ಉತ್ತರಕನ್ನಡ

ಕಾರವಾರ: ಜಿಲ್ಲಾ ಮಟ್ಟದ ಅಣುಕು ಯುವ ಸಂಸತ್‌ ಸ್ಪರ್ಧಾ ಕಾರ್ಯಕ್ರಮ

ಕಾರವಾರ: ರಾಜಕೀಯವನ್ನು ಕೂಡಾ ವೃತ್ತಿ ಜೀವನವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು, ಇದು ಸಮಾಜ ಸುಧಾರಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸಲಿದೆ. ಯಾವುದೇ ರಾಜಕೀಯ ಪಕ್ಷ ಹಾಗೂ ಆಡಳಿತದ ಕುರಿತು ನಿಮ್ಮನ್ನು ನೀವು ಅರಿತುಕೊಳ್ಳವು ಒಳ್ಳೆಯದು. ಯಾವುದೇ ಉನ್ನತ ಹುದ್ದೆಗೆರಲು ಅದಕ್ಕೆ ತಕ್ಕ ಪರಿಶ್ರಮ ಅತ್ಯಂತ ಅವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ್‌ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಹೇಳಿದರು.

ನಗರದ ಜಿಲ್ಲಾ ಪಂಚಾಯತ್‌ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ 2022-23 ನೇ ಸಾಲಿನ ಜಿಲ್ಲಾ ಮಟ್ಟದ ಅಣುಕು ಯುವ ಸಂಸತ್‌ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಪ್ರಜೆಗಳಾಲು ಉತ್ತಮ ಶಿಕ್ಷಣ ತುಂಬಾ ಅವಶ್ಯಕ ಹಾಗೆಯೇ ರಾಜಕೀಯ ಮತ್ತು ರಾಜಕಾರಣಿಗಳನ್ನು ಟೀಕಿಸುವ ಮೊದಲು ನಿಮ್ಮ ಕರ್ತವ್ಯವೇನು ಎಂದು ಅರಿಯುವುದು ಉತ್ತಮ. ಇಂದಿನ ಮಕ್ಕಳು ಉತ್ತಮ ಸಮಾಜ ನಿರ್ಮಿಸಲು ಮೊದಲು ತಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳವುದು. ರಾಜಕೀಯ, ಪ್ರಜಾಪ್ರಭುತ್ವ ಮತ್ತು ಆಡಳಿತದ ಬಗ್ಗೆ ಹೆಚ್ಚು ತಿಳಿಕೊಂಡು ಸಮಾಜದಲ್ಲಿ ತಮ್ಮ ಕರ್ತವ್ಯ ಮತ್ತು ಜವಬ್ದಾರಿಗಳನ್ನು ಅರಿಯುವುದು. ಯಾವುದೇ ವ್ಯವಸ್ಥೆ ಬಗ್ಗೆ ತಪ್ಪಿದಲ್ಲಿ ಅದರ ಬಗ್ಗೆ ದೂರು ನೀಡುವುದು ಅಥವಾ ಆ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳವುದು. ರಾಜಕೀಯ ಕಲಾಪಗಳನ್ನು ನೋಡುವುದು ಅದರ ಬಗ್ಗೆ ಜ್ಞಾನ ಪಡೆದುಕೊಳ್ಳುವುದು ಈಗಿನಿಂದಲೇ ನೀವು ರೂಢಿಸಿಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಅಣುಕು ಯುವ್‌ಸಂಸತ್‌ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಿಂದ 12 ವಿದ್ಯಾರ್ಥಿಗಳಂತೆ ಒಟ್ಟು 57 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಹೊನ್ನಾವರ ತಾಲೂಕಿನ ಸರಕಾರಿ ಪ್ರೌಢ ಶಾಲೆ ನಮೀತಾ ನಾಯ್ಕ್‌, ದ್ವೀತಿಯ ಕುಮಟಾ ತಾಲೂಕಿನ ಆದಿತ್ಯ ಪಠಗಾರ, ತೃತೀಯ ಭಟ್ಕಳ ತಾಲೂಕಿನ ನಮೀತಾ ಹೆಬ್ಬಾರ ವೀಜೇತರಾಗಿದ್ದು, ನಮೀತಾ ನಾಯ್ಕ್‌, ಆದಿತ್ಯ ಪಠಗಾರ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಾರ್ಯಕ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ್‌ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಈಶ್ವರ್‌ನಾಯಕ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಲತಾ ಎಂ ನಾಯ್ಕ, ಸರಕಾರಿ ಪ್ರೌಢ ಶಾಲಾ ಮುಖ್ಯಾದ್ಯಾಪಕ ಮಂಜುನಾಥ ಸಿ. ಬರ್ಗಿ, ಸಮಾಜ ವಿಜ್ಷಾನ ವೇದಿಕೆಯ ಅಧ್ಯಕ್ಞ ಮಾರುತಿ ನಾಯಕ ಹಾಗೂ ಎಲ್ಲಾ ತಾಲೂಕಿನ ಶಿಕ್ಷಕರು ಉಪಸ್ಥಿತರಿದ್ದರು.

Ashika S

Recent Posts

‘ಬಿರಿಯಾನಿ ಹಟ್’ ಹೊಟೇಲ್ ನಲ್ಲಿ ಬೆಂಕಿ ಅವಘಡ : ಲಕ್ಷಾಂತರ ರೂ.ನಷ್ಟ

ಉಡುಪಿಯ ಕರಾವಳಿ ಜಂಕ್ಷನ್ ಬಳಿ ಇರುವ ಬಿರಿಯಾನಿ ಹಟ್ ಹೊಟೇಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು…

7 mins ago

ಉಡುಪಿ : ಮೇ 17ರಿಂದ ಪ್ರಾಚೀನ ಕಲ್ಲಚ್ಚು ಕಲಾಕೃತಿಗಳ ಪ್ರದರ್ಶನ

1890-1947ರ ಅವಧಿಯ ಭಿತ್ತಿಪತ್ರ, ಬಟ್ಟೆ ಲೇಬಲ್, ಬೆಂಕಿ ಪೊಟ್ಟಣದ ಮೇಲಿನ ಲೇಬಲ್‌ಗಳ ಕಲ್ಲಚ್ಚು ಕಲಾ ಪ್ರದರ್ಶನವನ್ನು ಕುಂಜಿಬೆಟ್ಟುವಿನ ಅದಿತಿ ಕಲಾ…

18 mins ago

ನಿವೃತ್ತಿ ಘೋಷಿಸಿದ ಪ್ರಸಿದ್ಧ ಫುಟ್​ಬಾಲ್ ಆಟಗಾರ ಸುನಿಲ್ ಛೆಟ್ರಿ

ಫುಟ್​ಬಾಲ್ ಲೆಜೆಂಡ್ ಆಟಗಾರ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್​ಬಾಲ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ಕೊಲ್ಕತ್ತಾದ ಸಾಲ್ಟ್ ಲೇಕ್…

29 mins ago

90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ

ನೋಕಿಯಾ ತನ್ನ 3210 ಫೋನನ್ನು ಮತ್ತೆ ಮರು ಪರಿಚಯಿಸಿದೆ. 90ರ ದಶಕದಲ್ಲಿ ಐಕಾನಿಕ್​ ಫೋನ್​ ಆಗಿ ಮಾರುಕಟ್ಟೆಗೆ ಬಂದ ನೋಕಿಯಾ…

35 mins ago

ಸುಬ್ರಹ್ಮಣ್ಯದಲ್ಲಿ ಭಾರಿ ಗಾಳಿ-ಮಳೆ : ತೋಟದಲ್ಲಿ ಮರ ಬಿದ್ದು ಮಹಿಳೆ ಸಾವು

  ಗಾಳಿ - ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಮೇ 16…

1 hour ago

‘ಜೆಟ್ ಏರ್ವೇಸ್’ ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ನಿಧನ

ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

1 hour ago