ಕೊಡಗು: ನಡುರಸ್ತೆಯಲ್ಲೇ  ಪ್ರವಾಸಿ ಬಸ್ ಹೊತ್ತಿ ಉರಿದ ಘಟನೆ ಮಾಕುಟ್ಟ ರಸ್ತೆಯ  ಮಗಡಿ ಪಾರೆ ಆಂಜನೇಯ ದೇವಾಲಯ ಸಮೀಪ ನಡೆದಿದೆ.

ಬಸ್ ವಿರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುತ್ತಿತ್ತು. ನಸುಕಿನ ಜಾವ ತಾಂತ್ರಿಕ ದೋಷದಿಂದ ಏಕಾ ಏಕಿ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವಿರಾಜಪೇಟೆ ಮಾಕುಟ್ಟ ರಸ್ತೆ ಯಲ್ಲಿ ವಾಹನಗಳ ಸಂಚಾರ ಬಂದ್ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಡಗು ಕೇರಳ ಮಾಕುಟ್ಟ ರಸ್ತೆಯಲ್ಲಿ ಸಾಲು ಗಟ್ಟಿ  ವಾಹನಗಳು ನಿಂತಿತ್ತು.