ಉತ್ತರಕನ್ನಡ

ಕಾರವಾರ: ಸಿಬಿಎಸ್ ಸಿ ಪರೀಕ್ಷಾ ಕೇಂದ್ರ ಸ್ಥಳಾಂತರ ಮಾಡದಂತೆ ಒತ್ತಾಯ

ಕಾರವಾರ: ಕೈಗಾದಲ್ಲಿರುವ ಅಣುಶಕ್ತಿ ಕೇಂದ್ರಿಯ ವಿದ್ಯಾಲಯದ ಸಿಬಿಎಸ್ ಸಿ ಪರೀಕ್ಷಾ ಕೇಂದ್ರವನ್ನು ಹಳಿಯಾಳದಲ್ಲಿ ಸ್ಥಳಾಂತರ ಮಾಡದಂತೆ ಬಿಜೆಪಿ ಗ್ರಾಮೀಣ ಘಟಕ ಕಾರ್ಯದರ್ಶಿ ಘನಶ್ಯಾಮ್ ಬಾಂದೇಕರ್ ಸಂಸದ ಅನಂತಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಕೈಗಾದಲ್ಲಿರುವ ಅಣುಶಕ್ತಿ ಕೇಂದ್ರಿಯ ವಿದ್ಯಾಲಯದ ಸಿಬಿಎಸ್ ಸಿ ಶಾಲೆಯಲ್ಲಿ ಒಟ್ಟು 175 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ಇಷ್ಟು ವರ್ಷ ತನಕ ಅದೇ ಶಾಲೆಯಲ್ಲಿ ವಾರ್ಷಿಕ ಪರೀಕ್ಷೆಯು ಅದೇ ಪರೀಕ್ಷಾ ಕೇಂದ್ರದಲ್ಲಿಯೇ ಬರೆಯುತ್ತಿದ್ದರು . ಅದೇ ರೀತಿ ಅಲ್ಲಿನ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿತ್ತು. ಆದರೆ ಈಗ ಸಿಬಿಎಸ್ ಸಿ ಇಲಾಖೆದವರು ಇಷ್ಟು ವರ್ಷ ಕೈಗಾದ ಅಣುಶಕ್ತಿ ಕೇಂದ್ರಿಯ ವಿದ್ಯಾಲಯದಲ್ಲಿ ನಡೆಯುತ್ತಿದ್ದ ಸಿಬಿಎಸ್ ಸಿ ಪರೀಕ್ಷಾ ಕೇಂದ್ರವನ್ನು ಹಳಿಯಾಳ ತಾಲೂಕಿನಲ್ಲಿ ಸ್ಥಳಾಂತರ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಅದೇ ರೀತಿ ಅವರಿಗೆ ಪರೀಕ್ಷೆ ಬರೆಯಲು ದೂರದ ಹಳಿಯಾಳ 65 ಕಿ.ಮೀ ಸಂಚಾರ ಮಾಡಬೇಕಾಗುತ್ತದೆ ಇದರಿಂದ ಅವರಿಗೆ ಸರಿಯಾಗಿ ಓದಲು ಸಹ ಸಿಗುವುದಿಲ್ಲ ಆದರಿಂದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಪಡುತ್ತಾರೆ. ಕೈಗಾದಲ್ಲಿರುವ ಅಣುಶಕ್ತಿ ಕೇಂದ್ರಿಯ ವಿದ್ಯಾಲಯದ ಸಿಬಿಎಸ್ ಸಿ ಪರೀಕ್ಷಾ ಕೇಂದ್ರವನ್ನು ಹಳಿಯಾಳದಲ್ಲಿ ಸ್ಥಳಾಂತರ ಮಾಡದಂತೆ ಬಿಜೆಪಿ ಗ್ರಾಮೀಣ ಘಟಕ ಕಾರ್ಯದರ್ಶಿ ಘನಶ್ಯಾಮ್ ಬಾಂದೇಕರ್ ಒತ್ತಾಯ ಮಾಡಿದ್ದಾರೆ.

Sneha Gowda

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

4 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

4 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

5 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

5 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

5 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

5 hours ago