ಉತ್ತರಕನ್ನಡ

ಕಾರವಾರ: ರಾಜ್ಯದ ಮೊದಲ ಪರಿಸರ ವಿಶ್ವವಿದ್ಯಾಲಯ ಶಿರಸಿಯಲ್ಲಿ ಸ್ಥಾಪನೆ

ಕಾರವಾರ: ರಾಜ್ಯದ ಮೊದಲ ಪರಿಸರ ವಿಶ್ವವಿದ್ಯಾಲಯವನ್ನು  ಶಿರಸಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಿರಸಿಯಲ್ಲಿ ರವಿವಾರ ಘೋಷಣೆ ಮಾಡಿದ್ದಾರೆ.

ಶಿರಸಿಗೆ ರವಿವಾರ ಭೇಟಿ ನೀಡಿದ ವೇಳೆ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಡಲಾಗುವುದು. ಈಗಾಗಲೇ ತೋಟಗಾರಿಕೆ, ಅರಣ್ಯ ಕಾಲೇಜು ಶಿರಸಿಯಲ್ಲಿದೆ. ಇವುಗಳನ್ನು ವಿಲೀನಗೊಳಿಸಿ ವನ್ಯಜೀವಿ ರಕ್ಷಣೆ, ಪರಿಸರ ಸಂರಕ್ಷಣೆ, ಕೃಷಿ ಸೇರಿದಂತೆ ಪರಿಸರ ಪೂರಕ ಅಧ್ಯಯನಗಳಿಗೆ ಅನುಕೂಲವಾಗಲು ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ ಅರಣ್ಯವಾಸಿಗಳು ಭಯಪಡುವ ಅಗತ್ಯವಿಲ್ಲ. ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂಬ ಮನವಿ ಮಾಡಲಾಗಿದೆ. ಅರಣ್ಯ ವಾಸಿಗಳಿಗೆ ಜೀವನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ.ಅರಣ್ಯವಾಸಿಗಳು ತಲೆತಲಾಂತರದಿಂದ ಅಲ್ಲಿ ಜೀವನ ಮಾಡುತ್ತಿದ್ದಾರೆ. ಅದಕ್ಕಾಗಿ ಈಗ ಸರ್ಕಾರ ಮೂರು ತಲೆಮಾರುಗಳ ಬದಲು ಒಂದು ತಲೆಮಾರಿನ ಬಗ್ಗೆ ಮಾಹಿತಿ ಪಡೆದು ಹಕ್ಕುಪತ್ರ ನೀಡಲು ಚಿಂತನೆ ನಡೆಸಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟಿಗೆ ತಿಳಿಸಲಾಗಿದೆ ಸುಪ್ರಿಂಕೋರ್ಟ್ ನಿರ್ಣಯ ಬರುವವರೆಗೂ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ನೀಡದಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಭೂಕುಸಿತ ಉಂಟಾಗದಂತೆ ಕ್ರಮಕೈಗೊಳ್ಳಲಾಗುವುದು. ಪುನರ್ವಸತಿಗೆ ಹೆಚ್ಚಿನ ಅನುದಾನ ಕೊಡಲಾಗುವುದು ಎಂದು ಅವರು ಭರವಸೆ ನೀಡಿದರು. ಶಿರಸಿ ಜಿಲ್ಲೆಯ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ ಹೆಬ್ಬಾರ, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ.ಪಾಟೀಲ ಇದ್ದರು.

Ashika S

Recent Posts

ಬಂಟ್ವಾಳ ಜಮೀಯ್ಯತುಲ್ ಫಲಾಹ್, ರೋಟರಿ ಕ್ಲಬ್ ನಿಂದ “ಮೆಹ್’ಫಿಲೇ ಈದ್”

 ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್'ಫಿಲೇ…

3 mins ago

ಸಂಧಿವಾತದ ಸಮಸ್ಯೆಗೆ ಬಿಸಿನೀರ ಬಳಕೆ ಒಳ್ಳೆಯದು!

ಕೈಕಾಲು ಎಳೆತದಂತಹ ಕಾಯಿಲೆ ಅರ್ಥಾತ್ ಸಂಧಿವಾತ ಹೆಚ್ಚು ನೀರಲ್ಲಿ ಕೆಲಸ ಮಾಡುವವರನ್ನು ಇಲ್ಲಿಲ್ಲದಂತೆ ಕಾಡುತ್ತದೆ. ಅದರಲ್ಲೂ ಶೀತ ಪ್ರದೇಶದಲ್ಲಿ ಕೆಲಸ…

17 mins ago

ಇನ್‌ಸ್ಟಾ ಲೈವ್‌ಗೋಸ್ಕರ ಕಾರಿನ ಸ್ಪೀಡ್‌ ಹೆಚ್ಚಿಸಿದ ಸ್ನೇಹಿತ : ನಾಲ್ವರ ದುರ್ಮರಣ

ಇನ್‌ಸ್ಟಾಗ್ರಾಮ್‌ ಲೈವ್‌ ಮಾಡವುದಕ್ಕಾಗಿ ಸ್ನೇಹಿತ ಕಾರಿನ ವೇಗವನ್ನು ಹೆಚ್ಚಿಸಿದ್ದು ನಂತರ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದ್ದು ನಾಲ್ವರು ಸಾವನಪ್ಪಿದ್ದು…

22 mins ago

ಮಳೆಗಾಗಿ ಕತ್ತೆಗೆ ಮದುವೆ ಮಾಡಿದ ಗ್ರಾಮಸ್ಥರು

ಮಳೆ  ಇಲ್ಲದೆ ಬರ ಪರಿಸ್ಥಿರಿ ಎದುರಾಗಿದ್ದು,  ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಲ್ಲ ಸೇರಿಕೊಂಡು ಕತ್ತೆಗಳಿಗೆ ಮದುವೆ ಮಾಡಿ ವರುಣರಾಯನಿಗಾಗಿ ಪ್ರಾರ್ಥಿಸಿದ…

29 mins ago

ಜುಲೈ ಅಂತ್ಯದ ವೇಳೆಗೆ ನಾಗಸಂದ್ರ, ಮಾದಾವರದ ನಡುವೆ ಮೆಟ್ರೋ ಆರಂಭ

ಪಂಚವಾರ್ಷಿಕ ಯೋಜನೆಯಾಗಿ ಉಳಿದಿದ್ದ ನಮ್ಮ ಮೆಟ್ರೋ ಹಸಿರು ಕಾರಿಡಾರ್​ನ ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಮಾರ್ಗ  ಜುಲೈ…

41 mins ago

ವೃದ್ಧನ ಅನ್ನನಾಳದಲ್ಲಿ ಸಿಲುಕಿದ್ದ ಮಟನ್ ಮೂಳೆಯನ್ನು ಹೊರತೆಗೆದ ವೈದ್ಯರು

ಎಲ್‌ಬಿ ನಗರದ ಕಾಮಿನೇನಿ ಆಸ್ಪತ್ರೆಯ ವೈದ್ಯರು 66 ವರ್ಷದ ರೋಗಿಯ ಹೃದಯದ ಬಳಿ ಅನ್ನನಾಳದಲ್ಲಿ ಸಿಲುಕಿದ್ದ ಮಟನ್ ಮೂಳೆಯನ್ನು ಯಶಸ್ವಿಯಾಗಿ…

50 mins ago