ಈಡಿಗ ಸಮುದಾಯದ ನಾಯಕರು ತಮ್ಮವರನ್ನು ರಾಜಕೀಯವಾಗಿ ಮುಂದೆ ಒಯ್ಯಬೇಕು: ಪ್ರಣವಾನಂದ ಸ್ವಾಮಿ

ಕಾರವಾರ: ಈಡಿಗ ಸಮುದಾಯದ ನಾಯಕರು ತಮ್ಮ ಸಮುದಾಯವನ್ನು ರಾಜಕೀಯವಾಗಿ ಜೊತೆಗೆ ತೆಗೆದುಕೊಂಡು ಹೋಗದಿದ್ದರೆ ಮುಂದೆ ಸೋಲು ಖಂಡಿತ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದಲ್ಲಿರುವ ಈಡಿಗ ಸಮುದಾಯದ ನಾಯಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದರು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 7 ಕ್ಷೇತ್ರದಲ್ಲಿ ಮಾತ್ರ ಈಡಿಗ ಸಮಾಜದವರಿಗೆ ನೀಡಿಲಾಗಿತ್ತು. ಅದರಲ್ಲಿ 4 ಸ್ಥಾನದಲ್ಲಿ ನಮ್ಮವರು ಗೆಲುವು ಸಾಧಿಸಿದ್ದಾರೆ. ಇದು ನಮ್ಮದೇ ವೈಫಲ್ಯ. ಹೀಗಾಗಿ ನಾವು ನಮ್ಮವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕೇಳಲು ಅನರ್ಹರಾಗಿದ್ದೇವೆ.

ನಮ್ಮ ಸಮುದಾಯದವರಿಗೆ ರಾಜಕೀಯವಾಗಿ ಜಾಗೃತಿ ಕಡಿಮೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆಗಳಲ್ಲಿ ಈಡಿಗ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಂಘಟಿತರಾಗಬೇಕಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಕುರಿಬ ಸಮುದಾಯಕ್ಕೆ ರಾಯಣ್ಣ ಅಭಿವೃದ್ಧಿ ಪ್ರಧಿಕಾರ, ಕಾಗಿನೆಲೆ ಅಭಿವೃದ್ಧಿ ಪೀಠ, ರಾಜ್ಯದಾದ್ಯಂತ 800 ಕ್ಕು ಹೆಚ್ಚು ಕನಕ ಭವನಗಳು ಹಾಗೂ ಕುರುಬ ಸಮುದಾಯದವರಿಗೆ ಯುವಕರು ಕಲಿಯಲು ಸರಕಾರದಿಂದ ಐ.ಎ.ಎಸ್ ತರಬೇತಿ ಕೇಂದ್ರಗಳನ್ನು ನೀಡಿದ್ದರು. ಆದರೆ ನಮ್ಮ ನಾಯಕರು ಸಮುದಾಯಕ್ಕೆ ಏನು ಮಾಡಲಿಲ್ಲ. ಹೀಗಾಗಿ ನಮ್ಮವರು ಸಮುದಾಯನ್ನು ಜೊತೆಗೆ ತೆಗೆದುಕೊಂಡು ಹೋಗದಿದ್ದರೆ ಮುಂದಿನ ದಿನಗಳಲ್ಲಿ ಸೋಲು ಖಂಡಿತ ಎಂದರು.

ಕೆಲವು ಬೇಡಿಕೆಗಳ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷವು ಈ ಹಿಂದೆ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 1.5 ಸಾವಿರ ಕೋಟಿ ನೀಡುತ್ತೇವೆ ಎಂದಿದ್ದರು. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ನಮ್ಮ ಸಮುದಾಯದವರಿಗೆ ಸರಕಾಎದಿಂದ ಐ.ಎ.ಎಸ್, ಕೆ.ಎ.ಎಸ್ ಹಾಗೂ ಪೊಲೀಸ್ ಹುದ್ದೆಗಳಿಗೆ ತರಬೇತಿ ಸಂಸ್ಥೆಗಳನ್ನು ನಿರ್ಮಿಸಬೇಕೆ. ಹಾಗೂ ಕುಲಕಸುಬಾದ ನೀರಾ ತೆಗೆಯಲು ಅವಕಾಶ ನೀಡಬೇಕು. ಇವುಗಳನ್ನೆಲ್ಲಾ ಕೇಳುವ ಸ್ಥಿತಿಯಲ್ಲಿ ನಾವಿಲ್ಲ. ಆದರೆ ಮುಂದೆ ಅವರಾಗಿಯೇ ಬಂದು ಕೊಡುವಂತೆ ಸಂಘಟಿತರಾಗಬೇಕು ಎಂದರು.

Gayathri SG

Recent Posts

ಅಕ್ಕನ ಮನೆಗೆ ಕನ್ನ ಹಾಕಿದ ತಂಗಿ: 182 ಗ್ರಾಂ ಚಿನ್ನಾಭರಣ, 52 ಲಕ್ಷ ನಗದು ಕಳ್ಳತನ

ಸಾಲ ಮಾಡಿಕೊಂಡಿದ್ದ ತಂಗಿ ಹಣಕ್ಕಾಗಿ ಸ್ವಂತ ಅಕ್ಕನ ಮನೆಯಿಂದಲೇ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ…

8 mins ago

ಪ್ರಜ್ವಲ್ ವಿಡಿಯೋ ಕೇಸ್: “ಎಸ್​ಐಟಿ ಎಂದರೆ ಸಿದ್ದು, ಶಿವಕುಮಾರ್ ಟೀಂ”

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ. ಅವರಿಗೆ ಕೇವಲ ಪ್ರಚಾರ,…

9 mins ago

ಮಗಳ ಜೊತೆ ಬಂದು ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಆಲಗೂರ್

ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ‌ ಪ್ರೊ. ರಾಜು ಆಲಗೂರ ಅವರು ಇಂದು ಬೆಳಗ್ಗೆ ತಮ್ಮ ಸ್ವಗ್ರಾಮ ತೊರವಿಯಲ್ಲಿ ಮಗಳು ಭವಾನಿಯೊಂದಿಗೆ ಆಗಮಿಸಿ…

30 mins ago

ಬಂಟವಾಳದ ಬಂಟರ ಭವನದ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

46 mins ago

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು ಎಲ್ಲಿ ಮತದಾನ ಮಾಡ್ತಾರೆ ಗೊತ್ತಾ?

ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್‌ ರಿಷಬ್ ಶೆಟ್ಟಿ ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೇ-7 ರ ಇಂದು ಲೋಕಸಭಾ ಚುನಾವಣೆಯ ಎರಡನೇ…

50 mins ago

ಬಿಟ್ ಕಾಯಿನ್ ಹಗರಣ ಕೇಸ್‌ : ಆರೋಪಿ ಶ್ರೀಕಿ ಬಂಧನ

ಬಿಟ್ ಕಾಯಿನ್ ಹಗರಣ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. 2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ…

56 mins ago