ಕೊಡಗು : ಪೊಲೀಸ್ರಿಗೆ ಕಳ್ಳರೇ ಟಾರ್ಗೆಟ್, ಆದ್ರಿಲ್ಲಿ ಕಳ್ಳರಿಗೆ ಪೊಲೀಸ್ ಮನೆಗಳೇ ಟಾರ್ಗೆಟ್ ಆಗಿದೆ. ಮಡಿಕೇರಿಯಲ್ಲಿ 8 ಪೊಲೀಸ್ ವಸತಿ ಗೃಹಗಳಲ್ಲಿ ರಾತ್ರಿ ಕಳ್ಳತನ ನಡೆದಿದೆ. ಮಡಿಕೇರಿಯಲ್ಲಿರುವ ಮೈತ್ರಿಹಾಲ್ ಪಕ್ಕದಲ್ಲಿರುವ ಪೊಲೀಸ್ ವಸತಿ ಗೃಹಗಳಿವೆ. ಸ್ವಲ್ಪ ದೂರದಲ್ಲೇ ಪೋಲಿಸ್ ಠಾಣೆ ಇದೆ.
ಪೊಲೀಸರು ಎಂಬ ಭಯವಿಲ್ಲದೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಒಂದೇ ರಾತ್ರಿಯಲ್ಲಿ 8 ಪೊಲೀಸ್ ವಸತಿ ಗೃಹಗಳಲ್ಲಿ ಕಳ್ಳರ ಕೈಚಳಕ ತೋರಿಸಿದ್ದಾರೆ. ಮನೆಯಲ್ಲಿದ್ದ ಸಣ್ಣಪುಟ್ಟ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
ಪೊಲೀಸ್ ಕುಟುಂಬ ಬೆಚ್ಚಿ ಬಿದ್ದಿದೆ. ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಪತ್ತೆ ಹಚ್ಚಿ ಕಳ್ಳರಿಗಾಗಿ ಪೊಲೀಸರು ಭಲೆ ಬೀಸಿದ್ದಾರೆ.

