News Karnataka Kannada
Saturday, May 04 2024
ಉತ್ತರಕನ್ನಡ

ಕಾರವಾರ: ಸಮುದ್ರ ಮಾರ್ಗವಾಗಿ ಸಾಗಾಟವಾಗುತ್ತಿದ್ದ ಗೋವಾ ಮದ್ಯ ವಶಕ್ಕೆ

Karwar: Goa liquor smuggled via sea route seized
Photo Credit : By Author

ಕಾರವಾರ: ಗೋವಾದ ಮದ್ಯ ಸಮುದ್ರ ಮಾರ್ಗವಾಗಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸರು ದಾಖಳಿ ನಡೆಸಿದ ಲಕ್ಷಾಂತರ ರೂ. ಮದ್ಯ ವಶಕ್ಕೆ ಪಡೆದ ಘಟನೆ ಮಾಜಾಳಿಯ ಭಾವಳ್ ಬಳಿ ಶನಿವಾರ ನಡೆದಿದೆ. ಬೋಟಿಯಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.

ಕರಾವಳಿ ಕಾವಲುಪಡೆ ಇನ್ಸ್ಪೆಕ್ಟರ್ ನಿಶ್ಚಲ ಕುಮಾರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಕ್ರಮ ಗೋವಾ ಮದ್ಯ ಸೇರಿ 2.90 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಗೋವಾ ಫೆನ್ನಿ, ವಿಸ್ಕಿ, ಉರಾಕ್ ಸೇರಿ ಗೋವಾ ಮದ್ಯ ಅಕ್ರಮ ಸಾಗಾಟಕ್ಕೆ ಯತ್ನಸಿದ್ದು,1.50 ಲಕ್ಷ ಮೌಲ್ಯದ ಗೋವಾ ಮದ್ಯ, 1.40 ಲಕ್ಷ ಮೌಲ್ಯದ ಬೋಟ್ ಹಾಗೂ ಎಂಜಿನ್ ವಶಕ್ಕೆ ಪಡೆದಿದ್ದಾರೆ.

ಕಾವಲುಪಡೆ ಪೊಲೀಸ್ ಕಂಡು ಬೋಟ್ ನಲ್ಲಿ ಇದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕಾರವಾರ ಕರಾವಳಿ ಕಾವಲುಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು