒಪ್ಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸಂಜೆ ಪಕ್ಷ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೂಲಿ ಕಾರ್ಮಿಕರು, ಬಡವರು, ರೈತರು, ದೀನದಲಿತರು ಬಳಸುವ ದಿನನಿತ್ಯ ಪದಾರ್ಥಗಳ ಬೆಲೆಯನ್ನು ಗಗನಕೇರಿಸಿ ಹಾಗೂ ಕಳಪೆ ಕಾಮಗಾರಿಯ ನಡೆಸಿರುವ ಪರಿಣಾಮ ಬಿಜೆಪಿಯ ವಿರುದ್ಧ ಇಂದು ಕ್ಷೇತ್ರದ ಅತಿಹೆಚ್ಚು ಯುವಕರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.

ಹಿರಿಯ ಮುಖಂಡ ಕೆ.ಮಹಮ್ಮದ್ ಮಾತನಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಪ್ರತಿಯೊಬ್ಬ ಮುಖಂಡರು ಶ್ರಮವಹಿಸಿ ಕೆಲಸ ಮಾಡಿದರೆ ರಾಜ್ಯದಲ್ಲಿ ಸದೃಢ ಸರ್ಕಾರ ರಚನೆಗೊಂಡು ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ತಿಳಿಸಿದರು.

ಪಕ್ಷದ ಆಕಾಂಕ್ಷಿ ಹೆಚ್.ಡಿ.ತಮ್ಮಯ್ಯ ಮಾತನಾಡಿ ಬಿಜೆಪಿಯ ಶಾಸಕರು ಭಾವನೆಗಳ ಬಗ್ಗೆ ಮಾತನಾಡು ತ್ತಿದ್ದಾರೆ. ಆದರೆ ಜನರಿಗೆ ಬದುಕು ಮುಖ್ಯ. ಆ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಬಿಜೆಪಿಯವರಿಗೆ ಈ ಬಾರಿ ಸೋಲಿನ ಭೀತಿ ಎದ್ದು ಕಾಣುತ್ತಿದೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಮುಂಡಾಳ ಸಮಾಜದ ತಾಲೂಕು ಅಧ್ಯಕ್ಷ ವಾಸು, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಂತೋಷ್ ಹಾಗೂ ಮುಖಂಡರಾದ ಮಲ್ಲೇನಹಳ್ಳಿ ಶಿವಣ್ಣ, ಸೋಮಶೇಖರ್, ಮಹೇಶ್, ಸಂದೀಪ್, ಮೋಹನ್, ಅರುಣ್ ಸೇರಿದಂತೆ ೮೦ ಮಂದಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಶಿವಾನಂದ್, ಕುಮಾರ್‌ಸ್ವಾಮಿ, ಅಶೋಕ, ಲೋಕೇಶ್ ಕಲ್ಲೇಶ್, ಸುರೇಶ್, ವಲ್ಲಿ ಪನ್ನೀರ್, ಜಗದೀಶ್, ಧರ್ಮಯ್ಯ, ಸುರೇಶ್, ಹಿರೇಮಗಳೂರು ನಾಗೇಶ್, ತಿಮ್ಮಯ್ಯ ಸಚಿನ್ ಉಪಸ್ಥಿತರಿದ್ದರು.

Gayathri SG

Recent Posts

ಬೀದರ್: ಗಡಿಭಾಗದಲ್ಲಿ ಮಾದರಿ ಸರ್ಕಾರಿ ಪ್ರೌಢಶಾಲೆ

ಶಿಕ್ಷಕರು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಶ್ರಮಿಸಿದರೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆಯುತ್ತವೆ. ಇದಕ್ಕೆ ಪಟ್ಟಣದ ಸರ್ಕಾರಿ ಪ್ರೌಢಶಾಲೆ…

9 mins ago

ಜೊಮ್ಯಾಟೊದಲ್ಲಿ ಆರ್ಡರ್‌ : ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌

ಜೊಮ್ಯಾಟೊದಿಂದ ಆರ್ಡರ್‌ ಮಾಡಿದ ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌ ಸಿಕ್ಕಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

21 mins ago

ಅಂಜಲಿ‌ ಕೊಲೆಗೆ ಪೊಲೀಸರೇ ಹೊಣೆ : ದಿಂಗಾಲೇಶ್ವರ ಸ್ವಾಮೀಜಿ ಆರೋಪ

ಅಂಜಲಿ ಕೊಲೆಗೆ ಪೊಲೀಸರೆ ಹೊಣೆ ಅವರ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ. ಅಂಜಲಿ…

26 mins ago

ಗೆಲ್ಲುತ್ತೀ ಎಂದು ಪಂಜುರ್ಲಿ ದೈವ ಹೇಳಿದೆ, ಹಿಂದೆ ಸರಿಯೊಲ್ಲ: ರಘುಪತಿ ಭಟ್

ಮೂರು ಬಾರಿ ಶಾಸಕನಾಗಿದ್ದ ತಮಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ತಾನು ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ…

34 mins ago

ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ದಂಪತಿ : ನರಳಿ ಪ್ರಾಣ ಬಿಟ್ಟ ಕಂದಮ್ಮ

ನಗರದ ಕೋಟದಲ್ಲಿ ಕಾರಿನಲ್ಲೇ ಮಗುವನ್ನು ಮರೆತು ದಂಪತಿ ಮದುವೆಗೆ ತೆರಳಿದ್ದು ಮಗು ನರಳಿ ನರಳಿ ಕಾರಿನಲ್ಲೆ ಪ್ರಾಣ ಬಿಟ್ಟಿರುವ ದಾರುಣ…

44 mins ago

ʼಸಮಸ್ಯೆ ಬಗೆಹರಿಸಿ ಇಲ್ಲ ಒಂದು ತೊಟ್ಟು ವಿಷ ಕೊಡಿʼ ಎಂದ ಗ್ರಾಮಸ್ಥರು

ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು,…

45 mins ago