ಕಾರವಾರ: ಶಿಕ್ಷಣ ನೀತಿಯಲ್ಲಿರುವ ಗೊಂದಲ ಬಗೆಹರಿಸಿ – ಶಿಕ್ಷಣ ತಜ್ಞ ಪ್ರೊ. ಡಾ. ನಿರಂಜನಾರಾಧ್ಯಾ

ಕಾರವಾರ: ಶಿಕ್ಷಣ ನೀತಿಯಲ್ಲಿ ಸಾಕಷ್ಟು ಗೊಂದಲಗಳಿದ್ದು ಅವುಗಳನ್ನು ಬಗೆಹರಿಸುವ ಕ್ರಮ ಆಗಬೇಕಾಗಿದೆ ಎಂದು ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಮಹಾಪೋಷಕ, ಶಿಕ್ಷಣ ತಜ್ಞರಾದ ಪ್ರೊ. ಡಾ. ನಿರಂಜನಾರಾಧ್ಯಾ ವಿ.ಪಿ. ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಕೋವಿಡ್ ಬಳಿಕ ಶಾಲೆಗಳು ಪ್ರಾರಂಭವಾದಾಗ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆ ಆಗಿರುವುದನ್ನು ತುಂಬಿಕೊಡುವ ಮೂಲಕ ಮಕ್ಕಳ ಕಲಿಕೆಯನ್ನು ಮುಖ್ಯ ವಾಹಿನಿಗೆ ತರಬೇಕೆಂದು ಸಮನ್ವಯ ವೇದಿಕೆ ಸರ್ಕಾರವನ್ನು ಒತ್ತಾಯಿಸುತ್ತಿದೆ ಈ ಸರ್ಕಾರ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಬದಲು ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ತರಾತುರಿಯಲ್ಲಿದೆ ಎಂದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸಿಗಬೇಕಾದ ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿಚಾರದಲ್ಲಿ ಗೊಂದಲ ಸೃಷ್ಟಿಸಿ, ನಮ್ಮ ವೇದಿಕೆಯ ಒತ್ತಾಯಿಸಿದ ಮೇಲೆ ಅವುಗಳನ್ನು ಒದಗಿಸುವ ಬಗೆ ಮುಖ್ಯಮಂತ್ರಿಗಳು ತೀರ್ಮಾನಿಸಿದರು. ಆದರೆ ೮ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ವರ್ಷ ಸೈಕಲ್ ವಿತರಣೆ ಮಾಡಲೇ ಇಲ್ಲ. ಇದಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ ವಿಚಾರದಲ್ಲೂ ಗೊಂದಲ ಸೃಷ್ಟಿ ಮಾಡಲಾಯಿತು. ರಾಜ್ಯದ ಕೆ.ಪಿ.ಎಸ್. ಶಾಲೆಗಳಲ್ಲಿ ಪಾಲಕರ ಪರಿಷತ್ತಿನಿಂದ ಆಯ್ಕೆಯಾದ ಪಾಲಕರ ಪ್ರತಿನಿಧಿ ಅಧ್ಯಕ್ಷರನ್ನು ಬದಲಾಯಿಸಿ, ಅಲ್ಲಿ ಶಾಸಕರನ್ನು ಅಧ್ಯಕ್ಷರಾಗಲು ಅನುಕೂಲವಾಗುವಂತೆ ಸುತ್ತೋಲೆಯನ್ನು ಮಾರ್ಪಡಿಸಿ, ಶಿಕ್ಷಣ ಕ್ಷೇತ್ರದಲ್ಲೂ ರಾಜನೀತಿ ತರಲಾಯಿತು.

ಆದ್ದರಿಂದ ಈ ಎಲ್ಲಾ ಸಮಸ್ಯೆಗಳಿಂದ ಹೊರಬಂದು ಶಾಲಾ ಶಿಕ್ಷಣವನ್ನು ಗಟ್ಟಿಗೊಳಿಸಲು ಸರ್ಕಾರ ಕೆಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮನ್ವಯ ವೇದಿಕೆಯ ಒಕ್ಕೊರಲಿನಿಂದ ಒತ್ತಾಯಿಸುತ್ತದೆ ಎಂದು ಪ್ರೊ. ಡಾ. ನಿರಂಜನಾರಾಧ್ಯಾ ಆಗ್ರಹಿಸಿದರು. ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಸರ್ಕಾರದ ಮುಂದೆ ಶಾಲಾ ಶಿಕ್ಷಣವನ್ನು ಗಟ್ಟಿಗೊಳಿಸಲು ಆಗ್ರಹಿಸಿದೆ.

Ashika S

Recent Posts

ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್‌ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

ಉಡುಪಿಯ ಪ್ರತಿಷ್ಠಿತ ಜವಳಿ ಮಳಿಗೆ ‘ಗೀತಾಂಜಲಿ ಸಿಲ್ಕ್’ ಮತ್ತು ಶಾಂತಿಸಾಗರ್ ಹೊಟೇಲ್‌ನ ಸಂಸ್ಥಾಪಕರಾದ ನೀರೆ ಬೈಲೂರು ಗೋವಿಂದ ನಾಯಕ್ (89)…

6 mins ago

ಸ್ಥಳೀಯ ವಾಹನಗಳಿಗೆ ಟೋಲ್ ಕಡಿತ: ಸ್ಥಳೀಯರಿಂದ ಸಾಸ್ತಾನ ಟೋಲ್ ಗೇಟ್ ಗೆ ಮುತ್ತಿಗೆ

ಕಳೆದ ಹಲವು ದಿನಗಳಿಂದ ಸ್ಥಳೀಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ನಲ್ಲಿ ಶುಲ್ಕ ಕಡಿತವಾಗುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಸಾಸ್ತಾನ ಟೋಲ್ ಗೇಟ್…

21 mins ago

ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ : ತುರ್ತು ಭೂ ಸ್ಪರ್ಶ

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಏರ್ ಇಂಡಿಯಾ ವಿಮಾನವು…

34 mins ago

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಬಿಜೆಪಿ ಮುಖಂಡನ ಬಂಧನ : ಠಾಣೆಗೆ ಹರೀಶ್ ಪೂಂಜ ಮುತ್ತಿಗೆ

ಮೇಲಂತಬೆಟ್ಟು ಅಕ್ರಮ ಕೋರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಶಾಸಕ ಹರೀಶ್ ಪೂಂಜ ಆಪ್ತ ಬಿಜೆಪಿ ಯುವ ಮೋರ್ಚಾ ಮುಖಂಡ…

57 mins ago

ರಾತ್ರಿ 1:30 ಆದರೂ ನಿಲ್ಲದ ರೆಡ್​ ಆರ್ಮಿ ಹರ್ಷ; ವಿಡಿಯೋ ಮಾಡಿ ಶೇರ್​ ಮಾಡಿದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರಲ್ಲಿ ಅದ್ಭುತವನ್ನೇ ಮಾಡಿದೆ. ಸತತ ಪಂದ್ಯಗಳಲ್ಲಿ ಸೋತು ಒಂದು ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ…

1 hour ago

ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಶನಿವಾರ ಅರೆಸ್ಟ್ ವಾರಂಟ್…

1 hour ago