ಕಾರವಾರ: ಹಿಮಾಲಯದ ಪಾರ್ವತಿ ಕಣಿವೆ ಏರಿ ದಾಖಲೆ ಬರೆದ ಜಿಲ್ಲೆಯ ಯುವಕರ ತಂಡ

ಕಾರವಾರ: ಗೋಕರ್ಣದ ನಾಲ್ವರು ಹಾಗೂ ಜೋಯಿಡಾದ ಓರ್ವ ಸೇರಿ ಐವರು ಯುವಕರ ತಂಡ ಹಿಮಾಚಲ ಪ್ರದೇಶದ ಅತ್ಯಂತ ಎತ್ತರದ (17,450 ಅಡಿ) ಪಾರ್ವತಿ ಮತ್ತು ಪಿನ್ ಕಣಿವೆ ಸಂಧಿ ಸ್ಥಳವನ್ನು ಏರಿ ಭಾರತದ ಬಾವುಟ ಹಾರಿಸುವ ಮೂಲಕ ಈ ಸ್ಥಳವನ್ನು ಮುಟ್ಟಿದ ವರ್ಷದ ಮೊದಲ ಪರ್ವತಾರೋಹಿ ತಂಡ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಗೋಕರ್ಣದ ಗಣೇಶ ದಾಮೋದರ ಅಡಿ, ಮಹೇಶ ಗಣೇಶ ಹಿರೇಗಂಗೆ, ನಾಗಕುಮಾರ ಗಣಪತಿ ಗೋಪಿ, ಶ್ರೀನಿಧಿ ಚಂದ್ರಶೇಖರ ಅಡಿ ಹಾಗೂ ಜೋಯಿಡಾದ ಧ್ರುವ ಎನ್. ಚಾಪಖಂಡ ಪರ್ವತಾರೋಹಿ ಯುವಕರಾಗಿದ್ದಾರೆ. ಇವರ ಜತೆ ಹಿಮಾಚಲದ ಒಬ್ಬ ಗೈಡ್ ಮತ್ತು 6 ಸಹಾಯಕರು ಚಾರಣದಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಲಡಾಕ್, ಮಾನಸ ಸರೋವರ, ಹಿಮಾಲಯದ ವಿವಿಧ ಪ್ರದೇಶಗಳಿಗೆ ಚಾರಣ ಮಾಡಿದ್ದರು.

ಈ ಸ್ಥಳದಲ್ಲಿ -10 ಡಿಗ್ರಿ ತಾಪಮಾನವಿದ್ದು, ಈ ದುರ್ಘಮ ಪರ್ವತವನ್ನು ಏರಿ ಸಾಹಸ ಮೆರೆದಿದ್ದಾರೆ. ಅಲ್ಲಿನ ರಾಜ್ಯ ಸರಕಾರ ಈ ವರ್ಷದ ದಾಖಲೆಯಲ್ಲಿ ಗೋಕರ್ಣದ ಐವರ ಪಾರ್ವತಾರೋಹಿಗಳ ಹೆಸರು ನೋಂದಾಯಿಸಿಲ್ಪಟ್ಟಿರುವುದು ವಿಶೇಷ. ಹಿಮಾಲಯದ ಖಾಜಾ ವಲಯದ ಮುದ್ ಎಂಬ ಹಳ್ಳಿಯಿಂದ ಆರಂಭವಾಗುವ 120 ಕಿ.ಮೀ. ಕಾಲ್ನಡಿಗೆ ಚಾರಣವಾಗಿದೆ.

Gayathri SG

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

3 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

4 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

4 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

5 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

6 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

6 hours ago