ಕೊಡಗು : ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಕೊಂಡ ಘಟನೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಮದೆನಾಡಿನಲ್ಲಿ ನಡೆದಿದೆ.
ತಾಂತ್ರಿಕ ದೋಷದಿಂದ ಕಾರಿನ ಇಂಜಿನ್ ಆಫ್ ಆಗದೇ ದಟ್ಟವಾದ ಹೊಗೆ ನಿರಂತರವಾಗಿ ಬಂದಿದೆ. ಹೊಗೆ ದಟ್ಟನೆ ಆವರಿಸಿಕೊಂಡಿದೆ. ಹೊಗೆ ಕಾಣಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಕಾರು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಹೊರ ಬಂದಿದ್ದರಿಂದ ಅನಾಹುತ ತಪ್ಪಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

