ಹರ್ಷ ಹತ್ಯೆಯ ಕುರಿತು ಅವಹೇಳನಕಾರಿ ಪೋಸ್ಟ್: ಫೇಸ್‌ಬುಕ್ ಪೇಜ್ ವಿರುದ್ಧ ಸಿಐಡಿ ತನಿಖೆ

ಮಂಗಳೂರು : ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆಯ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ‘ಮಂಗಳೂರು ಮುಸ್ಲಿಂ’ ಫೇಸ್‌ಬುಕ್ ಪೇಜ್ ವಿರುದ್ಧ ಸಿಐಡಿ (ಅಪರಾಧ ತನಿಖಾ ದಳ) ತನಿಖೆ ಆರಂಭಿಸಿದೆ.

ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ವಿಭಾಗವು ಬೆಂಗಳೂರಿನ ಅತೀಕ್ ಷರೀಫ್ ಮತ್ತು ‘ಮಂಗಳೂರು ಮುಸ್ಲಿಮ್ಸ್’ ನ ನಿರ್ವಾಹಕರ ವಿರುದ್ಧ ಫೆಬ್ರವರಿ 23 ರಂದು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿದ್ದು, ಫೇಸ್ ಬುಕ್ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್ ಪುಟ ಈ ಹಿಂದೆಯೂ ಹಿಂದೂ ಪರ ಸಂಘಟನೆಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡಿತ್ತು. 2016 ರಲ್ಲಿ, ಕಟೀಲು ದೇವಿ ದುರ್ಗಾಪರಮೇಶ್ವರಿಯ ಪೋಸ್ಟ್‌ ಮಾಡಿದ ಬಳಿಕ ಖಾತೆಯನ್ನು ನಿರ್ಬಂಧಿಸಲಾಗಿತ್ತಾದರೂ, ಹೊಸ ಪ್ರೊಫೈಲ್ ಹೆಸರಿನೊಂದಿಗೆ ಇನ್ನೊಂದು ಪುಟವನ್ನು ತೆರೆಯಲಾಗಿತ್ತು.

Gayathri SG

Recent Posts

ಮೇ 13 ರಿಂದ 17ರ ವರೆಗೆ  ಚಿಣ್ಣರ ಕಲರವ – 2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರ

ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸಂತ ಜೆರೋಸಾ…

5 mins ago

ತಾಕತ್ತಿದ್ದರೆ ಪಿಒಕೆಯನ್ನು ವಾಪಸ್ ಪಡೆಯಲಿ: ರಾಜನಾಥ್ ಸಿಂಗ್​ಗೆ ಟಾಂಟ್ ಕೊಟ್ಟ ಫಾರೂಕ್ ಅಬ್ದುಲ್ಲಾ

ಪಿಒಕೆಯನ್ನು ಭಾರತ ಆಕ್ರಮಿಸುವಾಗ ಪಾಕಿಸ್ತಾನ ಕೈಗೆ ಬಳೆ ತೊಟ್ಟಿರುವುದಿಲ್ಲ.ರಾಜನಾಥ್ ಸಿಂಗ್​ಗೆ ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲಿ ನೋಡೋಣ…

32 mins ago

ಅಲ್‌–ಜಜೀರಾ ಸುದ್ದಿವಾಹಿನಿ ಕಚೇರಿ ಮುಚ್ಚಲು ಸರ್ಕಾರ ತೀರ್ಮಾನಿಸಿದೆ ಎಂದ ಇಸ್ರೇಲ್ ಪ್ರಧಾನಿ

ಕತಾರ್ ಮಾಲೀಕತ್ವದ ಅಲ್‌–ಜಜೀರಾ ಸುದ್ದಿವಾಹಿನಿಯ ಸ್ಥಳೀಯ ಕಚೇರಿಗಳನ್ನು ಮುಚ್ಚಲು ಸರ್ಕಾರ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್…

57 mins ago

40 ವರ್ಷದ ರಾಜಕಾರಣದಲ್ಲಿ ಯಾವುದೇ ಆಪಾದನೆಗಳು ಇರಲಿಲ್ಲ: ಬಂಧನದ ಬಳಿಕ ರೇವಣ್ಣ ಮೊದಲ ಪ್ರತಿಕ್ರಿಯೆ

ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಮೊದಲ ಬಾರಿಗೆ…

1 hour ago

ಅಕ್ರಮ ಗೋಮಾಂಸ ಸಾಗಾಟ: ವಾಹನ ಪೊಲೀಸರ ವಶಕ್ಕೆ

ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ವಾಹನವನ್ನು ತಡೆದು ಹಿಂದುಪರ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಘಟನೆ ಯಾದಗಿರಿ…

1 hour ago

ಬಿರುಗಾಳಿ ಮಳೆಗೆ ಮುರಿದು ಬಿದ್ದ 4 ಎಕರೆ ಬಾಳೆ

ಬಿರುಗಾಳಿ ಸಹಿತ ಸುರಿದ ಮಳೆಗೆ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿರುವ ಘಟನೆ ನಂಜನಗೂಡು…

2 hours ago