ಕೊಡಗು : ಕೊಡಗಿನಲ್ಲಿ ಭಾರೀ ಮಳೆಯಾಗಿದ್ದು, ಇಂದು, ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗಿನ ನದಿ ತೊರೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ.

ತಲಕಾವೇರಿಯಲ್ಲಿ ಸುರಿದ ಭಾರಿ ಮಳೆಗೆ ಕಾವೇರಿ ಸನ್ನಿಧಿಯಲ್ಲಿ ಮನಮೋಹಕವಾಗಿ ಮಳೆ ನೀರು ಹರಿಯುತ್ತಿದೆ. ಜೋರು ಮಳೆ ಮುಂದುವರೆದರೆ ಭಾಗಮಂಡಲ ನಾಪೋಕ್ಲು ಸೇರಿ ಜಿಲ್ಲೆಯ ಹಲವು ಕಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.