ಕೊಪ್ಪಳ: ಶಾಲಾ ಮಕ್ಕಳಿದ್ದ ಟಾಟಾ ಏಸ್‌ ಪಲ್ಟಿಯಾಗಿ ಮೂವತ್ತು ಮಕ್ಕಳಿಗೆ ಗಾಯವಾಗಿರುವ ಘಟನೆ ಕೊಪ್ಪಳ ತಾಲೂಕಿನ ಹಾಲವರ್ತಿ ಕ್ರಾಸ್ ಬಳಿ ನಡೆದಿದೆ.

ಹಾಲವರ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಕ್ರೀಡಾಕೂಟಕ್ಕೆಂದು ಬಂದಿದ್ದರು. ಕೊಪ್ಪಳ ನಗರದ‌ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಮುಗಿಸಿಕೊಂಡು ಮರಳಿ ಹೋಗುತ್ತಿದ್ದ ವೇಳೆ ಟಾಟಾ ಏಸ್ ವಾಹನಕ್ಕೆ ಆರ್​ಟಿಓ ಅಧಿಕಾರಿ ನಿಲ್ಲಿಸಲು ಸೂಚನೆ ನೀಡಿದ್ದಾನೆ. ಹೀಗಾಗಿ ದಿಢೀರನೆ ನಿಲ್ಲಿಸಲು ಹೋಗಿದ್ದರಿಂದ ಟಾಟಾ ಏಸ್ ಪಲ್ಟಿಯಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.