ಕೊಡಗು : ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಮಗು ಪತ್ತೆಯಾಗಿರುವ ಘಟನೆ ವೀರಾಜಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ನಡೆದಿದೆ.

ರಾತ್ರಿಯೆಲ್ಲಾ ಕಂದಮ್ಮ ತೋಟದಲ್ಲಿಯೇ ಇದ್ದಳು. ಶನಿವಾರ ನಾಪತ್ತೆಯಾಗಿದ್ದ ಮಗು ಸುನನ್ಯ ಭಾನುವಾರ ಪತ್ತೆಯಾಗಿದೆ.  ಮಗುವನ್ನು ಶ್ವಾನ ಓರಿಯೋ ಪತ್ತೆಹಚ್ಚಿದೆ.  ಶರಿ ಗಣಪತಿ ಎಂಬವರ ತೋಟದಲ್ಲಿ ಮಗುವಿನ ಪೋಷಕರು ಕೆಲಸ ಮಾಡುತ್ತಿದ್ದರು.

 

ಊಟದ ಬಳಿಕ ಮೊಬೈಲ್ ನೋಡಿಕೊಂಡು ಕುಳಿತ ತಾಯಿ ನಾಗಿಣಿ, ಸಂಜೆ ವೇಳೆಗೆ ಮಗು‌ ನಾಪತ್ತೆ ಹುಡುಕಿದರೂ ಪತ್ತೆಯಾಗಿಲ್ಲ.  ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದರು.  ಶೋಧ ಕಾರ್ಯಾಚರಣೆಯಲ್ಲಿ  ಸಾಕುನಾಯಿಗಳು ಪಾಲ್ಗೊಂಡಿತು.

 

ಕೊನೆಗೂ ತೋಟದ ನಡುವೆ ಮಗುವನ್ನು ಶ್ವಾನ ಓರಿಯೋ  ಪತ್ತೆ ಮಾಡಿತು. ಅನಿಲ್‌ ಕಾಳಪ್ಪ ಅವರಿಗೆ ಸೇರಿದ ಶ್ವಾನ ಇದಾಗಿದ್ದು, ಕೊನೆಗೂ ಕಂದಮ್ಮ ಹೆತ್ತಮ್ಮನ ಮಡಿಲು ಸೇರಿತು. ಜೇನುಕುರುಬರ ಸುನಿಲ್-ನಾಗಿಣಿ ದಂಪತಿಯ ಪುತ್ರಿ ಸುನನ್ಯ.