ಕೊಡಗು : ವರುಣನ ಆರ್ಭಟ ಕೊಡಗಿನಲ್ಲಿ ಜೋರಾಗಿದ್ದು, ಇಂದು ನಾಳೆ ಎರಡು ದಿನಗಳು ಶಾಲಾ ಕಾಲೇಜು ರಜೆ ಘೋಷಿಸಲಾಗಿದೆ.

ಇಂದು ಮೇ 29 ಮತ್ತು 30 ರಂದು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿಗೆ ರಜೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿ ಬಿರುಗಾಳಿ ಸಹಿತ ಬಾರಿ ಮಳೆ ಹಿನ್ನೆಲೆ ಮುನ್ನಚರಿಕೆಯಿಂದ ಸುರಕ್ಷತೆಗಾಗಿ ರಜೆ ಘೋಷಿಸಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.