News Karnataka Kannada
Friday, May 10 2024
ಚಿಕಮಗಳೂರು

ತಪ್ಪು ಸೈಜ್​ನ ಶೂ ಡೆಲಿವರಿ ಮಾಡಿದ ಕಂಪನಿಗೆ 10 ಸಾವಿರ ರೂ. ದಂಡ

Ajio
Photo Credit : News Kannada

ಚಿಕ್ಕಮಗಳೂರು: ಚಿಕ್ಕಮಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರಿಲಯನ್ಸ್ ರಿಟೇಲ್ ಲಿಮಿಟೆಡ್ ಒಡೆತನದ ಇ-ಕಾಮರ್ಸ್ ವೆಬ್‌ಸೈಟ್ ಅಜಿಯೊ ಕಂಪನಿಗೆ 10,000 ರೂಪಾಯಿ ದಂಡ ವಿಧಿಸಿದೆ. ಅಜಿಯೊ ಕಂಪನಿಯು 9,294 ರೂಪಾಯಿ ಮೌಲ್ಯದ ತಪ್ಪಾದ ಸೈಜ್​ನ Nike ಶೂಗಳನ್ನು ​ನೀಡಿದ್ದಕ್ಕಾಗಿ ಮತ್ತು ನಂತರ ಸರಿಯಾದ ಸೈಜ್​ ಶೂಗಳನ್ನು ಗ್ರಾಹಕರಿಗೆ ನೀಡಲು ನಿರಾಕರಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.

ಹರೀಶ್​ ಎಂಬುವರು ತಮ್ಮ ಇಬ್ಬರು ಮಕ್ಕಳಿಗೆ Ajio ಆ್ಯಪ್​ನಲ್ಲಿ Nike ಕಂಪನಿಯ ಮೂರು ಜೋಡಿ ಶೂಗಳನ್ನು ಆರ್ಡ್​​ರ್​ ಮಾಡಿದ್ದರು. ಇದಕ್ಕೆ 14,443 ರೂ. ಪಾವತಿಸಿದ್ದರು. ಆದರೆ Nike Air Zoom Vomero ಕಂಪನಿಯು UK-9 ಮತ್ತು UK-8 ನಂಬರ್​ನ ತಪ್ಪು ಸೈಜ್​​ನ ಶೂಗಳನ್ನು ಡೆಲಿವರಿ ಮಾಡಿತು.

ಹೀಗಾಗಿ ಹರೀಶ್​ ಅವರು ಎಕ್ಸ್ಚೇಂಜ್ ಮಾಡುವಂತೆ Ajio ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದರು. ಆದರೆ ಕಂಪನಿಯು ಇದಕ್ಕೆ ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ಹರೀಶ್​ ಅವರು ಸಿಡಿಆರ್​ಸಿ ಮೊರೆ ಹೋದರು. ಸಿಡಿಆರ್​ಸಿಯಲ್ಲಿ ದಾವೆ ಹೂಡಿದರು.

ಸರಿಯಾದ ಗಾತ್ರದೊಂದಿಗೆ ಬೂಟುಗಳನ್ನು ವಿತರಿಸಲು ವಿಫಲವಾದ ಅಜಿಯೊ ತಪ್ಪಿತಸ್ಥವೆಂದು ಕಂಡುಹಿಡಿದಿದೆ. ಹೀಗಾಗಿ Ajio 9,294 ರೂ. ಅನ್ನು ಮರುಪಾವತಿಸಬೇಕು. ಜೊತೆಗೆ 10,000 ರೂ. ಪರಿಹಾರ ಮತ್ತು ದಾವೆ ವೆಚ್ಚಗಳಿಗೆ ವ್ಯಯಿಸಿದ 5,000 ರೂ. ಅನ್ನು ಗ್ರಾಹಕರಿಗೆ ನೀಡಬೇಕು ಎಂದು ಸೂಚಿಸಿದೆ.

ಈ ಮೊತ್ತವನ್ನು ಒಂದು ತಿಂಗಳೊಳಗೆ ನೀಡಬೇಕು. ವಿಫಲವಾದರೆ ಅದು ವಾರ್ಷಿಕ ಶೇ 8 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಎನ್.ಆರ್.ಚೆನ್ನಕೇಶವ ನೇತೃತ್ವದಲ್ಲಿ ಸದಸ್ಯ ಮಂಜುನಾಥ ಎಂ.ಬಮ್ಮನಕಟ್ಟಿ ಅವರನ್ನೊಳಗೊಂಡ ಆಯೋಗ ಈ ಆದೇಶ ಹೊರಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು