ಚಿಕ್ಕಮಗಳೂರು: ಮಹಾವೀರ ಜಯಂತಿ ಅಂಗವಾಗಿ ಉಚಿತ ಕೃತಕ ಕಾಲು ಜೋಡಣಾ ಕಾರ್ಯಕ್ರಮ

ಚಿಕ್ಕಮಗಳೂರು: ಮಹಾವೀರ್ ಜಯಂತಿ ಅಂಗವಾಗಿ ಜೈನ್ ಶ್ವೇತಾಂ ಬರ ಮಹಿಳಾ ಮಂಡಲ ವತಿಯಿಂದ ಅಂಗವಿಕಲರಿಗೆ ಉಚಿತವಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಜೈನ್ ಸಮುದಾಯ ಭವನದಲ್ಲಿ  ನಡೆಯಿತು.

ಜೈನ್ ಶ್ವೇತಂಬರ ಮಹಿಳಾ ಸಂಘದ ಅಧ್ಯಕ್ಷೆ ನರಿತಾಗಾದಿಯಾ ಮಾತನಾಡಿ ಮಹಾವೀರ್ ಜಯಂತಿ ಪ್ರಯುಕ್ತ ಜೈನ್ ಶ್ವೇತಾಂಬರ ಮಹಿಳಾ ಸಂಘದಿಂದ ಉಚಿತವಾಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಪ್ರತಿ ವರ್ಷ ಮಹಾವೀರ ಜಯಂತಿಯ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ನಡೆಸ ಲಾಗುತಿತ್ತು, ಈ ಬಾರಿ ವಿಶೇಷವಾಗಿ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ, ಇದು ೨ ದಿನದ ಕಾರ್ಯಕ್ರಮ ಆಗಿರುವುದರಿಂದ ಎಲ್ಲರು ಇದರ ಉಪಯೋಗ ಪಡೆದುಕೊಳ್ಳು ವುದರ ಜತೆಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ತಿಳಿಸಿದರು.

ಜೈನ್ ಸಂಘದ ಅಧ್ಯಕ್ಷರಾದ ಕಾಂತಿಲಾಲ್ ಖಿವೇಸರ್ ಮಾತನಾಡಿ ಮಹಾವೀರ ಜನ್ಮ ಕಲ್ಯಾಣೋತ್ಸವದ ಪ್ರಯುಕ್ತ ಜೈನ್ ಸಂಘದ ಆಶ್ರಯದಲ್ಲಿ ರುವ ಮಹಿಳಾ ಮಂಡಲ ಮತ್ತು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಶಾಖೆ ಬೆಂಗಳೂರು ಅವರಿಂದ ಕೃತಕ ಕಾಲು ಜೋಡಣೆ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ, ಜನರಿಗೆ ಒಳ್ಳೆಯದಾಗಿಲಿ ಎಂಬ ನಿಟ್ಟಿನಿಂದ ಕಾಲು ರಹಿತರಿಗೆ ಉಚಿತವಾಗಿ ಕಾಲು ಜೊಡಣೆ ಮಾಡಲಾಗುತ್ತಿದ್ದು, ಜೈನ್ ಸಂಘದ ಕಾರ್ಯಕ್ರಮವು ಜನ ಸೇವೆಗೆ ಪ್ರಾಮುಖ್ಯತೆ ನೀಡಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ ಎಂದರು.

ಜೈನ್ ದೇವಸ್ಥಾನದ ಕಾರ್ಯದರ್ಶಿ ಸಂಜಯ್ ಜೈನ್ ಮಾತನಾಡಿ ಮಹಾವೀರ ಜಯಂತಿ ಪ್ರಯುಕ್ತ ಜೈನ್ ಸಂಘದ ಅಂಗವಾದ ಶ್ವೇತಂಬರ ಮಹಿಳಾ ಸಂಘದ ವತಿಯಿಂದ ಕೃತಕ ಕಾಲು ಜೊಡಣೆ ಶಿಬಿರವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಂದು ಜೀವಿಗೆ ತನ್ನ ದೇಹದ ಪ್ರತಿಯೊಂದು ಅಂಗವು ಅತಿ ಮುಖ್ಯ ವಾದದ್ದು, ಒಂದು ಅಂಗ ಇಲ್ಲವಾದರು ಜೀವನ ಸಾಗಿಸಲು ಕಷ್ಟವಾಗುತ್ತದೆ, ಇಂತಹ ಸಂದರ್ಭದಲ್ಲಿ ಮಹಿಳಾ ಸಂಘದ ವತಿಯಿಂದ ಕೃತಕ ಕಾಲು ಜೊಡಣೆ ಶಿಬಿರವನ್ನು ನಡೆಸುತ್ತಿರುವುದು ಒಂದೊಳ್ಳೆಯ ವಿಷಯವಾಗಿದೆ, ೬೦ ರಿಂದ ೭೦ ಜನ ಫಲಾನುಭವಿಗಳು ಬಂದಿದ್ದು, ಮರುದಿನವು ಶಿಬಿರ ಇರುವು ದರಿಂದ ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊ ಳ್ಳುವಂತೆ ತಿಳಿಸಿದರು.

ಜೈನ್ ಶ್ವೇತಂಬರ ಮಹಿಳಾ ಸಂಘದ ಪೂರ್ವ ಅಧ್ಯಕ್ಷೆ ಮಂಜುಳಾ ಬನ್ಸಾಲಿ ಮಾತನಾಡಿ ಮಹಾವೀರ ಭಗವಾನ್  ಜನ್ಮ ದಿನೋತ್ಸವದ ಅಂಗವಾಗಿ, ಮಹಿಳಾ ಮಂಡಲ ವತಿಯಿಂದ ಎರಡು ದಿನದ ಶಿಬಿರವನ್ನು ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಕೃತಕ ಕಾಲು ಜೊಡಣೆಯನ್ನು ಮಾಡಲಾಗುತ್ತಿದೆ, ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆಯಬೇಕು, ಮಹಾವೀರ ಭಗವಾನ್ ರವರ ಕೃಪೆಯಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಜನರಿಗೆ ಉಪಯೋಗವಾಗಿ ಅವರ ಜೀವನಕ್ಕೆ ಬೆಂಬಲ ಸಿಗುವಂತಾಗಲಿ ಎಂದರು.ಈ ಸಂದರ್ಭದಲ್ಲಿ ಜೈನ್ ಸಂಘದ ಕಾರ್ಯದರ್ಶಿ ರಮೇಶ್‌ಖಿವೇಸರ್, ಮುಖಂಡರುಗಳಾದ ಲಾಲ್‌ಚಂದ್ ಜೈನ್, ಮಹೇಂದ್ರ ಸಿಯಾಲ್, ದೀಪಕ್‌ದುಗಡ, ಜಸ್ವಂತ್‌ಡೋಸಿ, ಗೌತಮ್‌ಚಂದ್ ಸಿಯಾಲ್, ಮಹಿಳಾ ಸಂಘದ ಕಾರ್ಯದರ್ಶಿ ನಿತಾಖಿವೇಸರ್, ಗೀತಾಸೋನಾಲಿಕ, ದೀಪಿಕಪಿರ್ಗಲ್, ಶಾಮತಿದೇವಿ ಮತ್ತಿತತರು ಉಪಸ್ಥಿತರಿದ್ದರು.

Gayathri SG

Recent Posts

ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಶನಿವಾರ ಅರೆಸ್ಟ್ ವಾರಂಟ್…

5 mins ago

ಸರಣಿ ಅಪಘಾತ: ಎರ್ಟಿಗಾ ಕಾರು ಸಂಪೂರ್ಣ ‌ನಜ್ಜುಗುಜ್ಜು

ಭೀಕರ ಸರಣಿ ಅಪಘಾತವು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ.

9 mins ago

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

39 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

46 mins ago

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

58 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

1 hour ago