ಕಾರವಾರದ ನೌಕಾ ಸಂಗ್ರಹಾಲಯಕ್ಕೆ ಟೊಪೆಲೋ ಯುದ್ಧ ವಿಮಾನ ಸೇರ್ಪಡೆ

ಕಾರವಾರ: ಟೊಪೆಲೋ ಯುದ್ಧ ವಿಮಾನ ಕಾರವಾರಕ್ಕೆ ತರಲು ವಿಳಂಬವಾಗಿದೆ. ಈ ತಾಂತ್ರಿಕ ಸಮಸ್ಯೆ ಬಗೆಹರಿದಿದ್ದು ಶೀಘ್ರವೇ ಟೊಪೆಲೊ ಯುದ್ಧ ವಿಮಾನ ಕಾರವಾರದ ಚಪೇಲ್ ಯುದ್ಧ ನೌಕಾ ಸಂಗ್ರಹಾಲಯಕ್ಕೆ ಸೇರಲಿದೆ ಎಂದು ಐಎನ್ಎಸ್ ಕದಂಬ ನೌಕಾನೆಲೆಯ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಅಥುಲ್ ಆನಂದ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ಟೆಂಡರ್ ಹಾಕಿದವರ ಪೈಕಿ ಇಬ್ಬರು ಟೆಂಡರ್ ದಾರರು ಅರ್ಹತೆ ಪಡೆದವರಾಗಿದ್ದಾರೆ. ಪ್ರಕ್ರಿಯೆ ಅಂತ್ಯಗೊಳಿಸಲಾಗುವುದು. ನಾಲ್ಕು ತಿಂಗಳಲ್ಲಿ ಚೆನೈನಿಂದ ಸ್ಥಳಾಂತರಗೊಳಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದರು.

ಟೊಪೆಲೋ ಯುದ್ಧ ವಿಮಾನ ತರಲು ನೌಕಾಸೇನೆಯು 4 ಕೋಟಿ ರೂ. ಖರ್ಚು ಮಾಡುತ್ತಿದೆ. ಸದ್ಯ ಟೆಂಡರ್ ಕರೆದಿದ್ದು, ಎರಡು ಅರ್ಜಿಗಳು ಬಂದಿವೆ. ನಾಲ್ಕು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ವಿಮಾನವನ್ನು ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಗಲಿದೆ ಟೊಪೆಲೋ ದೊಡ್ಡ ಯುದ್ಧ ವಿಮಾನವಾಗಿದೆ. ಅದನ್ನು ಚೆನೈನಿಂದ ಕಾರವಾರಕ್ಕೆ ಸಣ್ಣ ಭಾಗಗಳಾಗಿ ವಿಂಗಡಿಸಿ ತರಬೇಕಾಗುತ್ತದೆ. ಈ ವರೆಗೆ ಇದ್ದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿದ್ದೇವೆ ಎಂದರು. ವಾರ್ಶಿಪ್ ಮ್ಯೂಸಿಯಂ ಇರುವ ಪ್ರದೇಶ ಯುದ್ಧ ನೌಕೆ, ವಿಮಾನ ಶಸ್ತ್ರಾಸ್ತ್ರಗಳ ಮ್ಯೂಸಿಯಂ ಆಗಲಿದೆ. ಕಾರವಾರದ ನೌಕಾನೆಲೆಯಲ್ಲಿ 8 ರಿಂದ 10 ಸಾವಿರ ಜನರಿದ್ದಾರೆ. ಮುಂದಿನ ದಿನಗಳಲ್ಲಿ 15 ರಿಂದ 16 ಸಾವಿರ ಜನರು ಬರಲಿದ್ದಾರೆ. ಇದರಿಂದ ನಮ್ಮ ಎಲ್ಲಾ ಬೇಡಿಕೆಗಳನ್ನು ಕಾರವಾರ ನಗರವೇ ಪೂರೈಸಲಿದೆ. ಆಗ ಕಾರವಾರ ನಗರವೂ ಬೆಳೆಯಲಿದೆ ಎಂದರು. ನೌಕಾ ಸೇನೆ ವಿಮಾನ ನಿಲ್ದಾಣದ ಜತೆಗೆ ನಾಗರಿಕ ವಿಮಾನ ನಿಲ್ದಾಣದ ಕೆಲಸವೂ ನಡೆಯಲಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಂಕುಸ್ಥಾಪನೆ ಮಾಡಿದರು.

Sneha Gowda

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

1 hour ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

2 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

2 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

2 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

4 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

4 hours ago