ಚಿಕ್ಕಮಗಳೂರು: ಆಂಬ್ಯುಲೆನ್ಸ್ ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿನ ಘಾಟ್ ನ ತಿರುವಿನಲ್ಲಿ ಗುರುವಾರ ನಡೆದಿದೆ.
ಮಂಗಳೂರಿನಿಂದ ಮೂಡಿಗೆರೆಗೆ ರೋಗಿಯನ್ನು ಬಿಡುತ್ತಿದ್ದ ಆಂಬ್ಯುಲೆನ್ಸ್ ನ ಚಾಲಕ ನಿಯಂತ್ರಣ ಕಳೆದುಕೊಂಡು ಘಾಟ್ ನ ಮೊದಲ ತಿರುವಿನಲ್ಲಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕರು ದರ್ಶನ ಮುಗಿಸಿ ಧರ್ಮಸ್ಥಳದಿಂದ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಎರಡೂ ವಾಹನಗಳು ಜಖಂಗೊಂಡಿವೆ.