ಕೊಡಗು : ಕೊಡಗಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯದಂಚಿನ ಗ್ರಾಮಗಳ ಜನ ಭಯಭೀತರಾಗಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದೆ. ಕೊಡಗಿನ ಪೋನ್ನಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿದೆ.

ಶ್ರೀಮಂಗಲ, ಟಿ.ಶೆಟ್ಟಿಗೇರಿ, ಕುರ್ಚಿ, ಬೀರುಗ, ಪರಕಟಕೇರಿ, ತೆರಾಲು, ಬಾಡಗರಕೇರಿ ಸುತ್ತಮುತ್ತ ಹುಲಿ ಉಪಟಳ ಹೆಚ್ಚಾಗಿದೆ. ಗ್ರಾಮಗಳ ಸುತ್ತಲಿನ ಕಾಫಿ ತೋಟ, ಅಕ್ಕಪಕ್ಕದಲ್ಲಿ ಹುಲಿ ಕಾಣಿಸಿಕೊಂಡಿದೆ.
ಹುಲಿ ಸೇರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದಾರೆ. ಸಾಕಾನೆಗಳ ಸಹಾಯದಿಂದ ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.

ಶಾರ್ಪ್ ಶೂಟರ್‌ಗಳು, ಅರವಳಿಕೆ ತಜ್ಞರು ಹಾಗೂ ಪಶುವದ್ಯಾಧಿಕಾರಿಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳಕ್ಕಾಗಮಜಸಿ ಕಾರ್ಯಾಚರಣೆಯ ಸಿದ್ಧತೆಯನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್‌ ಪೂವಯ್ಯ ಪರಿಶೀಲಿಸಿದ್ದಾರೆ. ಹುಲಿ ಸೆರೆಗಾಗಿ ದುಬಾರೆ ಶಿಬಿರದಿಂದ ಶ್ರೀರಾಮ, ಗೋಪಿ ಆನೆ ಬಳಕೆ ಮಾಡಲಾಗಿದೆ.

ಹುಲಿ ಸೇರೆಗಾಗಿ ಸಿಸಿ ಕ್ಯಾಮಗಳನ್ನು ಆಳವಡಿಕೆ ಮಾಡಲಾಗಿದೆ. ಗ್ರಾಮದ ಸುತ್ತಮುತ್ತಲಿನ ಕಾಫಿತೋಟದಲ್ಲಿ ಕೂಂಬಿಂಗ್ ನಡೆಸಲಾಗಿದೆ. ಕೊಡಗಿನಲ್ಲಿ ಒಂದುಕಡೆ ಹುಲಿ ದಾಳಿ, ಮತ್ತೊಂದೆಡೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ‌ ಕಾಣಿಕೊಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ತೋಟಗಳಿಗೆ ಗದ್ದೆಗಳಿಗೆ ದನ ಕರುಗಳನ್ನು ಮೇಯಿಸಲು, ಕೃಷಿ ಚಟುವಟಿಕೆಗೆ ತೆರಳಲು ಆತಂಕ ಸೃಷ್ಟಿಯಾಗಿದೆ.