ಬೆಂಗಳೂರು: ಬಹುನಿರೀಕ್ಷಿತ, ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಬಹು ಯಶಸ್ವಿಯೊಂದಿಗೆ 18ನೇ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಎನ್‌ಡಿಎ 400 ಸ್ಥಾನ ದಾಟುತ್ತಾ? ಇಂಡಿಯಾ ಮೈತ್ರಿಕೂಟ 295 ಸ್ಥಾನ ಗೆಲ್ಲುತ್ತಾ? ಎಲ್ಲಾ ಪ್ರಶ್ನೆಗಳಿಗೂ ಇವತ್ತು ಉತ್ತರ ಸಿಗಲಿದೆ.
ಇಂದು ಹೊರಬೀಳಲಿರುವ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಕೇಂದ್ರದಲ್ಲಿ ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಅನ್ನೋದು ಕುತೂಹಲ ಇಮ್ಮಡಿಗೊಳಿಸಿದೆ. ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್ ರೂಮ್‌ಗನ್ನು ಬೆಳಗ್ಗೆ 7ಗಂಟೆಗೆ ಓಪನ್ ಮಾಡಲಾಗುತ್ತೆ. ಬೆಳಗ್ಗೆ 8 ಗಂಟೆಯಿಂದ ಎಣಿಕೆ ಆರಂಭವಾಗುತ್ತದೆ.
ಕರುನಾಡಿನಲ್ಲಿ ಈ ಬಾರಿ ಮತದಾರ ಬಿಜೆಪಿಗೆ ಅಥವಾ ಕಾಂಗ್ರೆಸ್ ಗೆ ಕಿರೀಟ ತೊಡಿಸಿದ್ದಾನ ಎಂದು ಇನ್ನೆನು ಕೇಲವೇ ಕ್ಷಣಗಳಲ್ಲಿ ತಿಳಿದು ಬರಲಿದೆ.
ಇನ್ನು ಈ ಬಾರಿ ಲೋಕಸಭೆಗೆ 64.2 ಕೋಟಿ ಮತದಾರರಿಂದ ವಿಶ್ವದಾಖಲೆಯ ಹಕ್ಕು ಚಲಾವಣೆಯಾಗಿದೆ ಅಂತ ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಲೋಕಸಭೆ ಚುನಾವಣೆಗೆ ಏಳು ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 64.2 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಹೊಸ ವಿಶ್ವದಾಕಲೆ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.

