ಕೊಡಗು: ನದಿಗಳ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂ. ಪರಿಹಾರದ ಜೊತೆಗೆ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಜಿಲ್ಲೆಯ ಕುಶಾಲನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಶೀಘ್ರವೇ ನಾವು ಆದೇಶವನ್ನು ಹೊರಡಿಸುತ್ತೇವೆ ಎಂದು ಹೇಳಿದ್ದಾರೆ.

ವಯನಾಡು ದುರಂತಕ್ಕೆದ ಬಗ್ಗೆ ಪ್ರತಿಕ್ರಿಯಿಸಿದ್ದು, ವಯನಾಡಿನಲ್ಲಿ ಆಗಿದ್ದು ನಮ್ಮ ರಾಜ್ಯದದಲ್ಲೂ ಆಗಬಹುದು. ಪರಿಸರದ‌ ಮೇಲೆ ಆಗುತ್ತಿರೋ ಹಾನಿ ನಾವು ಗಮನಿಸುತ್ತಿಲ್ಲ. ಸಿಕ್ಕ ಸಿಕ್ಕ ಕಡೆ ರಸ್ತೆ ಮಾಡುತ್ತಿದ್ದೇವೆ, ಮರ ಕಡಿಯುತ್ತೇವೆ. ನಮ್ಮ ಕಾಲಿಗೆ ನಾವೇ ಕೊಡಲಿ ಹಾಕ್ತಿದ್ದೇವೆ. ಇವೆಲ್ಲದರ ಸಂಘಟಿತ ಪ್ರತಿಫಲವೇ ವಯನಾಡಲ್ಲಿ ಆಗಿದೆ ಎಂದಿದ್ದಾರೆ.

ಎಲ್ಲಿ ದುರ್ಘಟನೆ ಆಗುತ್ತೆಂದು ಡಿಸಿಗಳು ಅಂದಾಜಿಸಬೇಕು. ಅಂಥ ಸ್ಥಳಗಲ್ಲಿ ಜನರನ್ನ ಬಲವಂತವಾಗಿ ತೆರವುಗೊಳಿಸಬೇಕು. ಜನ ಒಪ್ಪೋದಿಲ್ಲ ಅಂತ ಡಿಸಿಗಳು ನಿರ್ಲಕ್ಷ್ಯ ಮಾಡಬಾರದು. ನಮ್ಮ ಕೆಲವು ಡಿಸಿಗಳು ರಾಜಕಾರಣಿಗಳಿಗಿಂತ ಉದಾರ. ಪ್ರವಾಹ ದಾಟುವುದು, ಸೆಲ್ಫಿ ತೆಗೆಯುವವರಿಗೆ ಲಾಠಿ ರುಚಿ ತೋರಿಸಿ ಎಂದು ಎಲ್ಲಾ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದ್ದಾರೆ.