ಕಾರವಾರ: ಉಪ್ಪು ನೀರಿನಿಂದ ಸಮಸ್ಯೆ, ಕಾಂಕ್ರೀಟ್‌ ಹಾಕಿ ಗೇಟ್ ಬಂದ್ ಮಾಡಿದ ಗ್ರಾಮಸ್ಥರು

ಕಾರವಾರ: ಖಾಸಗಿ ಜಮೀನಿನಲ್ಲಿ ಉಪ್ಪು ನೀರು ಸಂಗ್ರಹಿಸುತ್ತಿರುವುದರಿಂದ ಊರಿಗೆಲ್ಲ ಆಗುತ್ತಿರುವ ಸಮಸ್ಯೆಯನ್ನು ನೀಗಿಸಲು ಸ್ವತಃ ಗ್ರಾಮಸ್ಥರು ಕಾಂಕ್ರಿಟ್ ಹಾಕಿ ಗೇಟ್ ಬಂದ್ ಮಾಡಿದ ಘಟನೆ ತಾಲೂಕಿನ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯ ಕಣಸಗಿರಿಯಲ್ಲಿ ನಡೆಯಿತು.

ತಾಲೂಕಿನ ಚಿತ್ತಾಕುಲಾ ಕಣಸಗಿರಿಯ ಸರ್ವೇ ನಂಬರ್ 21ರಲ್ಲಿ 111 ಎಕರೆ ಜಮೀನಿಗೆ ಕಾಳಿ ನದಿಯಲ್ಲಿ ಬರುವ ಉಪ್ಪುನೀರನ್ನು ಒಳಗೆ ತಡೆಯುವ ಗೇಟ್ ಎದುರು ಸೇರಿದ 50 ಕ್ಕೂ ಅಧಿಕ ಜನರು ಘೋಷಣೆಗಳನ್ನು ಕೂಗಿದರು. ನಂತರ ಪ್ರಮುಖ ಗಜೇಂದ್ರ ನಾಯ್ಕ ನೇತೃತ್ವದಲ್ಲಿ ಕಾಂಕ್ರಿಟ್ ಮಿಕ್ಷರ್ ಯಂತ್ರವನ್ನು ತಂದ ಗ್ರಾಮಸ್ಥರು ಗೇಟನ್ನು ಬಂದ್ ಮಾಡಿದರು.

ವಿವೇಕ ವೆಂಕಟರಾಯ ನಾಡಕರ್ಣಿ ಅವರ ಹೆಸರಿನ ಜಮೀನಿನಲ್ಲಿ ಕೆನರಾ ಮಷಿನರಿ ಸರ್ಚ್ವರ್ಕ್ ಎಂಬ ಕಂಪನಿಯಿಂದ ಈ ಹಿಂದೆ ಉಪ್ಪು ತಯಾರಿಸಲಾಗುತ್ತಿತ್ತು. ಆಗ ಅಲ್ಪ ನೀರು ಪಡೆದು ನಿಲ್ಲಿಸುವುದರಿಂದ ಸಮಸ್ಯೆ ಇರಲಿಲ್ಲ. ಈಗ ಏಳೆಂಟು ವರ್ಷಗಳಿಂದ ಉಪ್ಪು ಬೆಳೆಯುವುದನ್ನು ಬಂದ್ ಮಾಡಲಾಗಿತ್ತು. ಆದರೆ, ಉಬ್ಬರದ ಸಮಯದಲ್ಲಿ ಮೂರ್ನಾಲ್ಕು ಅಡಿ ನೀರನ್ನು ಗೇಟ್ ಮೂಲಕ ಒಳಗೆ ಪಡೆದು ನಿಲ್ಲಿಸಲಾಗುತ್ತಿತ್ತು.

ಅದರ ಜತೆ ಬರುವ ಮೀನುಗಳನ್ನು ಹಿಡಿಯುವ ಕಾರ್ಯ ಮಾಡಲಾಗುತ್ತಿತ್ತು. ಇದರಿಂದ ಆ ಜಮೀನಿನ ಸುತ್ತಲೂ ಇರುವ 152 ಮನೆಗಳ ಬಾವಿಗಳ ನೀರು ಉಪ್ಪಾಗುತ್ತಿತ್ತು. ಮಾತ್ರವಲ್ಲ ಅಕ್ಕಪಕ್ಕದ ಜಮೀನುಗಳಿಗೂ ಉಪ್ಪು ನೀರು ನುಗ್ಗುತ್ತಿತ್ತು. ಇದರಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿದೆ ಎಂಬುದು ಗ್ರಾಮಸ್ಥರ ದೂರು. ಈ ಬಗ್ಗೆ ಗ್ರಾಪಂಗೆ ಹಲವು ಬಾರಿ ದೂರು ನೀಡಿದರೂ ಕ್ರಮವಾಗಿರಲಿಲ್ಲ.

ಈ ರೀತಿ ಮೀನು ಹಿಡಿಯಲು ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಅನುಮತಿಯನ್ನೂ ಪಡೆದಿಲ್ಲ ಎಂದು ಗ್ರಾಮಸ್ಥರು ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಅದರಂತೆ ತಹಸೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ಇಲ್ಲಿ ಅಕ್ರಮವಾಗಿ ಉಪ್ಪು ನೀರು ಸಂಗ್ರಹಿಸುವ ಕಾರ್ಯವಾಗುತ್ತಿದೆ ಎಂದು ವರದಿ ನೀಡಿದ್ದರು. ಆದರೆ, ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವತಃ ಕಾರ್ಯಾಚರಣೆ ನಡೆಸಿದರು. ಚಿತ್ತಾಕುಲಾ ಠಾಣೆ ಪೊಲೀಸರು ಭದ್ರತೆ ಒದಗಿಸಿದ್ದರು.

Ashika S

Recent Posts

ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು

ಮೊಬೈಲ್‌ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…

12 mins ago

ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಏನು ?

ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…

26 mins ago

ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಅಪ್

ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ…

45 mins ago

ಮಲ್ಪೆಯಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಳ : ವಾಟರ್ ಸ್ಪೋರ್ಟ್ಸ್ ಸ್ಥಗಿತ

ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.

53 mins ago

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…

59 mins ago

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

1 hour ago