ಮಡಿಕೇರಿ: ಕೋವಿಯಿಂದ ಗುಂಡು ಸಿಡಿದು ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರಪೇಟೆ ಸಮೀಪದ ದೊಡ್ಡ ಕೊಡ್ಲಿ ಗ್ರಾಮದಲ್ಲಿ ನಡೆದಿದ್ದು ಹಲವು ಸಂಶಯ ಮೂಡಿದೆ.

ಗ್ರಾಮದ ನಿವಾಸಿಗಳಾದ ಈರಪ್ಪ, ಲಲಿತಾ ಅವರ ಪುತ್ರ ಸಚಿನ್ (33) ಸಾವನಪ್ಪಿರುವರಾಗಿದ್ದು, ಬಂದೂಕಿನಿಂದ ಸಿಡಿದ ಗುಂಡು ಸಚಿನ್ ಹೊಟ್ಟೆಯ ಎಡ ಭಾಗಕ್ಕೆ ಹೊಕ್ಕಿ ಜೀವ ತೆಗೆದಿದ್ದು ಇದೀಗ ಹಲವು ಅನುಮಾನ ಉಂಟು ಮಾಡಿದ್ದು, ಸಚಿನ್ ತಾಯಿ ಲಲಿತ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಳು ಮೆಣಸು ಕುಯಿಲು ಮಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು, ಘಟನ ಸ್ಥಳದಲ್ಲಿ ಇದ್ದ ರವಿ ಮತ್ತು ದಿವಾಕರ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ತೋಟಕ್ಕೆ ಬರುವ ಮಂಗಗಳನ್ನು ಬೆದರಿಸಲು ತೆಗೆದುಕೊಂಡು ಹೋಗಿದ್ದ ಬಂದುಕು ಜೊತೆಗಾರರೊಂದಿಗೆ ಇದಿದ್ದು ಅವರೇ ಬೇಕಂತಲೇ ಗುಂಡು ಹಾರಿಸಬಹುದು ಎಂದು ಶಂಕಿಸಲಾಗಿದೆ, ಈ ಸಂಬಂಧ ಶನಿವಾರಸಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.