News Karnataka Kannada
Saturday, May 04 2024
ಉತ್ತರಕನ್ನಡ

ಯಲ್ಲಾಪುರ: ಚಲಿಸುತ್ತಿದ್ದ ಟ್ರಾಲಿಯಿಂದ ಕಳಚಿ ಬಿದ್ದ ಗ್ಯಾಸ್ ಟ್ಯಾಂಕರ್

Tanker 05092021
Photo Credit :

ಕಾರವಾರ: ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದ ತಾಳಿಕುಂಬ್ರಿ ಕ್ರಾಸ್ ಬಳಿ ತಿರುವಿನಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್‌ನ ಟ್ರಾಲಿಯಿಂದ ಭರ್ತಿಯಾಗಿದ್ದ ಟ್ಯಾಂಕರ್ ಕಳಚಿ ಬಿದ್ದಿದೆ. ಅದನ್ನು ಶನಿವಾರ ತೆರವು ಮಾಡಲಾಯಿತು.

ಶುಕ್ರವಾರ ಸಂಜೆ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಅನಿಲ ಸೋರಿಕೆ ಆಗಿಲ್ಲ. ಈ ಟ್ಯಾಂಕರ್ ಭಾರತ್ ಪೆಟ್ರೋಲಿಯಂಗೆ ಸೇರಿದ್ದಾಗಿದ್ದು, ಮಂಗಳೂರಿನಿಂದ ಮಹಾರಾಷ್ಟ್ರದ ಕಡೆ ಹೊರಟಿತ್ತು.

ವಿಷಯ ತಿಳಿದ ತಕ್ಷಣ ರಾಷ್ಟ್ರೀಯ ಹೆದ್ದಾರಿ ಉಸ್ತುವಾರಿ ಮುರುಗೇಶ ನಾಯ್ಕ ಟ್ಯಾಂಕರ್‌ನ ಚಾಲಕನನ್ನು ಸಿಗ್ನಲ್ ಬರುವ ಕಡೆ ಕರೆದುಕೊಂಡು ಹೋಗಿ ಮಾಲೀಕರನ್ನು ಸಂಪರ್ಕಿಸುವಂತೆ ಮಾಡಿದರು. ಹೆದ್ದಾರಿ ಗಸ್ತುವಾಹನಕ್ಕೆ ಮಾಹಿತಿ ನೀಡಿ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಂಡರು.

ಅಂಕೋಲಾದಿಂದ ಕ್ಷಿಪ್ರ ಕಾರ್ಯಾಚರಣೆ ಪಡೆಯ ತಂತ್ರಜ್ಞರು ಬಂದು ಪರಿಶೀಲಿಸಿ ಗ್ಯಾಸ್ ಸೋರಿಕೆ ಇಲ್ಲವೆಂದು ಖಚಿತಪಡಿಸಿದರು. ಶನಿವಾರ ಬೆಳಿಗ್ಗೆ ಎರಡು ಕ್ರೇನ್ ಬಳಸಿ ತಂತ್ರಜ್ಞರ ಸಮ್ಮುಖದಲ್ಲಿ ಮೇಲಕ್ಕೆತ್ತಿ ಟ್ರಾಲಿಗೆ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಟಾಯಿತು. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು