ಕೊಡಗು : ಸಾರಿಗೆ ಬಸ್ ಹಾಗು ಜೆಸಿಬಿ ಮುಖಾಮುಖಿ ಡಿಕ್ಕಿಯಾಗಿ 15 ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಲನಗರ ತಾಲೂಕಿನ ಮಾದಪಟ್ಟಣ ಬಳಿ ನಡೆದಿದೆ.

ಘಟನೆಯಲ್ಲಿ ಹೋಂಗಾರ್ಡ್ಸ್ ಸೇರಿದಂತೆ 15 ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಮಡಿಕೇರಿ ದಸರಾ ಡ್ಯೂಟಿಗೆ ಹೋಂ ಗಾರ್ಡ್ಸ್ ತೆರಳುತ್ತಿದ್ದರು. ಈ ವೇಳೆ ಸಾರಿಗೆ ಬಸ್ ಜೆಸಿಬಿ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭಾವಿಸಿದೆ. ಕೂಡಲೇ ಗಾಯಳುಗಳನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ಕೈದು ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಾಸಕ್ಕೆ ಬಸ್ ಮುಂಭಾಗ ನಜ್ಜುಗುಜ್ಜಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.