ಕೊಡಗು : ಅಂತರಾಜ್ಯ ನಟೋರಿಯಸ್ ಗ್ಯಾಂಗನ್ನು ಬಂಧಿಸಲಾಗಿದೆ. ಪೊಲೀಸರ ಮನೆಯಲ್ಲೇ ಕಳ್ಳರು ಕೈಚಳಕ ತೋರಿದ್ದಾರೆ. 8 ಪೊಲೀಸರ ಮನೆಯಲ್ಲಿ 1.5 ಲಕ್ಷ ಕಳ್ಳತನವಾಗಿದೆ. ಕಳ್ಳರ ಬಂಧನಕ್ಕೆ 15 ಲಕ್ಷ ಖರ್ಚು ಮಾಡಲಾಗಿದೆ.
ಕೊಡಗು ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಕಳ್ಳರಿಗಾಗಿಯೇ ಸಾಮಾನ್ಯರ ವೇಷವನ್ನು ಪೊಲೀಸರು ಹಾಕಿದ್ದರು. ಮೊಬೈಲ್ ಬಳಸದೆ, ಕದ್ದ ಬೈಕ್ ಬಳಸಿ ಆರೋಪಿಗಳು ಕಳ್ಳತನ ಮಾಡ್ತಿದ್ದರು.
ಮಡಿಕೇರಿ ಪೊಲೀಸರ ವಸತಿ ಗೃಹದಲ್ಲಿ ಜೂ. 17 ರಂದು ರಾತ್ರಿ ಕಳ್ಳತನ ನಡೆದಿದ್ದು, 8 ಪೊಲೀಸರ ಮನೆಯಲ್ಲಿ 1.5 ಲಕ್ಷ ಹಣ ಬೆಲೆ ಬಾಳುವ ವಸ್ತು ಕಳ್ಳತನ ಮಾಡಿದ್ದರು. ಮಧ್ಯಪ್ರದೇಶದ ಸುರೇಶ್ ಸೆಂಗಾರ್ (23) ಮಾಲ್ ಪುರ ಗ್ರಾಮದ ಮನೀಷ್ ಭಗೇಲ್ (23) ಬಂಧಿತ ಆರೋಪಿಗಳು.

ಕಳ್ಳತನದ ವೇಳೆ ರಕ್ತ ಹೀರಿದ್ದ ಜಿಗಣೆ ಹೊಸಕಿಹಾಕಿದ್ದ ಆರೋಪಿಗಳು. ಈ ವೇಳೆ ಸಿಕ್ಕ ರಕ್ತವೇ ವೈಜ್ಞಾನಿಕ ಸಾಕ್ಷಿಯಾಗಿದೆ. ಇಬ್ಬರ ಪತ್ತೆಗೆ 700 ಕಿ.ಮೀ. ಸಿಸಿಟಿವಿ ದೃಶ್ಯ ಪರಿಶೀಲನೆ, 30 ದಿನ ಕಾರ್ಯಚರಣೆ, 50 ಪೊಲೀಸ್ ಸಿಬ್ಬಂದಿ ಬಳಕೆ ಮಾಡಲಾಗಿದೆ.
ಗೋವಾದಲ್ಲಿ ಬೈಕ್ ಕದ್ದು, ಮಡಿಕೇರಿಗೆ ಬಂದಿದ್ದ ಆರೋಪಿಗಳು. ಕಳ್ಳತನ ನಡೆಸಿ ಬೈಕ್ ಕೆರೆಗೆ ತಳ್ಳಿ ಎಸ್ಕೇಪ್ ಆಗಿದ್ದ ಐನಾತಿಗಳು. ಮತ್ತೊಂದು ಕಡೆ ಬೈಕ್ ಕದ್ದು, ದಾಂಡೇಲಿ, ಭದ್ರಾವತಿಯಲ್ಲಿ ಕಳ್ಳತನ ಮಾಡಿದ್ದಾರೆ. ಪ್ರತಿ ಬಾರಿ ಕಳ್ಳತನ ಆದ ಮೇಲೆ ಮಧ್ಯಪ್ರದೇಶದ ತಾಂಡಾ ಗ್ರಾಮದ ದೇಗುಲಕ್ಕೆ ಕುರಿ ಬಲಿಯನ್ನು ಆರೋಪಿಗಳು ಕೊಡುತ್ತಿದ್ದರು.
ಗುಜರಾತ್ ನಲ್ಲಿ ಕಳ್ಳತನಕ್ಕೆ ಹೋಗಿದ್ದ ವೇಳೆ ಹಿಡಿಯಲು ಬಂದ ವ್ಯಕ್ತಿಯ ಕಣ್ಣನ್ನು ಆರೋಪಿಗಳು ಕಿತ್ತಿದ್ದರು. ಮಧ್ಯಪ್ರದೇಶದ ನಿವೃತ್ತ ನ್ಯಾಯಾಧೀಶರ ಮನೆಯಲ್ಲೂ ಕಳ್ಳತನ ಮಾಡಿದ್ದರು.

