News Karnataka Kannada
Friday, May 17 2024
ಉತ್ತರಕನ್ನಡ

ಐತಿಹಾಸಿಕ ವಿಶೇಷ ಕಾರಿಡಾರ ನಿರ್ಮಾಣಕ್ಕೆ ಅನುದಾನ: ಸಿಎಂ ಬೊಮ್ಮಾಯಿ

Funds for construction of historic special corridor: CM Bommai
Photo Credit : News Kannada

ಬನವಾಸಿ: ಕನ್ನಡ ರಾಜ್ಯವನ್ನು ಆಳಿದ ರಾಜ್ಯ ಮನೆತನಗಳಾದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರ ಘತವೈಭವನ್ನು ಸಾರುವ ಕಾರ್ಯಕ್ರಮಗಳಿಗೆ ಬಜೆಟನಲ್ಲಿ ವಿಶೇಷ ಅನುದಾನ ನೀಡಲಾಗಿದೆ. ಐತಿಹಾಸಿಕ ವಿಶೇಷ ಕಾರಿಡಾರ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬನವಾಸಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕದಂಭೋತ್ಸವ 2023 ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಬನವಾಸಿಯು ಆದಿ ಕವಿ ಪಂಪ ಜನಿಸಿದ ನಾಡು ಕನ್ನಡ ನಾಡಿಗೆ ಮುನ್ನಡಿ ನೀಡಿದ ನಾಡಗಿದೆ. ಕದಂಬೋತ್ಸವನ್ನು ವಿಜೃಂಭಣೆಯಿಂದ ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ 3 ಸಾಹಿತಿಗಳಿಗೆ ಪಂಪ ಪ್ರಶಸ್ತಿಯನ್ನು ನೀಡುತ್ತಿದ್ದೆವೆ ಎಂದರು. ಬನವಾಸಿಯು ಸಾಹಿತ್ಯ, ಕಲೆಗೆ ಹೆಸರುವಾಸಿಯಾಗಿದೆ ಎಂದರು.

ಬನವಾಸಿ ಇಲ್ಲಿಯ ಐತಿಹಾಸಿಕ ಶ್ರೀ ಮಧುಕೇಶ್ವರ ದೇವರ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಧುಕೇಶ್ವರ ದೇವರ ಮಹಾಸ್ಯಂದನ ರಥವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳವಾರ ಲೋಕಾರ್ಪಣೆ ಮಾಡಿದರು.

ಬಳಿಕ ಶಿವರಾಮ ಹೆಬ್ಬಾರ್ ಅವರು ಮಾತನಾಡಿ, 70 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿಗೆ ಚಾಲನೆ ನೀಡಲಾಗಿದೆ, ಮುಖ್ಯ ಮಂತ್ರಿಗಳು ಈ ವರ್ಷದ ಕದಂಭೋತ್ಸವ ಕಾರ್ಯಕ್ರಮಕ್ಕೆ 3 ಕೋಟಿ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ 3 ಜನ ಸಾಹಿತಿಗಳಿಗೆ ಪಂಪ ಪ್ರಶಸ್ತಿಯನ್ನು 2020-21ನೇ ಸಾಲಿನ ಪ್ರಶಸ್ತಿಗೆ ಪ್ರೊ. ಸಿ.ಪಿ ಕೃಷ್ಣ ಕುಮಾರ್ ಮೈಸೂರು, 20221-22ರ ಸಾಲಿನಲ್ಲಿ ಡಾ. ಬಾಬು ಕೃಷ್ಣಮೂರ್ತಿ ಬೆಂಗಳೂರು ಹಾಗೂ 2022-23ನೇ ಸಾಲಿನ ಪಂಪ ಪ್ರಶಸ್ತಿಗೆ 2020-21ನೇ ಸಾಲಿನ ಪ್ರಶಸ್ತಿಗೆ ಪ್ರೊ. ಸಿ.ಪಿ ಕೃಷ್ಣ ಕುಮಾರ್ ಮೈಸೂರು, 20221-22ರ ಸಾಲಿನಲ್ಲಿ ಡಾ. ಬಾಬು ಕೃಷ್ಣಮೂರ್ತಿ ಬೆಂಗಳೂರು ಹಾಗೂ 2022-23ನೇ ಸಾಲಿನ ಪಂಪ ಪ್ರಶಸ್ತಿಗೆ ಎಸ್.ಆರ್. ರಾಮಸ್ವಾಮಿ ಬೆಂಗಳೂರು ಇವರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಮಾತನಾಡಿ, ಪಂಪ ಪ್ರಶಸ್ತಿ ಲಭಿಸಿದ್ದು ಅತೀ ಸಂತೋಷ ಉಂಟು ಮಾಡಿದೆ. ಈ ಪಂಪ ಪ್ರಶಸ್ತಿಯು ನನಗೆ ಅನಿರೀಕ್ಷಿತ ಎಂದರು. ನೂರಾರು ಸಾಹಿತಿಗಳು ಇಂದಿಗೂ ಕವಿತೆ ಸಾಹಿತ್ಯ ಬರೆಯುತ್ತಿದ್ದು ನಾನು ಕೂಡ ಸಾಹಿತ್ಯವನ್ನು ಬರೆಯಲು ಆರಂಭಿಸಿದೆ. ಅದು ನಮ್ಮ ಮನೆಯಲ್ಲಿ ನಮ್ಮ ಪರಿವಾದವರು ಸದಾ ಈ ಬರವಣಿಗೆಯಲ್ಲಿ ತೊಡಗಿಕೊಂಡಿರುವುದರಿಂದ ನನಗೂ ಕೂಡ ಈ ಸಾಹಿತ್ಯವನ್ನು ಬರೆಯುವ ಹವ್ಯಾಸ ಮೂಡಿತು ಎಂದರು. ಸಾಹಿತ್ಯವು ಸ್ವಾಭಿವಮಾನವನ್ನು ಮೂಡಿಸುತ್ತದೆ. ಇತಿಹಾಸವನ್ನು ತಿಳಿಪಡಿಸುವ ಶಕ್ತಿ ಹೊಂದಿದೆ. ದೇಶವನ್ನು ಕಟ್ಟುವಂತ ಶಕ್ತಿ ಮೂಡಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬೃಹತ ಮತ್ತು ಮಾಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ, ವಿಧಾಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಈಶ್ವರ್ ಕಾಂದೂ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಇತರ ಅಧಿಕಾರಿಗಳು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು