ಕಾರವಾರ: ಸೇತುವೆಗೆ ಸಂಪರ್ಕ ರಸ್ತೆ ಇಲ್ಲದೆ ಜನರ ಪರದಾಟ, ಕ್ರಮಕ್ಕೆ ಒತ್ತಾಯ

ಕಾರವಾರ: ವೈಲ್ ವಾಡಾ ಗ್ರಾಪಂ ವ್ಯಾಪ್ತಿಯ ಉಮ್ಮಳೆಜೂಗ್ ನ ಜನರ ಹಿತಕ್ಕಾಗಿ ಸರಕಾರ ನಿರ್ಮಿಸಿದ ಸೇತುವೆ  ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಉಮ್ಮಳೆಜೂಗ್ ಜನರು ನಡುಗಡ್ಡೆಯಲ್ಲಿ ವಾಸವಾಗಿರುವ ಜನರಾಗಿದ್ದಾರೆ. ಮಕ್ಕಳು ಶಾಲಾ-ಕಾಲೇಜಿಗೆ ತೆರಳಲು, ನಗರಕ್ಕೆ ಬರಬೇಕಾದರೆ ದೋಣಿಯ ಮೂಲಕ ಈ ಹಿಂದೆ ಬರಬೇಕಾಗಿತ್ತು. ಆದರೆ ಸಾಕಷ್ಟು ಬೇಡಿಕೆಯ ಬಳಿಕ ಸರಕಾರ 10 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿದೆ.

ಆದರೆ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸದೆ ಇದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಸಂಪರ್ಕ ರಸ್ತೆ ಇಲ್ಲದ ಕಾರಣದಿಂದ ಸೇತುವೆಯ ಅಂತ್ಯದ ಸ್ಥಳೀಯರ ಜಾಗದ ಕಾಲು ದಾರಿಯ ಮೂಲಕ ವಿವಿಧ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದರು. ಜನರು ತುರ್ತು ಚಿಕಿತ್ಸೆಗಾಗಿಯೂ ಇದೇ ಮಾರ್ಗದಿಂದ ತೆರಳುತ್ತಿದ್ದರು. ಈ ನಡುವೆ ಜಾಗದ ಮಾಲೀಕರು ಪರಿಹಾರ ನೀಡಿಲ್ಲ ಎನ್ನುವ ಕಾರಣಕ್ಕೆ ಸೇತುವೆ ಮುಕ್ತಾಯದ ಜಾಗದ, ಕಾಲು ದಾರಿಯ ಪ್ರದೇಶದಲ್ಲಿ ಜೆಸಿಬಿ ಮೂಲಕ ಅಗೆಸಿದ್ದಾರೆ.

ಇದರಿಂದ ಉಮ್ಮಳೆಜೂಗ್ ಜನರಿಗೆ ಏಕೈಕ ಮಾರ್ಗ ಬಂದ್ ಆಗಿದೆ. ಜನರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದಿನಂತೆ ನದಿಯ ಮೂಲಕ ತೆರಳಲು ದೋಣಿಯು ಇಲ್ಲದಂತಾಗಿದೆ ಎನ್ನುವುದು ಗ್ರಾಮಸ್ಥರ ದೂರಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಾಗೂ ಗ್ರಾಮದ ಅಭಿವೃದ್ಧಿಗಾಗಿ, ಜನರ ಅನುಕೂಲಕ್ಕೆ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯ ಮಾಡಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪಂಚಾಯತ್ ಗೆ ಹಾಗೂ ತಹಸೀಲ್ದಾರರಿಗೆ ಮನವಿ ಸಹ ಸಲ್ಲಿಸಲಾಗಿದೆ. ಈ ವೇಳೆ ಕೇವಲ ತಾಮ್ಸೆ, ದೀಪಕ ತಾಮ್ಸೆ, ಸಾಯಿನಾಥ ತಾಮ್ಸೆ, ಸಂದೀಪ ತಾಮ್ಸೆ, ಸಂಜನಾ ತಾಮ್ಸೆ ಇದ್ದರು.

Ashika S

Recent Posts

ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸಿದ ವೀಡಿಯೊ ವೈರಲ್

ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…

6 mins ago

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

20 mins ago

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…

32 mins ago

ಜೂನಿಯರ್ ಎನ್​ಟಿಆರ್ ಜನ್ಮದಿನ : ಸ್ಟಾರ್ ಹೀರೋಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ

ಜೂನಿಯರ್ ಎನ್​ಟಿಆರ್ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ.ಈ ವಿಶೇಷ ದಿನದಂದು ಸೆಲೆಬ್ರಿಟಿಗಳು, ಕುಟುಂಬದವರು, ಅಭಿಮಾನಿಗಳು ನಟನಿಗೆ ಶುಭಾಶಯ ಬರುತ್ತಿದೆ. ಜೂನಿಯರ್…

50 mins ago

ಮಲ್ಲಮ್ಮ ಜಯಂತಿಗೆ ಅಗೌರವ : ರೆಡ್ಡಿ ಸಮಾಜ ಪದಾಧಿಕಾರಿಗಳ ಪ್ರತಿಭಟನೆ

ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…

1 hour ago

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

2 hours ago