ಕೊಡಗು: ಅಂತ್ಯ ಸಂಸ್ಕಾರಕ್ಕೆ ಮೃತ ದೇಹ ಸಾಗಿಸಲು ಹರ ಸಾಹಸ ಪಡಬೇಕಾದ ಘಟನೆ ಮಡಿಕೇರಿಯ ಕನ್ನಂಡ ಬಾಣೆ ಗ್ರಾಮದಲ್ಲಿ ನಿನ್ನೆ ನಡೆದಿದೆ.

ಕೊಡಗು ಜಿಲ್ಲಾ ಕೇಂದ್ರದಲ್ಲಿ ಮನೆಗೆ ರಸ್ತೆ ಇಲ್ಲದೆ, ಮೃತದೇಹವನ್ನು ಕಷ್ಟ ಪಟ್ಟು ಹೊತ್ತು ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮಡಿಕೇರಿ ನಗರ ಸಭೆಯ ವ್ಯಾಪ್ತಿಯ ನಗರದೊಳಗೆ ಹಲವು ಮನೆಗಳಿಗೆ ಇನ್ನು ಸಮರ್ಪಕವಾದ ರಸ್ತೆ ಇಲ್ಲ. ಕನ್ನಂಡಬಾಣೆ ವಾರ್ಡ್ ರಸ್ತೆ ಇಲ್ಲದೆ ಜನರ ಸುಸ್ಥಿತಿ ಉಂಟಾಗಿದೆ.

ಸುಮಾರು 50 ಕುಟುಂಬಗಳ ವಾಸ ಮಾಡುವ ಬಡಾವಣೆಯಾಗಿದೆ. ಓಡಾಡಲು ರಸ್ತೆ ಇಲ್ಲ. ಮೆಟ್ಟಿಲು ಏರಿ ಓಡಾಡಬೇಕಾದ ಸ್ಥಿತಿ ಉಂಟಾಗಿದೆ. ಗರ್ಭಿಣಿ ಸ್ತ್ರೀಯರು, ಅನಾರೋಗ್ಯ ಪೀಡಿತರ ಒಡಾಟಕ್ಕೆ ಸಂಚಕಾರ ಉಂಟಾಗಿದೆ. ಮೃತ ದೇಹಗಳನ್ನ ಸ್ಮಶಾನಕ್ಕೆ ಕೊಂಡೋಯ್ಯಲು ಪರದಾಡುವಂತಾಯಿತು.

ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದ ಕನ್ನಂಡಬಾಣೆಯ ಧರ್ಮಣ್ಣ(55). ಆಸ್ಪತ್ರೆಯಿಂದ ಮೃತದೇಹ ಮನೆಗೆ ತರುವಾಗ ಕುಟುಂಬಸ್ಥರಿಗೆ ನರಕ ಯಾತನೆ ಪಟ್ಟರು. ಮೃತದೇಹ ಹೊತ್ತುಕೊಂಡು 100 ಕ್ಕೂ ಅಧಿಕ ಮೆಟ್ಟಿಲು ಏರಿ ಇಳಿಯುವ ಪರಿಸ್ಥಿತಿ ಉಂಟಾಯಿತು.

ನಮ್ಮ ಸರಕಾರ 1992ರಲ್ಲೇ ಕನ್ನಂಡಬಾಣೆ ಭಾಗದ ಜನರಿಗೆ ಹಕ್ಕುಪತ್ರವನ್ನೂ ಕೂಡ ನೀಡಿದೆ. ರಸ್ತೆ ವ್ಯವಸ್ಥೆ ಸಮರ್ಪಕವಾಗಿ ಮಾಡಿಲ್ಲ. ಕನ್ನಂಡಬಾಣೆಗೆ ರಸ್ತೆ ನಿರ್ಮಾಣಕ್ಕೆ 25 ಲಕ್ಷ ಹಣ ಮೀಸಲಾಗಿ ಇಟ್ಟು ಟೆಂಡರ್ ಕೂಡ ಆಗಿದೆ ಆದರೆ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವುದರಿಂದ ರಸ್ತೆ ಮಾಡಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಅರಣ್ಯ ಇಲಾಖೆ ತಡೆ ಒಡ್ಡಿದ್ದರಿಂದ ಹಾಗು ಅನುಮತಿ ಕೊಡದ ಕಾರಣ ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಂಬಂಧಿಸಿದವರು ಹೇಳುತ್ತಾರೆ.

ರಸ್ತೆಗೆ ಹಣ ಬಿಡುಗಡೆಯಾದರೂ ಕೂಡ ರಸ್ತೆ ಮಾಡಲು ಬಿಡದ ಅರಣ್ಯ ಇಲಾಖೆಯಿಂದ ಮೆಟ್ಟಿಲು ಏರಿಯೇ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ. ಇಲ್ಲಿನ ನಗರ ಸಭಾ ಸದಸ್ಯರು ಈ ಬಗ್ಗೆ ಪ್ರಯತ್ನಿಶೀಲರಾಗಿದ್ರೂ ಕೂಡ ಇದುವರೆಗೂ ಯಾವುದೇ ಪ್ರಯೋಜನ ಕಂಡಿಲ್ಲ. ಈ ಸಮಸ್ಯೆ ಸರ್ಕಾರದ ಉನ್ನತ ಮಟ್ಟದಲ್ಲಿ ಬಗೆಹರಿಯಬೇಕಾಗಿದೆ. ಕೊಡಗಿನ ಇಬ್ಬರು ಶಾಸಕರು ಹಾಗೂ ಉಸ್ತುವಾರಿ ಸಚಿವರು, ಇಲ್ಲಿ ಉಂಟಾಗಿರುವ ಕಾನೂನಾತ್ಮಕ ತೊಡಕನ್ನು ಬಗೆಹರಿಸಿ ಎಂದು ಜನರು ಆಗ್ರಹಿಸಿದರು.