ಕೊಡಗು : ವರುಣನ ಆರ್ಭಟಕ್ಕೆ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದ ಘಟನೆ ಸೋಮವಾರಪೇಟೆ ತಾಲ್ಲೂಕಿನ ಕುಂಬೂರುವಿನಲ್ಲಿ ನಡೆದಿದೆ. ಆಟೋ ಜಖಂ ಆಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಮರ ಬಿದ್ದ ಪರಿಣಾಮ ಚಂಚಾರಕ್ಕೆ ಅಡ್ಡಿಯಾಗಿದ್ದು, ಆಟೋ ಮೇಲೆ ಮರ ಬಿದ್ದು ಗಾಯಗೊಂಡಿದ್ದ ಚಾಲಕ ಸೋಮವಾರಪೇಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.