30 ಕೋಟಿ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ ಅಂಕೋಲಾ: ಶಾಂತಲಾ ನಾಡಕರ್ಣಿ

 ಅಂಕೋಲಾ: ಪಟ್ಟಣದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು 30 ಕೋಟಿ ರೂಪಾಯಿಗಳ ಅಭಿವೃದ್ಧಿಗೆ ಕಾಮಗಾರಿಗಳು ಜರುಗಲಿವೆ ಸುಂದರ ರಸ್ತೆಗಳು, ವಿದ್ಯುದೀಕರಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮಹತ್ವ ನೀಡುವ ಮೂಲಕ ಅಂಕೋಲಾ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿಸಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಅವರು ಹೇಳಿದರು.

73 ನೇ ಗಣರಾಜ್ಯೋತ್ಸವದ ದ್ವಜಾರೋಹಣವನ್ನು ಪಟ್ಟಣದ ಸಮಾಜ ಮಂದಿರದ ಎದುರು ನೆರವೇರಿಸಿ ಮಾತನಾಡಿದ ಅವರು ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ ವೈಯಕ್ತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಟ್ಟಣದ ಅಭಿವೃದ್ದಿಯಲ್ಲಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣದಲ್ಲಿ ದ್ವಜಾರೋಹಣ ನಡೆಸಿದ ತಾಲೂಕು ದಂಡಾಧಿಕಾರಿ ಉದಯ ಕುಂಬಾರ ಮಾತನಾಡಿ ಇಂದು ದೇಶ ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಜಾಪ್ರಭುತ್ವದ ಕೊಡುಗೆ ಅಪಾರ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಪಿ ವೈ ಸಾವಂತ್, ಪುರಸಭೆ ಮುಖ್ಯಾಧಿಕಾರಿ ಶೃತಿ ಗಾಯಕವಾಡ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್, ಪಿ.ಎಸ್.ಐ ಪ್ರವಿಣಕುಮಾರ್,ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ, ನ್ಯಾಯವಾದಿ ಸುಭಾಷ ನಾರ್ವೇಕರ್, ಪ್ರಮುಖರುಗಳಾದ ಭಾಸ್ಕರ ನಾರ್ವೇಕರ, ಅರುಣ ನಾಡಕರ್ಣಿ ಮೊದಲಾದವರು ಪಾಲ್ಗೊಂಡಿದ್ದರು.

Sneha Gowda

Recent Posts

ಮಗಳ ಜೊತೆ ಬಂದು ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಆಲಗೂರ್

ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ‌ ಪ್ರೊ. ರಾಜು ಆಲಗೂರ ಅವರು ಇಂದು ಬೆಳಗ್ಗೆ ತಮ್ಮ ಸ್ವಗ್ರಾಮ ತೊರವಿಯಲ್ಲಿ ಮಗಳು ಭವಾನಿಯೊಂದಿಗೆ ಆಗಮಿಸಿ…

42 seconds ago

ಬಂಟವಾಳದ ಬಂಟರ ಭವನದ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬಂಟವಾಳದ ಪ್ರತಿಷ್ಠಿತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

16 mins ago

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು ಎಲ್ಲಿ ಮತದಾನ ಮಾಡ್ತಾರೆ ಗೊತ್ತಾ?

ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್‌ ರಿಷಬ್ ಶೆಟ್ಟಿ ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೇ-7 ರ ಇಂದು ಲೋಕಸಭಾ ಚುನಾವಣೆಯ ಎರಡನೇ…

20 mins ago

ಬಿಟ್ ಕಾಯಿನ್ ಹಗರಣ ಕೇಸ್‌ : ಆರೋಪಿ ಶ್ರೀಕಿ ಬಂಧನ

ಬಿಟ್ ಕಾಯಿನ್ ಹಗರಣ ಪ್ರಕರಣದ ಆರೋಪಿ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. 2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ…

27 mins ago

ಬೀದರ್‌ ಕ್ಷೇತ್ರದಲ್ಲಿ 11 ಗಂಟೆಯವರೆಗೆ ಶೇ.22.33ರಷ್ಟು ಮತದಾನ

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಭಗವಂತ ಖೂಬಾ ಸ್ಪರ್ಧಿಯಾಗಿದ್ದರೆ, ಕಾಂಗ್ರೆಸ್‌ ನಿಂದ ಅರಣ್ಯ ಸಚಿವ…

32 mins ago

ಇರಾನ್‌ನಲ್ಲಿ ಮೀನಿನ ಮಳೆ; ವೀಡಿಯೋ ವೈರಲ್‌

ಇರಾನ್‌ನಲ್ಲಿ ಮೀನಿನ ಮಳೆಯಾಗುತ್ತಿದೆ. ಜಲಚರಗಳು ಆಕಾಶದಿಂದ ಕೆಳಗೆ ಬೀಳುತ್ತಿವೆ. ಹಲವು ಮೀನುಗಳು ಆಕಾಶದಿಂದ ಬೀಳುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ…

44 mins ago