ಕಾಸರಗೋಡು : ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಕಾರು ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಐದು ಮಂದಿ ಗಂಭೀರ ಗಾಯ ಗೊಂಡ ಘಟನೆ ರವಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಪಡನ್ನಕ್ಕಾಡ್ ನಲ್ಲಿ ನಡೆದಿದೆ. ಐವರು ಗಾಯಗೊಂಡಿದ್ದಾರೆ.
ಈ ಪೈಕಿ ಇಬ್ಬರ ಸ್ಥಿತಿ ಗಂಭೀರ ವಾಗಿದೆ. ಮೃತರನ್ನು ನೀಲೇಶ್ವರ ಕಣಿಚ್ಚರದ ಜೈನುಲ್ ರಹಮಾನ್ (೬) ಮತ್ತು ಲಹಾಬ್ ಜೈನಬಾ (೧೨) ಎಂದು ಗುರುತಿಸಲಾಗಿದೆ. ನೀಲೇಶ್ವರ ಕಣಿಚ್ಚರದ ಝಯೀನ್ ರೆಹಮಾನ್ (5) ಮತ್ತು ಲಹಾಬ್ ಜೈನಬಾ (12) ಮೃತ ಪಟ್ಟವರು.
ಲತೀಫ್ ರ ಝುಹರಾಬಿ( ೪೦), ಮಕ್ಕಳಾದ ಫಾಯಿಸ್ ಅಬೂಬಕ್ಕರ್ ( ೨೦) , ಶೆರೀನ್ ( ೧೫) , ಮಿಸ್ ಹಾಬ್ (೩) ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸು ಪ್ರಯಾಣಿಕ ರಾದ ಸೂರ್ಯ , ಅನಿಲ್ ಗಾಯ ಗೊಂಡಿದ್ದಾರೆ.ಕಣ್ಣೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿನ ನಡುವೆ ಈ ಅಪಘಾತ ನಡೆದಿದೆ.
ಅಪಘಾತದಿಂದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಆಗಮಿಸಿ ನಜ್ಜು ಗುಜ್ಜಾಗಿದ್ದ ಕಾರಿನಲ್ಲಿದ್ದವರನ್ನು ಹೊರತೆಗೆದರೂ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.
ಗಾಯ ಗೊಂಡ ಐವರನ್ನು ಆಸ್ಪತ್ರೆ ಗೆ ಕೊಂಡೊಯ್ಯಲಾಯಿತು. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಕಾಞಾಂಗಾಡ್ ನ ಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಝುಹಾ ರಾಬಿ ಯ ತಾಯಿ ಮನೆಯಾದ ಮೇಲ್ಪರಂಬದಿಂದ ನೀಲೇಶ್ವರ ಕಣಿಚ್ಚರದ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

