ಕೊಡಗು : ಇಂದು ವಿಶ್ವ ಆನೆ ದಿನಾಚರಣೆ ಹಿನ್ನಲೆ ಕೊಡಗಿನಲ್ಲಿ ಸಂಭ್ರಮದ ವಿಶ್ವ ಆನೆಗಳ ದಿನಾಚರಣೆ ಮಾಡಲಾಯಿತು. ಕೊಡಗು ಜಿಲ್ಲೆಯ ಸಾಕಾನೆ ಶಿಬಿರ ದುಬಾರೆ ಹಾಗೂ ಹಾರಂಗಿ ಆನೆ ಶಿಬಿರದಲ್ಲಿ ಆನೆ ದಿನಾಚರಣೆ ಮಾಡಲಾಯಿತು.
ಸಾಕಾನೆ ಶಿಬಿರಗಳಲ್ಲಿ ಆನೆಗಳಿಗೆ ಕಾವೇರಿ ನೀರಿನಲ್ಲಿ ಮಜ್ಜನ ಮಾಡಿ, ಬಳಿಕ ಬಣ್ಣ – ಬಣ್ಣಗಳಿಂದ ಅಲಂಕಾರದ ಚಿತ್ರ ಮಾಡಲಾಯಿತು. ಹೂ, ಹಾರ ಹಾಕಿ ದೊಡ್ಡ ಮತ್ತು ಮರಿ ಆನೆಗಳಿಗೆ ಪೂಜೆ ಸಲ್ಲಿಕ್ಕೆ ಮಾಡಲಾಯಿತು.
ವಿಶೇಷ ಆಹಾರ ನೀಡಿ ಆನೆ ದಿನಾಚರಣೆಯನ್ನು ಪಾಲಕರು ಮಾಡಿದರು. ಕಾಡಿನ ಮಕ್ಕಳು ಒಗ್ಗೂಡಿ ಆನೆಗಳಿಗೆ ಸಿಹಿ ಕೊಟ್ಟು ತಾವು ಸಿಹಿ ತಿಂದು ವಿಜೃಂಭಣೆಯಿಂದ ಆನೆದಿನ ಆಚರಣೆ ಮಾಡಿದರು.
ಅರಣ್ಯ ಸಿಬ್ಬಂದಿ, ಮಾವುತರು ಮತ್ತು ಕಾವಾಡಿಗಳು ಆನೆಗಳಿಗೆ ಪೂಜೆ ಮಾಡಿ ಗೌರವ ಸಲ್ಲಿಸಿದರು.ವನ್ಯಜೀವಿ ಮಂಡಳಿ ಸದಸ್ಯ ಸಂಕೇತ ಪೂವಯ್ಯ ಮತ್ತು ಆರಣ್ಯ ಸಿಬ್ಬಂದಿ ಭಾಗವಹಿಸಿದರು. ದುಬಾರೆ ಶಿಬಿರದಲ್ಲಿ ಆನೆಗಳನ್ನ ಪ್ರವಾಸಿಗರು ಕಣ್ತುಂಬಿಕೊಂಡರು.

