ಹೆಚ್ಚುವರಿ ಭೂ ಸ್ವಾಧೀನಕ್ಕೆ ಸರ್ವೆ ಕಾರ್ಯ: ಅಲಗೇರಿ ಗ್ರಾಮಸ್ಥರಿಂದ ಪ್ರತಿರೋಧ

ಕಾರವಾರ: ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣ ಯೋಜನೆಗೆ ನಿಗದಿ ಪಡಿಸಿದ ಭೂಮಿಗೆ ಮತ್ತೆ ಹೆಚ್ಚುವರಿಯಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ವೇ ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಗಳ ತಂಡಕ್ಕೆ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ವೇ ಕಾರ್ಯವನ್ನು ತಾತ್ಕಾಲಿಕವಾಗಿ ಕೈಬಿಟ್ಟು ಮರಳಿದ ಘಟನೆ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ನಡೆದಿದೆ. ಅಲಗೇರಿಯಲ್ಲಿನ ಉದ್ದೇಶಿತ ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಸುಮಾರು 87 ಎಕರೆ 18 ಗುಂಟೆಗಳಷ್ಟು ಜಮೀನು ಗುರುತಿಸಿ ಸರ್ವೇ ನಡೆಸಲಾಗಿದ್ದು, ನೋಟಿಫಿಕೇಶನ್ ಕಾರ್ಯ ಪ್ರಗತಿಯಲ್ಲಿದ್ದು ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದೆ.

ಈ ನಡುವೆ ಹೆಚ್ಚುವರಿಯಾಗಿ ಮತ್ತೆ 6 ಎಕರೆ 8 ಗುಂಟೆಯಷ್ಟು ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವ ದೃಷ್ಟಿಯಿಂದ ಕುಮಟಾ ಸಹಾಯಕ ಆಯುಕ್ತರ ಕಚೇರಿಯಿಂದ ಭೂ ಸ್ವಾಧೀನ ಅಧಿಕಾರಿಗಳ ಪರವಾಗಿ ಶಶಿಧರ, ಅಂಕೋಲಾ ತಾಲೂಕಿನ ಸರ್ವೇ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಸಂಬಂಧಿತ ಸಿಬ್ಬಂದಿಗಳನ್ನೊಳಗೊಂಡ ತಂಡ ಸರ್ವೇ ಕಾರ್ಯಕ್ಕಾಗಿ ಅಲಗೇರಿಗೆ ಆಗಮಿಸಿದ್ದರು. ಇದೇ ವೇಳೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಹೀಗೆ ಏಕಾ ಏಕಿ ನಮ್ಮ ಮಾಲ್ಕಿ ಹಕ್ಕಿನ ಜಾಗಗಗಳಲ್ಲಿ ಸರ್ವೇ ಕಾರ್ಯ ನಡೆಸಬಾರದು.

ಈಗಾಗಲೇ ನಾನಾ ಯೋಜನೆಗಳಿಂದ ನಿರಾಶ್ರಿತರಾದವರಿಗೆ ಯೋಗ್ಯ ಪರಿಹಾರ ದೊರೆತಿಲ್ಲ. ಉದ್ದೇಶಿತ ವಿಮಾನಯಾನ ಯೋಜನೆಗೊ ಸ್ಥಳೀಯರ ವಿರೋಧದ ನಡುವೆಯೂ ಯೋಜನೆ ಜಾರಿಗೆ ತರಲಾಗುತ್ತಿದೆ. ಇಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ನೀಡುವ ಪರಿಹಾರದ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರವರ್ಗ ಈ ವರೆಗೂ ನಮಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇಲ್ಲಿ ಬಂದು ಪರಿಹಾರದ ಕುರಿತು ನಮಗೆ ಮನವರಿಕೆ ಮಾಡಿಕೊಡಲಿ.

ಅಲ್ಲಿವರೆಗೂ ಯಾವುದೇ ಹೊಸ ಸರ್ವೆ ಕಾರ್ಯ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಮಧ್ಯಾಹ್ನದ ಹೊತ್ತಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಬಿಟ್ಟು ವಾಪಸ್ ತೆರಳಿದ್ದರು. ಊಟದ ಬಳಿಕ ಮತ್ತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬರುತ್ತಿದ್ದಂತೆ ಸ್ಥಳೀಯರು, ಮಹಿಳೆಯರು, ರೈತರು ಸೇರಿ ಸರ್ವೆ ಕಾರ್ಯ ನಡೆಸಿದಂತೆ ಆಗ್ರಹಿಸಿ ಸ್ಥಳದಲ್ಲಿಯೇ ಧರಣಿ ಕುಳಿತರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ಮದ್ಯೆ ಬಿಸಿಯೇರಿದ ಮಾತುಕತೆ ನಡೆಯಿತು. ನಂತರ ವಾತಾವರಣ ತಿಳಿದುಕೊಂಡು ತಾತ್ಕಾಲಿಕವಾಗಿ ಸರ್ವೆ ಕಾರ್ಯ ಕೈ ಬಿಟ್ಟ ತಹಶೀಲ್ದಾರ ಪ್ರವೀಣ ಎಚ್. ಮತ್ತಿತರ ಅಧಿಕಾರಿಗಳಿದ್ದ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯರನ್ನು ಸಮಾಧಾನಪಡಿಸಿ ವಾಪಸಾಯಿತು.

ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜ, ಪಿ.ಎಸ್.ಐಗಳಾದ ಕುಮಾರ ಕಾಂಬಳೆ, ಮಹಾಂತೇಶ ವಾಲ್ಮೀಕಿ, ಗೀತಾ ಶಿರ್ಶಿಕರ ಮತ್ತು ಅಂಕೋಲಾ ಠಾಣಾ ಸಿಬ್ಬಂದಿಗಳು ಮತ್ತು ಹೆಚ್ಚುವರಿ ಪೋಲೀಸ್ ತುಕಡಿ ಸ್ಥಳದಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಶ ನಾಯಕ ಅಲಗೇರಿ, ನಿತ್ಯಾನಂದ ಟಿ ನಾಯಕ, ಗೌರೀಶ ನಾಯಕ, ಲಕ್ಷ್ಮಣ ನಾಯಕ, ವಿನೋದ ಗಾಂವಕರ, ಶಿವಾನಂದ ನಾಯ್ಕ, ಸ್ಥಳೀಯ ಗ್ರಾಪಂನ ಕೆಲ ಹಾಲಿ ಹಾಗೂ ಮಾಜಿ ಸದಸ್ಯರು, ಸ್ಥಳೀಯ ನಿವಾಸಿಗಳು ಇನ್ನಿತರಿದ್ದರು.

Gayathri SG

Recent Posts

ಎಲ್ಲರೂ ತಪ್ಪದೇ ಮತದಾನ ಮಾಡಿ: ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ

ಮೇ. 6 ಮತ್ತು 7 ರಂದು ಹೆಚ್ಚಿನ ಉಷ್ಣತೆ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಹೆಚ್ಚು ಉಷ್ಣತೆ ಇದೆ…

19 mins ago

ಕಾಂಗ್ರೆಸ್‌ಗೆ ಕುರ್ಚಿ ಸಿಕ್ಕಿದರೆ 50ಕ್ಕೂ ಹೆಚ್ಚು ಮೀಸಲಾತಿ ಖಚಿತ: ರಾಹುಲ್‌ ಗಾಂಧಿ

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಸಿಗುವ ಮೀಸಲಾತಿಯಲ್ಲಿ ಶೇ.50ಕ್ಕಿಂತ ಅಧಿಕ ಮೀಸಲಾತಿ…

32 mins ago

ಡಾ. ವಿಜಯಲಕ್ಷ್ಮಿ ಸುಬ್ರಹ್ಮಣ್ಯಂ ಅವರಿಗೆ ಡಾ. ವಿ ಪರಮೇಶ್ವರ ಸ್ಮಾರಕ ಪ್ರಶಸ್ತಿ ಪ್ರದಾನ

ಮೇ 1, 2024 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ, ಗೌರವಾನ್ವಿತ ಡಾ. ವಿ ಪರಮೇಶ್ವರ ಸ್ಮಾರಕ ಸೃಜನಾತ್ಮಕ…

35 mins ago

ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಗುತ್ತಿಗೆ: ಬಸವರಾಜ ಜಾಬಶೆಟ್ಟಿ ಆರೋಪ

'ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಸೋದರ ಸಂಬಂಧಿ ಜಗದೀಶ ಖೂಬಾ ಅವರಿಗೆ…

46 mins ago

ಜಾನುವಾರುಗಳಿಗೆ ಮೇವು ನೀಡಲು ಸರಕಾರಕ್ಕೆ ಆಗ್ರಹ

ಪ್ರತಿದಿನ ಜಾನುವಾರುಗಳಿಗೆ 6 ಕೆ.ಜಿ ಒಣಮೇವಿನ ಅವಶ್ಯಕತೆ ಇದೆ ಆದರೆ ಸರಕಾರ ಹಸಿರು ಮೇವಿನ ಬೀಜ ನೀಡಿದ್ದೇವೆ ಎಂದು ಹೇಳಿ…

47 mins ago

ದ.ಕ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ : ಡಾ.ಎಚ್.ಆರ್.ತಿಮ್ಮಯ್ಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ…

56 mins ago