News Karnataka Kannada
Tuesday, April 30 2024
ಚಿಕಮಗಳೂರು

ಬೀರೂರು: ಪ್ರೀತಿ ರಾಜಕಾರಣವನ್ನು ಮತ್ತೆ ಗೆಲ್ಲಿಸಿ, ವಿರೋಧಿಗಳಿಗೆ ಉತ್ತರಿಸಿ

Win back the politics of love, answer to the opponents
Photo Credit : News Kannada

ಬೀರೂರು: ಕ್ಷೇತ್ರದಲ್ಲಿ ಹಾಗೂ ರಾಜ್ಯದಲ್ಲಿಜನ ಭ್ರಷ್ಟಚಾರ ಮತ್ತು ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿರುವ ಜನಸಾಮಾನ್ಯರ ಬದುಕಿಗೆ ಭರವಸೆ ತುಂಬಲು ಮತ್ತುರೈತರ ಬದುಕು ಹಸನಾಗಿಸಲು ಜೆಡಿಎಸ್ ಬೆಂಬಲಿಸ ಬೇಕು ಎಂದು ಪಕ್ಷದ ಅಭ್ಯರ್ಥಿ ವೈ.ಎಸ್.ವಿ.ದತ್ತ ಮನವಿ ಮಾಡಿದರು.

ಅವರು ಪಟ್ಟಣದ ಹೊಸ ಅಜ್ಜಂಪುರರಸ್ತೆಯಲ್ಲಿರುವ ಸರಸ್ವತಿಪುರಂ ಬಡಾವಣೆಯಲ್ಲಿರುವ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬೈಕ್‌ಜಾಥಾ ಮತ್ತುರೋಡ್ ಶೋ ಗೆ ಚಾಲನೆ ನೀಡಿ ಮತಯಾಚಿಸಿ ಅವರು ಮಾತನಾಡಿದರು.

ಪಕ್ಷದ ಪ್ರಣಾಳಿಕೆಯಲ್ಲಿ ಬಡವರ, ರೈತರ ಏಳಿಗೆಗಾಗಿ ಪಂಚರತ್ನ ಯೋಜನೆ ರೂಪಿಸ ಲಾಗಿದೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲು ಕಲ್ಪಿಸಿ ಯುವಜನರಿಗೆ ಉದ್ಯೋಗ ದೊರಕಿಸು ವುದು ಕೂಡಾ ಆದ್ಯತೆಯ ವಿಷಯ ವಾಗಿದೆ. ಅಲ್ಲದೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ವಕೀಲರ ರಕ್ಷಣಾಕಾಯ್ದೆ, ಅಂಗವಿಕಲರಿಗೆ, ಹಿರಿಯರಿಗೆ ಪಿಂಚಣಿ ಹೆಚ್ಚಳ ಯೋಜನೆ ಘೋಷಿಸಲಾಗಿದೆ. ಮತದಾರರು ರೈತಪರ ಸರ್ಕಾರ ಅಧಿಕಾ ರಕ್ಕೆ ತರಲು ಜೆಡಿಎಸ್ ಪರಜನಾದೇಶ ನೀಡುವ ಭರವಸೆಇದೆ ಎಂದರು.

ನಾನು ಯಾರನ್ನೂ ಟೀಕಿಸುವುದಿಲ್ಲ, ನನ್ನ ಮತದಾರ, ಅಭಿಮಾನಿಗಳ ಆಶಯದಂತೆ ಕಣದಲ್ಲಿದ್ದೇನೆ. ಸೋಲು-ಗೆಲುವು ಎರಡೂ ನೋಡಿದ್ದೇನೆ. ಸ್ವಾರ್ಥರಾಜಕಾರಣ, ದ್ವೇಷ ರಾಜಕಾರಣಕ್ಕೆ ಆಸ್ಪದ ನೀಡದೇ ಪ್ರೀತಿ ರಾಜಕಾರಣಕ್ಕೆ ಕಡೂರು ಕ್ಷೇತ್ರದ ಜನರು ಹೃದಯ ತುಂಬಿ ನನ್ನನ್ನು ಪ್ರೀತಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಡೆಯ ಬಾರಿಗೆ ಅವರ ಋಣ ತೀರಿಸಲು ಅವಕಾಶ ಕೋರುತಿದ್ದೇನೆ ಎಂದರು.

ಮಾಜಿ ಪ್ರಧಾನಿ ದೇವೇಗೌಡರು ಮುಸ್ಲಿಮರಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ನೆರವಾಗುವ ಉದ್ದೇಶ ದಿಂದ ಕಲ್ಪಿಸಿದ್ದ ಮೀಸಲಾತಿ ಮರು ಜಾರಿಗೊಳಿಸುವುದು ಪಕ್ಷದ ನಿರ್ಧಾರವಾಗಿದೆ. ಅಲ್ಪಸಂಖ್ಯಾತ ಬಂಧುಗಳು ಹೆದರುವ ಅಗತ್ಯವಿಲ್ಲ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಬಂದೆ ಬರುತ್ತದೆ. ಕಡೂರುಕ್ಷೇತ್ರದಲ್ಲಿ ಹಣ ಬಲಕ್ಕೆ ಆಸ್ಪದ ನೀಡದೆ ಮತ್ತೊಮ್ಮೆ ಪ್ರೀತಿ ರಾಜಕಾರಣವನ್ನು ಗೆಲ್ಲಿಸುವುದು ಜೆಡಿಎಸ್ ಗೆ ಮತ ನೀಡುವ ಮೂಲಕ ನಿಮ್ಮಕೈಯಲ್ಲಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಎಂ.ವಿನಾಯಕ್ ಮಾತನಾಡಿ, ಕಳೆದ ಅವಧಿಯಲ್ಲಿ ಕ್ಷೇತ್ರದಲ್ಲಿ ಭ್ರಷ್ಟಚಾರ ನಡೆದಿರುವ ಬಗ್ಗೆ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಅದನ್ನು ತೊಲಗಿಸಲು ನಿಮ್ಮ ಸಹಕಾರ ಅತ್ಯಗತ್ಯ .ಗ್ರಾಮೀಣ ಭಾಗಗಳಲ್ಲಿ ದತ್ತರವರು ಶಾಸಕರಾಗಿದ್ದ ಸಂದರ್ಭದಲ್ಲಿ ಮಾಡಿರುವ ಜನಪರ ಕೆಲಸಗಳು ಇಂದು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗುತ್ತವೆ ಎಂದರು.

ಜೆ.ಡಿಎಸ್ ನ ರಾಜ್ಯ ಮಹಿಳಾ ಕಾರ್ಯದರ್ಶಿ ಹಾಗೂ ಸ್ಟಾರ್ ಪ್ರಚಾರಕಿ ನಜ್ಮಾ ನಜೀರ್ ಮಾತನಾಡಿ, ಮುಸಲ್ಮಾನ್ ಹೆಣ್ಣು ಮಕ್ಕಳ ಪರಧ್ವನಿ ಎತ್ತಬೇಕುಅವರ ಕಷ್ಟಗಳ ನಿವಾರಣೆ ಮಾಡಬೇಕೆ ಎಂದು ದತ್ತಣ್ಣ ನನ್ನ ರಾಜಕೀಯಕ್ಕೆ ಕರೆ ತಂದರು. ದತ್ತಣ್ಣನ ಗೆಲುವು ಬಡಜನರ ಗೆಲುವು. ಕುಮಾರಣ್ಣ ಸುಮ್ಮನೆ ನಿಮ್ಮ ಬಳಿ ಮತ ಕೇಳಿಲ್ಲ, ಕೊಟ್ಟ ಮಾತಿನಂತೆ ನಡೆದುಕೊಂಡು ಸಾಲ ಮನ್ನಾ ಮಾಡಿದ್ದಾರೆ ಅದನ್ನು ಮರಿಬೇಡಿ. ಇವತ್ತು ಈ ಹಾಳು ೪೦% ಸರ್ಕಾರದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ. ಅದರಲ್ಲಿ ಕಡೂರಲ್ಲಿ ಹೆಚ್ಚಿದೆ. ದುಡ್ಡಿರುವವರಿಗೆ ಮಾತ್ರ ಕಾಂಗ್ರೆಸ್ ನಲ್ಲಿ ಅವಕಾಶ ಅದನ್ನು ಮನಗಂಡು ಕ್ರಮ ಸಂಖ್ಯೆ ೨ಅಂದ್ರೆ ವಿಕ್ಟರಿ ಸಂಕೇತ ಅದಕ್ಕೆ ಮತ ನೀಡಿ ಅತ್ಯಧಿಕ ಮತಗಳಿಂದ ದತ್ತಣ್ಣನ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮೆರವಣಿಗೆ ಮಹಾತ್ಮಗಾಂಧಿ ವೃತ್ತಕ್ಕೆಆಗಮಿಸುತ್ತಿದ್ದಂತೆದತ್ತ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಕಾರ್ಯಕರ್ತರುಕ್ರೇನ್ ಮೂಲಕ ಬೃಹತ್‌ಗಾತ್ರದ ಮೋಸಂಬಿ ಹಾರ ಹಾಕಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು.ಈ ಸಂಧರ್ಭದಲ್ಲಿ ಮುಕ್ಕಾಲು ಗಂಟೆಟ್ರಾಫಿಕ್ ಜಾಮ್ ಆಗಿದುದು ಕಂಡು ಬಂತು.

ಮೆರವಣಿಗೆಯಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕುಅಧ್ಯಕ್ಷರು ಮುಖಂಡರು, ಪುರಸಭಾ ಸದಸ್ಯರುಗಳು ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು